ದೀಪಾವಳಿ ಪ್ರಯುಕ್ತ “ಬಂದುತ್ವ ಬೆಸೆಯೋಣ, ದೊಸೆ ಸವಿಯೋಣ ಹಣತೆ ಹಚ್ಚೋಣ” ಪರಿಕಲ್ಪನೆಯಡಿ ಬೆಳ್ತಂಗಡಿ ಬೆಳಗಿಸೋಣ ಕಾರ್ಯಕ್ರಮ

ಬೆಳ್ತಂಗಡಿ: ಪ್ರಾಚೀನ ಸಂಪ್ರದಾಯ ಹಾಗೂ ಹಬ್ಬಗಳ ಮಹತ್ವವನ್ನು ಯುವ ಜನತೆಗೆ ಪ್ರಾತ್ಯಕ್ಷಿಕವಾಗಿ ಮನದಟ್ಟು ಮಾಡಿಕೊಡುವ ಸದಾಶಯದಿಂದ ಬೆಳ್ತಂಗಡಿ ಭಾರತೀಯ ಜನತಾ ಪಾರ್ಟಿ ಯುವ ಮೋರ್ಚಾ ವತಿಯಿಂದ ನ. 3ರಂದು ಬೆಳ್ತಂಗಡಿಯಲ್ಲಿ ದೀಪಾವಳಿ ದೋಸೆ ಹಬ್ಬ ಬೆಳ್ತಂಗಡಿ ಬಸ್ ನಿಲ್ದಾಣದ ಬಳಿ ಪೂರ್ವಾಹ್ನ 8 ಗಂಟೆಯಿಂದ ಆಯೋಜಿಸಲಾಗಿದೆ ಎಂದು‌ ಬಿ.ಜೆ.ಪಿ ಯುವ ಮೋರ್ಚಾ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಕರ್ನಾಟಕ ಸರ್ಕಾರದ ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಅವರು ದೋಸೆ ಹಬ್ಬಕ್ಕೆ ಚಾಲನೆ ನೀಡಲಿದ್ದಾರೆ. ರಾತ್ರಿ 7 ಗಂಟೆಗೆ ಸಮಾರೋಪ ಸಮಾರಂಭ ಜರಗಲಿದ್ದು, ಹಾಸನ ವಿಧಾನ ಸಭಾ ಕ್ಷೇತ್ರದ ಶಾಸಕ ಪ್ರೀತಂ ಗೌಡ ಭಾಗವಹಿಸಲಿದ್ದಾರೆ.

ಸಂಜೆ 5ರಿಂದ ಭಜನಾ ತಂಡಗಳಿಂದ ಭಜನಾ ಕಾರ್ಯಕ್ರಮ ನಡೆಯಲಿದ್ದು, 100 ಕೋಟಿ ಲಸಿಕೆ ವಿತರಣೆ ಅಂಗವಾಗಿ ಆರೋಗ್ಯ ಇಲಾಖೆಯ ಸಾಧನೆಯನ್ನು ಶ್ಲಾಘಿಸಲು ಆರೋಗ್ಯಕರ ಬೆಳ್ತಂಗಡಿಗಾಗಿ ಕೋವಿಡ್-19ರ ಸಂಕಷ್ಟ ಸಂದರ್ಭದಲ್ಲಿ ಶ್ರಮಿಸಿದ ಆರೋಗ್ಯ ಇಲಾಖೆಯ ಹಾಗೂ ಮುಂಚೂಣಿ ಕೋರೊನ ವಾರಿಯರ್ಸ್‌ಗೆ ಗೌರವಾರ್ಪಣೆ ನಡೆಯಲಿದೆ. ನಾಡಿನ ಒಳಿತಿಗಾಗಿ ಒಂದು ಸಾವಿರಕ್ಕೂ ಹೆಚ್ಚು ಹಣತೆ ಹಚ್ಚಿ, ಪ್ರಾರ್ಥಿಸಿ ಗೋಮಾತೆಗೆ ವೈಭವದ ಗೋ ಪೂಜೆ ಉತ್ಸವವನ್ನು ನಡೆಸಲಾಗುವುದು. ಬಳಿಕ ಜಗದೀಶ ಆಚಾರ್ಯ ಪುತ್ತೂರು ಅವರಿಂದ ಭಕ್ತಿಗಾನ ವೈಭವ ನಡೆಯಲಿದೆ.

ಶಾಸಕ ಹರೀಶ್ ಪೂಂಜ, ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್, ಬೆಳ್ತಂಗಡಿ ಬಿ.ಜೆ.ಪಿ ಮಂಡಲಾಧ್ಯಕ್ಷ ಜಯಂತ್ ಕೋಟ್ಯಾನ್ ಪದಾಧಿಕಾರಿಗಳು, ಸಕ್ರಿಯವಾಗಿ ಉಸ್ಥಿತರಿರಲಿದ್ದಾರೆ.

“ಬಂದುತ್ವ ಬೆಸೆಯೋಣ ಸೇರಿದಂತೆ ಬಿ.ಜೆ.ಪಿ ದೊಸೆ ಸವಿಯೋಣ ಹಣತೆ ಹಚ್ಚೋಣ” ಪರಿಕಲ್ಪನೆಯಡಿ ಬೆಳ್ತಂಗಡಿ ಬೆಳಗಿಸೋಣ ಕಾರ್ಯಕ್ರಮ ನಡೆಯಲಿದೆ ಎಂದುಬಿ.ಜೆ.ಪಿ ಯುವ ಮೋರ್ಚಾ ಅಧ್ಯಕ್ಷ ಯಶವಂತ ಗೌಡ, ಬೆಳಾಲು, ಪ್ರ.ಕಾರ್ಯದರ್ಶಿ ಗಳಾದ ಉಮೇಶ್ ಕುಲಾಲ್, ಗುರುವಾಯನಕೆರೆ ವಿನಿತ್ ಸಾವ್ಯ, ಮಂಡಲ ಯುವ ಮೋರ್ಚಾ ಪ್ರಭಾರಿ ಮಂಡಲ ಉಪಾಧ್ಯಕ್ಷ ಸೀತಾರಾಮ್ ಬೆಳಾಲು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Spread the love
  • Related Posts

    ದ.ಕ ಜಿಲ್ಲೆಯಲ್ಲಿ ಮುಂದುವರಿದ ಮಳೆ ಹಿನ್ನೆಲೆ ಆಗಸ್ಟ್ 30 ಪ್ರಾಥಮಿಕ ಪ್ರೌಢ ಶಾಲೆಗಳಿಗೆ ರಜೆ ಘೋಷಣೆ

    ಮಂಗಳೂರು: ಬಾರಿ ಮಳೆ ಹಿನ್ನೆಲೆಯಲ್ಲಿ 30/08/2025ನೇ ಶುಕ್ರವಾರ ದಕ್ಷಿಣಕನ್ನಡ ಜಿಲ್ಲೆಯಾದ್ಯಂತ ಅಂಗನವಾಡಿ, ಪ್ರಾಥಮಿಕ, ಪ್ರೌಢ ಶಾಲೆಗಳಿಗೆ ರಜೆ ಘೋಷಿಸಲಾಗಿದೆ ಎಂದು ಜಿಲ್ಲಾಡಳಿತ ಆದೇಶವನ್ನು ಹೊರಡಿಸಿದೆ. Spread the love

    Spread the love

    ಉಚಿತ ಟೈಲರಿಂಗ್ ತರಬೇತಿ ಉದ್ಘಾಟನೆ

    ಸಕಲೇಶಪುರ: ಹಾಸನ ಜಿಲ್ಲೆ ಸಕಲೇಶಪುರ ತಾಲೂಕಿನ ಹಾನುಬಾಳು ಗ್ರಾಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ ಸಕಲೇಶಪುರ ವತಿಯಿಂದ ಜ್ಞಾನ ವಿಕಾಸ ಕಾರ್ಯಕ್ರಮದಡಿಯಲ್ಲಿ ಉಚಿತ ಟೈಲರಿಂಗ್ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು. ಪರಮ ಪೂಜ್ಯ ಶ್ರೀ ಡಾ.ಡಿ ವಿರೇಂದ್ರ…

    Spread the love

    You Missed

    ದ.ಕ ಜಿಲ್ಲೆಯಲ್ಲಿ ಮುಂದುವರಿದ ಮಳೆ ಹಿನ್ನೆಲೆ ಆಗಸ್ಟ್ 30 ಪ್ರಾಥಮಿಕ ಪ್ರೌಢ ಶಾಲೆಗಳಿಗೆ ರಜೆ ಘೋಷಣೆ

    • By admin
    • August 29, 2025
    • 281 views
    ದ.ಕ ಜಿಲ್ಲೆಯಲ್ಲಿ ಮುಂದುವರಿದ ಮಳೆ ಹಿನ್ನೆಲೆ ಆಗಸ್ಟ್ 30 ಪ್ರಾಥಮಿಕ ಪ್ರೌಢ ಶಾಲೆಗಳಿಗೆ ರಜೆ ಘೋಷಣೆ

    ಉಚಿತ ಟೈಲರಿಂಗ್ ತರಬೇತಿ ಉದ್ಘಾಟನೆ

    • By admin
    • August 29, 2025
    • 45 views
    ಉಚಿತ ಟೈಲರಿಂಗ್ ತರಬೇತಿ ಉದ್ಘಾಟನೆ

    ಬಾರಿ ಮಳೆ ಹಿನ್ನೆಲೆಯಲ್ಲಿ ನಾಳೆ ದಕ್ಷಿಣಕನ್ನಡ ಜಿಲ್ಲೆಯಾದ್ಯಂತ ಅಂಗನವಾಡಿ, ಪ್ರಾಥಮಿಕ, ಪ್ರೌಢ ಶಾಲೆ,PUಕಾಲೇಜಿಗೆ ರಜೆ ಘೋಷಣೆ

    • By admin
    • August 28, 2025
    • 315 views
    ಬಾರಿ ಮಳೆ ಹಿನ್ನೆಲೆಯಲ್ಲಿ ನಾಳೆ ದಕ್ಷಿಣಕನ್ನಡ ಜಿಲ್ಲೆಯಾದ್ಯಂತ ಅಂಗನವಾಡಿ, ಪ್ರಾಥಮಿಕ, ಪ್ರೌಢ ಶಾಲೆ,PUಕಾಲೇಜಿಗೆ ರಜೆ ಘೋಷಣೆ

    ಬೆಳ್ತಂಗಡಿ ತಾಲೂಕಿನ ನಿರಂತರ ಮಳೆ ಹಿನ್ನೆಲೆಯಲ್ಲಿ ಪ್ರಾಥಮಿಕ, ಪ್ರೌಢ ಶಾಲೆಗೆ ರಜೆ ಘೋಷಣೆ

    • By admin
    • August 28, 2025
    • 53 views
    ಬೆಳ್ತಂಗಡಿ ತಾಲೂಕಿನ ನಿರಂತರ ಮಳೆ ಹಿನ್ನೆಲೆಯಲ್ಲಿ ಪ್ರಾಥಮಿಕ, ಪ್ರೌಢ ಶಾಲೆಗೆ ರಜೆ ಘೋಷಣೆ

    ನಾಡಿನ ವಿವಿಧೆಡೆ ಗಣೇಶೋತ್ಸವದ ಸಂಭ್ರಮ ಸಡಗರ ಒಂದೆಡೆ ವೀಕ್ಷಿಸಿ ಹಲವು ಗಣಪ

    • By admin
    • August 27, 2025
    • 110 views
    ನಾಡಿನ ವಿವಿಧೆಡೆ ಗಣೇಶೋತ್ಸವದ ಸಂಭ್ರಮ ಸಡಗರ ಒಂದೆಡೆ ವೀಕ್ಷಿಸಿ ಹಲವು ಗಣಪ

    ಶ್ರೀ ಮಹಾಗಣಪತಿ ದೇವಸ್ಥಾನ ಸುಂಕದ ಕಟ್ಟೆ ಅಳದಂಗಡಿ ಇದರ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾಗಿ ಶಶಿಧರ ಡೋಂಗ್ರೆ ಆಯ್ಕೆ

    • By admin
    • August 25, 2025
    • 52 views
    ಶ್ರೀ ಮಹಾಗಣಪತಿ ದೇವಸ್ಥಾನ ಸುಂಕದ ಕಟ್ಟೆ ಅಳದಂಗಡಿ ಇದರ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾಗಿ ಶಶಿಧರ ಡೋಂಗ್ರೆ  ಆಯ್ಕೆ