ಈಗ ಪೋಟೋಶೂಟ್ ಇಲ್ಲದೇ ಮದುವೆ, ನಾಮಕರಣ, ಎಂಗೇಜ್ಮೆಂಟ್, ಸೀಮಂತ ನಡೆಯೋದೆ ಇಲ್ಲ. ಆದರೆ ಕೆಲ ಪೋಟೋಶೂಟ್ ಗಳು ಮಾತ್ರ ತಮ್ಮ ಕಾನ್ಸೆಪ್ಟ್ ಕಾರಣಕ್ಕೆ ವಿವಾದಕ್ಕೆ ಕಾರಣವಾಗುತ್ತವೆ. ಆದರೆ ಅಪ್ಪಟ ಕರಾವಳಿಯ ಪೋಸ್ಟ್ ವೆಡ್ಡಿಂಗ್ ಪೋಟೋಶೂಟ್ ಮಾತ್ರ ತನ್ನ ಕಾನ್ಸೆಪ್ಟ್ ಕಾರಣಕ್ಕೆ ಸಖತ್ ವೈರಲ್ ಆಗಿದ್ದು, ಟ್ರೆಡಿಶನಲ್ ಪೋಟೋಶೂಟ್ ಹೆಸರಿನಲ್ಲಿ ಮಿಂಚುತ್ತಿದೆ.
ಪೋಟೋಶೂಟ್ ಅಂದ್ರೆ ಹೊಸ ವಿನ್ಯಾಸದ ಬಟ್ಟೆ, ಪ್ರವಾಸಿತಾಣ ಹಾಗೂ ಅದ್ದೂರಿ ಬ್ಯಾಕ್ ಗ್ರೌಂಡ್ ಕಾಮನ್. ಆದರೆ ಕರಾವಳಿಯ ಈ ಜೋಡಿ ಮಾತ್ರ ನಮಗೆ ಅನ್ನ ನೀಡುವ ಭತ್ತದ ಗದ್ದೆಯಲ್ಲಿ ಸಾಂಪ್ರದಾಯಿಕ ಕೃಷಿ ಚಟುವಟಿಕೆಯ ಜೊತೆ ಪೋಟೋಶೂಟ್ ಮಾಡಿಸಿ ಗಮನ ಸೆಳೆದಿದೆ.
ಭತ್ತದ ಗದ್ದೆಯಲ್ಲಿ ನಾಟಿ ಮಾಡುವುದು, ಸಸಿಯನ್ನು ಕೀಳುವುದು, ಸಸಿಯನ್ನು ಬುಟ್ಟಿಯಲ್ಲಿ ಹೊರುವುದು ಇಂತಹ ಸಂದರ್ಭಗಳನ್ನೆ ಮರು ಸೃಷ್ಟಿ ಮಾಡಿ ಪೋಟೋಶೂಟ್ ಮಾಡಿಸಲಾಗಿದೆ. ಇದಕ್ಕೆ ವರ ಲುಂಗಿ, ಟೀಶರ್ಟ್, ಕಂಬಳಿಯ ಕೊಪ್ಪೆ ಜೊತೆ ಗಮನ ಸೆಳೆದರೇ, ವಧು ಸೀರೆ, ಕಂಬಳಿಯ ಕೊಪ್ಪೆಯ ಜೊತೆ ಟ್ರೆಡಿಶನಲ್ ಶೈಲಿನಲ್ಲಿ ಕಾಣಿಸಿಕೊಂಡಿದ್ದಾರೆ.
ಬಾನಿನಿಂದ ತುದಿಯಲ್ಲಿ ಆರಂಭವಾಗುವ ಬೆಟ್ಟ, ಅದರ ಬುಡದಲ್ಲಿ ಹಸಿರ ಗದ್ದೆ, ಮಳೆ ಸುರಿದೇಬಿಡುತ್ತೇ ಎಂಬಂತೆ ಕರಿಗಟ್ಟಿದ ಮೋಡ ಇದರ ನಡುವೆ ಹೊಸಜೋಡಿಯ ಸರಸ ಸಲ್ಲಾಪವನ್ನು ಸಾಂಪ್ರದಾಯಿಕ ಉಡುಪು ಹಾಗೂ ಕೃಷಿ ಕಾರ್ಯದ ಜೊತೆ ಸುಪ್ರೀತ್ ಬೈಂದೂರು ಎಚ್ ಸೆರೆಹಿಡಿದಿದ್ದಾರೆ.
ಮದುವೆ ಹಾಗೂ ಪ್ರವಾಸದ ಪೋಟೋಶೂಟ್ ನ ಎಕ್ಸಪರ್ಟ್ ಆಗಿರೋ ಸುಪ್ರೀತ್ ಬೈಂದೂರು ಈ ಪೋಟೋಶೂಟ್ ಕಾನ್ಸೆಪ್ಟ್ ಸಿದ್ಧಗೊಳಿಸಿದ್ದು, ಸೋಷಿಯಲ್ ಮೀಡಿಯಾದಲ್ಲಿ ಪೋಟೋಶೂಟ್ ಗೆ ಸಖತ್ ರೆಸ್ಪಾನ್ಸ್ ಬಂದಿದ್ದು, ಜನರು ವಧು- ವರರ ಅಭಿರುಚಿಯನ್ನು ಮೆಚ್ಚಿದ್ದಾರೆ.
ಹೇಗೇಗೋ ಪೋಟೋಶೂಟ್ ಮಾಡಿಸಿ ಹಿಂದೂ ಸಂಸ್ಕೃತಿಗೆ ಧಕ್ಕೆ ತರೋ ಜೋಡಿಗಳ ಮಧ್ಯೆ ಲೆನ್ಸ್ ಆರ್ಟ್ಸ್ ಸ್ಟುಡಿಯೋ ಕಾನ್ಸೆಪ್ಟ್ ಹಾಗೂ ಈ ಡಿಸೆಂಟ್ ಪೋಟೋಶೂಟ್ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.