ಬೆಂಗಳೂರು: ರಾಜ್ಯದಲ್ಲಿ ಮತ್ತೆ ಕೊರೋನಾ ಸೋಂಕಿನ ಆರ್ಭಟ ಮಿತಿಮೀರುತ್ತಿದ್ದು ಇಂದು ರಾಜ್ಯದಾದ್ಯಂತ ಮಂದಿಗೆ ವೈರಲ್ ವೈರಸ್ ಅಂಟಿಕೊಂಡಿದೆ.
ರಾಜ್ಯರಾಜಧಾನಿ ಬೆಂಗಳೂರಿನಲ್ಲಿ 1525ಸೋಂಕಿತರು ಪತ್ತೆಯಾದರೆ ಕಡಲತಡಿ ಮಂಗಳೂರಿನಲ್ಲಿಯೂ 196 ಸೋಂಕಿತರು ಪತ್ತೆಯಾಗಿದ್ದು ಪ್ರತಿದಿನ ಕೊರೋನಾ ಏರಿಕೆ ಸಂಖ್ಯೆಯಲ್ಲಿ ಅಗ್ರಸ್ಥಾನದಲ್ಲಿದೆ.
ರಾಜ್ಯದಲ್ಲಿಂದು 2627 ಸೋಂಕಿತರು ಪತ್ತೆಯಾಗಿದ್ದು ಸೋಂಕಿತರ ಸಂಖ್ಯೆ 38843 ಕ್ಕೆ ಏರಿಕೆಯಾಗಿದೆ.
ರಾಜ್ಯದಲ್ಲಿ ಮರಣ ಮೃದಂಗ ನಿಲ್ಲುವ ಲಕ್ಷಣಗಳು ಕಾಣುತ್ತಿಲ್ಲ ಇಂದು 71 ಮಂದಿ ಬಲಿಯಾಗಿದ್ದು ಸಾವಿನ ಸಂಖ್ಯೆ 684ಕ್ಕೆ ಏರಿಕೆಯಾಗಿದೆ.
ಬೆಂಗಳೂರು, ಮಂಗಳೂರು, ಧಾರವಾಡ, ಯಾದಗಿರಿ ಯಲ್ಲಿ ಶತಕದಾಟಿ ಮುನ್ನುಗಿದ್ದು ರಾಜ್ಯದ 28 ಜಿಲ್ಲೆಯಲ್ಲಿ ಇಂದು ಮಹಾಮಾರಿ ತನ್ನ ಆಟ ಮುಂದುವರೆಸಿದೆ.
ಜಿಲ್ಲಾವಾರು ಸೋಂಕಿತರ ವಿವರಗಳು: