ಬೆಂಗಳೂರು : ರಾಜ್ಯದಲ್ಲಿ ಫೆಬ್ರವರಿ 16 ರಿಂದ ಪದವಿ ಪೂರ್ವ ಹಾಗೂ ಪದವಿ ತರಗತಿಗಳು ಆರಂಭವಾಗಲಿವೆ ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಹೇಳಿದ್ದಾರೆ.
ರಾಜ್ಯದಲ್ಲಿ ಸಮವಸ್ತ್ರ ವಿಚಾರವಾಗಿ ವಿವಾದಗಳು ಎದ್ದಿದ್ದು ಈ ಸಂಬಂಧ ಸೋಮವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಮಹತ್ವದ ಸಭೆ ನಡೆದಿದ್ದು ಆ ಬಳಿಕ ಮಾತನಾಡಿದ ಸಚಿವರು ಹೈ ಕೋರ್ಟ್ ಸೂಚನೆಯಂತೆ ಬುಧವಾರ (ಫೆ.16) ದಿಂದ ಪದವಿ ಪೂರ್ವ ಮತ್ತು ಪದವಿ ತರಗಗತಿಗಳು ಆರಂಭವಾಗಲಿದೆ, ವಿದ್ಯಾರ್ಥಿಗಳು ಹೈ ಕೋರ್ಟ್ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಅದರಂತೆ ವಿದ್ಯಾರ್ಥಿಗಳು ಸಮವಸ್ತ್ರ ಧರಿಸಿ ತರಗತಿಗೆ ಹಾಜರಾಗಬೇಕು ಎಂದು ಸಚಿವರು ಹೇಳಿದ್ದಾರೆ.