
ಬೆಳ್ತಂಗಡಿ: ಚಿರಂಜೀವಿ ಯುವಕ ಮಂಡಲ ಕಾನರ್ಪ ಕಡಿರುದ್ಯಾವರ ಇದರ 34ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮದ ನಿಮಿತ್ತ ಪೂರ್ವಭಾವಿ ಸಭೆಯನ್ನು ಯುವಕ ಮಂಡಲದ ವಠಾರದಲ್ಲಿ ನಡೆಸಲಾಯಿತು.
ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆ ಸಮಿತಿಯ ಅಧ್ಯಕ್ಷರಾಗಿ ರಾಘವೇಂದ್ರ ಭಟ್ ಪಣಿಕಲ್ ಹಾಗೂ ಕಾರ್ಯದರ್ಶಿಯಾಗಿ ಚಂದ್ರಶೇಖರ ಗುಂಡೂರು ರವರನ್ನು ಆಯ್ಕೆ ಮಾಡಲಾಯಿತು.
ಸಭೆಯಲ್ಲಿ ಯುವಕ ಮಂಡಲದ ಅಧ್ಯಕ್ಷರಾದ ಜನಾರ್ಧನ.ಕೆ, ಗೌರವಾಧ್ಯಕ್ಷರಾದ ಬಾಲಕೃಷ್ಣ ಗೌಡ ಮಾವಿನಕಟ್ಟೆ, ಸಂಚಾಲಕರಾದ ರಾಮಚಂದ್ರ.ಕೆ, ರವೀಂದ್ರ ಪೂಜಾರಿ, ಜಯರಾಜ್ ಸಾಲಿಯಾನ್, ರಾಜೇಂದ್ರ.ಎಂ, ರಾಜೇಶ.ಎಂ, ಜಯಂತಗೌಡ, ದಿನೇಶ್ ಪೂಜಾರಿ, ಗುರುರಾಜ್, ಸುದರ್ಶನ್, ಸುಧಾಕರ್, ಕಮಲಾಕ್ಷ, ಜಯೇಂದ್ರ, ಜಿನ್ನಪ್ಪಗೌಡ, ಸಂಜೀವ ಗೌಡ, ಜಗದೀಶ್ ನಾಯ್ಕ, ಪ್ರವೀಣ್, ಮಂಜುನಾಥ, ಬಾಲಕೃಷ್ಣ, ಚಂದ್ರಕಾಂತ, ಲಿಂಗಪ್ಪ, ಅಕ್ಷಯ್ ಕೃಷ್ಣ, ಆನಂದ ಗೌಡ, ಶ್ರೀಕೃಷ್ಣ ಭಟ್, ಚಂದ್ರಹಾಸ, ಲೋಕೇಶ್, ರಕ್ಷಿತ್, ಶ್ರೀಧರ್, ಉಪಸ್ಥಿತರಿದ್ದರು