ಬೆಳಗಾವಿ: ಬೆಳಗಾವಿ ಉಪ ತಹಶೀಲ್ದಾರ್ ವಿಜಯಶ್ರೀ ನಾಗನೂರೆ ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ. ಲೋಕಸಭಾ ಉಪಚುನಾವಣಾ ಫಲಿತಾಂಶದ ದಿನ ಎಲೆಕ್ಷನ್ ಕರ್ತವ್ಯ ನಿರ್ವಹಿಸಿದ್ದರು.
ಬೆಳಗಾವಿಯ ಯಮುನಾಪುರದ ನಿವಾಸಿಯಾಗಿದ್ದ ವಿಜಯಶ್ರೀ (53) ಅವರಿಗೆ ಮೇ 3ರಂದು ಕೊರೊನಾ ಸೋಂಕು ದೃಢಪಟ್ಟಿತ್ತು. 12 ದಿನಗಳಿಂದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
ಆದರೆ ಚಿಕಿತ್ಸೆ ಫಲಕಾರಿಯಗದೇ ಇಂದು ಮುಂಜಾನೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ವಿಜಯಶ್ರೀ ನಗನೂರೆ ಅವರ ಕುಟುಂಬದ 10 ಸದಸ್ಯರಿಗೆ ಕೊರೊನಾ ಸೋಂಕು ತಗುಲಿದ್ದು ಎಲ್ಲರೂ ಹೋಂ ಐಸೋಲೇಟ್ ಆಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.