ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಲಸಿಕೆಯ ಅಭಾವದಿಂದಾಗಿ ವಿಪಕ್ಷಗಳು ರಾಜ್ಯ ಸರ್ಕಾರದ ಮೇಲೆ ಬೆರಳು ಮಾಡಿ ತೋರಿಸುವಂತಾಗಿದೆ. ಲಸಿಕೆಯ ಅಭಾವದಿಂದ ರಾಜ್ಯ ತತ್ತಿರಿಸಿರುವ ಬೆನ್ನಲ್ಲೇ ಜಂಟಿ ಸುದ್ದಿಗೋಷ್ಠಿ ನಡೆಸಿದ ಕೆಪಿಸಿಸಿ ಅಧ್ಯಕ್ಷ ಹಾಗೂ ಮಾಜಿ ಸಚಿವ ಡಿ.ಕೆ. ಶಿವಕುಮಾರ್ ರಾಜ್ಯ ಸರ್ಕಾರದ ವಿರುದ್ಧ ಆರೋಪಗಳ ಸುರಿಮಳೆಯನ್ನೇ ಹರಿಸಿದ್ರು.
ಜನರ ಜೀವ ಉಳಿಸೋದು ಕಾಂಗ್ರೆಸ್ನ ಕರ್ತವ್ಯವಾಗಿದೆ. ಹೀಗಾಗಿ ನಾವು ಕೊರೊನಾ ಲಸಿಕೆ ಖರೀದಿಗೆ 100 ಕೋಟಿ ರೂಪಾಯಿಯನ್ನ ನೀಡಲಿದ್ದೇವೆ. ಸಿಎಂ, ಡಿಸಿಎಂ ಸೇರಿದಂತೆ ವಿವಿಧ ಸಚಿವರು ಜಾಗತಿಕ ಟೆಂಡರ್ ಮೂಲಕ ಲಸಿಕೆ ಖರೀದಿ ಮಾಡುತ್ತೇವೆ ಎಂದು ಹೇಳಿದ್ದಾರೆ. ಲಸಿಕೆ ಖರೀದಿಯ ಪ್ರತಿಯೊಂದು ವ್ಯವಹಾರವನ್ನೂ ರಾಜ್ಯ ಸರ್ಕಾರ ಪಾರದರ್ಶಕವಾಗಿ ಇಡಬೇಕು. ಸಿಎಂ ಬಿಎಸ್ವೈ ಅವರ ಕಣ್ಮುಚ್ಚಿಸಿ ಅವರ ಕೆಳಗಿನವರು ಅಕ್ರಮ ಮಾಡ್ತಿದ್ದಾರೆ.
ಆದರೆ ನಮ್ಮ ಹಾಗೂ ಜನತೆಯ ಮುಂದೆ ಲಸಿಕೆ ಖರೀದಿಯ ಪಾರದರ್ಶಕ ವ್ಯವಹಾರವನ್ನ ನೀಡಲೇಬೇಕು ಎಂದು ಆಗ್ರಹಿಸಿದರು.
ಪ್ರತಿಯೊಂದು ಶಾಸಕ ಹಾಗೂ ಸಂಸದರಿಗೆ ಕ್ಷೇತ್ರ ಅಭಿವೃದ್ಧಿಗೆಂದು 2 ಕೋಟಿ ರೂಪಾಯಿ ಹಣವನ್ನ ನೀಡಲಾಗುತ್ತದೆ. ಈ ಅಭಿವೃದ್ಧಿ ಹಣದಲ್ಲಿ ತಲಾ 1 ಕೋಟಿ ರೂಪಾಯಿಯನ್ನ ನೀಡಲು ರಾಜ್ಯ ಕಾಂಗ್ರೆಸ್ ನಿರ್ಧರಿಸಿದೆ. ಕಾಂಗ್ರೆಸ್ನ 95 ಶಾಸಕರು ಹಾಗೂ ಓರ್ವ ಸಂಸದರಿಂದ ತಲಾ 1 ಕೋಟಿ ರೂಪಾಯಿ ಹಣವನ್ನ ಕಾಂಗ್ರೆಸ್ ಲಸಿಕೆ ಖರೀದಿಗೆ ನೀಡಲಿದೆ. ಇದರ ಜೊತೆಯಲ್ಲಿ ಸಂಸದ ಹಾಗೂ ರಾಜ್ಯ ಸಭಾ ಸದಸ್ಯರಿಂದ ತಲಾ 5 ಕೋಟಿ ಹಣವನ್ನೂ ಕಾಂಗ್ರೆಸ್ ನೀಡಲಿದೆ.