ಕುಂದಾಪುರ: ಕೊರೋನಾ ಹೆಸರಲ್ಲಿ ಬೇರೆ ಬೇರೆ ಅವಾಂತರಗಳು ನಡೆಯುತ್ತಿದೆ. ಕೋವಿಡ್‌ನಿಂದ ಸತ್ತ ವ್ಯಕ್ತಿಯ ಶವದ ಬದಲು ಬೇರೆ ಮೃತ ವ್ಯಕ್ತಿಯ ಶವವನ್ನು ಕಳುಹಿಸಿದ ಘಟನೆ ಕುಂದಾಪುರದಲ್ಲಿ ಇಂದು ಬೆಳಿಗ್ಗೆ ನಡೆದಿದೆ. ಅಂಬುಲೆನ್ಸ್‌ನಲ್ಲಿ ಬಂದ ಬೇರೆ ಶವವನ್ನು ಕಂಡು ಬಂಧುಗಳು, ಮನೆಯವರು ಹಾಗೂ ಸಾರ್ವಜನಿಕರು ಕುಂದಾಪುರ ಸ್ಮಶಾನದಲ್ಲಿ ಪ್ರತಿಭಟನೆ ನಡೆಸಿದ್ದಾರೆ.
ಇದು ಉಡುಪಿ ಜಿಲ್ಲೆಯ ಕುಂದಾಪುರದ ಸ್ಮಶಾನದಲ್ಲಿ ಕಂಡುಬಂದ ವಿಚಿತ್ರ ದೃಶ್ಯ. ಯಾರದ್ದೋ ಹೆಸರಿನಲ್ಲಿ ಇಲ್ಲಿ ಬೇರೆ ಯಾರದ್ದೋ ದೇಹದ ಅಂತ್ಯ ಸಂಸ್ಕಾರಕ್ಕೆ ಇಲ್ಲಿ ಸಿದ್ದತೆ ನಡೆದಿತ್ತು.
ಕುಂದಾಪುರದ ನೇರಂಬಳ್ಳಿ ನಿವಾಸಿ 60 ವರ್ಷದ ವ್ಯಕ್ತಿಯೊಬ್ಬರು ಅನಾರೋಗ್ಯದಿಂದ ಕುಂದಾಪುರ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಆದರೆ ನಂತರ ಕೋವಿಡ್ ಪಾಸಿಟವ್ ಆಗಿದೆ ಎಂದು ಅವರನ್ನು ಉಡುಪಿ ಜಿಲ್ಲಾ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಇಂದು ಬೆಳಿಗ್ಗೆ ಉಡುಪಿ ಆಸ್ಪತ್ರೆಯಿಂದ ವ್ಯಕ್ತಿಯ ಮನೆಗೆ ಕರೆ ಮಾಡಿ, ನಿಮ್ಮ ತಂದೆ ಕೋವಿಡ್ ನಿಂದ ಸಾವನ್ನಪ್ಪಿದ್ದಾರೆ. ನಾವೇ ಅಂತ್ಯ ಸಂಸ್ಕಾರ ಮಾಡುತ್ತೇವೆ ಎಂದಿದ್ದರು. ನಂತರ ಮನೆಯವರ ಒತ್ತಾಯಕ್ಕೆ ಆರೋಗ್ಯ ಸಿಬ್ಬಂದಿಗಳು ಮೃತದೇಹವನ್ನು ಕುಂದಾಪುರ ಸ್ಮಶಾನಕ್ಕೆ ತಂದಿದ್ದರು.
ಸ್ಮಶಾನದಲ್ಲಿ ಮೃತದೇಹದ ಅಂತಿಮ ದರ್ಶನ ಪಡೆಯಲು ಮನೆಯವರು ಒತ್ತಾಯಿಸಿದಾಗ ಆರಂಭದಲ್ಲಿ ಅನುಮತಿ ನೀಡಿರಲಿಲ್ಲ. ಆದರೆ ಐವರಿಗೆ ಅವಕಾಶ ನೀಡಲಾಗಿತ್ತು. ಈ ವೇಳೆ ಮೃತದೇಹ ಅದಲು ಬದಲಾಗಿರುವುದು ಬೆಳಕಿಗೆ ಬಂದಿದೆ.
ಆರೋಗ್ಯ ಸಿಬ್ಬಂದಿಯ ನಿರ್ಲ್ಯಕ್ಷ್ಯದ ಕುರಿತು ವ್ಯಕ್ತಿಯ ಮನೆಯವರು ಆಸ್ಪತ್ರೆಯವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆರೋಗ್ಯ ಸಿಬ್ಬಂದಿಯ ನಿರ್ಲ್ಯಕ್ಷ್ಯದ ಕುರಿತು ವ್ಯಕ್ತಿಯ ಮನೆಯವರು ಆಸ್ಪತ್ರೆಯವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸ್ಮಶಾನದಲ್ಲಿ ನೂರಾರು ಮಂದಿ ಆಗಮಿಸಿದ್ದು, ಅಸಮಧಾನ ವ್ಯಕ್ತಪಡಿಸಿದ್ದಾರೆ. ತಾಲೂಕು ಅರೋಗ್ಯಾಧಿಕಾರಿ ನಾಗಭೂಷಣ್, ಸಹಾಯಕ ಆಯುಕ್ತ ರಾಜು ಸ್ಥಳಕ್ಕೆ ಭೇಟಿ ನೀಡಿದ್ದಾರೆ.