
ಬೆಂಗಳೂರು: ಧರ್ಮಸ್ಥಳ ಬರೀ ಶ್ರದ್ಧಾಭಕ್ತಿಯ ಕೇಂದ್ರವಾಗುವುದರ ಜತೆಗೆ, ಅದು ಸಮಾಜದ ಎಲ್ಲ ಸ್ತರದ ಜನರ ಬಾಳನ್ನು ಒಳಗೊಂಡ ಅಪರೂಪದ ಧರ್ಮಕ್ಷೇತ್ರ. ಅಂಥ ಕ್ಷೇತ್ರಕ್ಕೆ ಅರ್ಧ ಶತಮಾನಗಳ ಕಾಲ ನಾಯಕತ್ವವನ್ನು ಡಾ. ಡಿ. ವೀರೇಂದ್ರ ಹೆಗ್ಗಡೆಯವರು (Veerendra Heggade) ನೀಡಿದ್ದಾರೆ. ಜಾಲಿಯ ಮರಕ್ಕೆ ಯಾರೂ ಕಲ್ಲು ಹೊಡೆಯುವುದಿಲ್ಲ. ಸಿಹಿಯಾದ ಹಣ್ಣು ನೀಡುವ ಮರಕ್ಕೆ ಕಲು ಹೊಡೆಯುತ್ತಾರೆ. ಆದ್ದರಿಂದ ಯಾವ ಟೀಕೆಗಳಿಗೂ ಕಿವಿಗೊಡದೆ ಮುಂದುವರಿಯಿರಿ ಎಂದು ವಿಶ್ವವಾಣಿ ಪ್ರಧಾನ ಸಂಪಾದಕ ವಿಶ್ವೇಶ್ವರ ಭಟ್ (Vishweshwar Bhat) ಅವರು ಮಾರ್ಮಿಕವಾಗಿ ನುಡಿದರು.

ಡಾ. ಡಿ. ವೀರೇಂದ್ರ ಹೆಗ್ಗಡೆಯವರ ನಾಯಕತ್ವ ಗಮನಿಸಿದರೆ ದೊಡ್ಡ ಕಂಪನಿಗಳ ಸಿಇಒಗಳ ಕಾರ್ಯವೈಖರಿ ನೆನಪಾಗುತ್ತದೆ. ಹಾಗೆ ಧಾರ್ಮಿಕ, ಸಾಮಾಜಿಕ ಕಾರ್ಯಗಳಲ್ಲಿ ನಿರತರಾಗಿರುವುದರ ಜೊತೆಗೆ ಫೋಟೋಗ್ರಫಿ, ಹಳೆಯ ವಸ್ತುಗಳ ಸಂಗ್ರಹ ಮೊದಲಾದ ಅಪರೂಪದ ಗುಣಗಳನ್ನೂ ರೂಢಿಸಿಕೊಂಡಿದ್ದಾರೆ.ಬೆಂಗಳೂರಿನಲ್ಲಿ ಇಂದು (ಜುಲೈ 26) ನಡೆದ ವಿಶ್ವವಾಣಿ ಪ್ರಕಾಶನದ 8 ಕೃತಿಗಳ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಡಾ. ವೀರೇಂದ್ರ ಹೆಗ್ಗಡೆಯವರು ಕಾರ್ಯಕ್ರಮದಲ್ಲಿ ಭಾಗವಹಿಸಿ ಪುಸ್ತಕಗಳ ಬಿಡುಗಡೆ ಮಾಡಿದರು.
ಹೆಗ್ಗಡೆಯವರ ನಾಯಕತ್ವ ಗಮನಿಸಿದರೆ ದೊಡ್ಡ ಕಂಪನಿಗಳ ಸಿಇಒಗಳ ಕಾರ್ಯವೈಖರಿ ನೆನಪಾಗುತ್ತದೆ. ಹಾಗೆ ಧಾರ್ಮಿಕ, ಸಾಮಾಜಿಕ ಕಾರ್ಯಗಳಲ್ಲಿ ನಿರತರಾಗಿರುವುದರ ಜೊತೆಗೆ ಫೋಟೋಗ್ರಫಿ, ಹಳೆಯ ವಸ್ತುಗಳ ಸಂಗ್ರಹ ಮೊದಲಾದ ಅಪರೂಪದ ಗುಣಗಳನ್ನೂ ರೂಢಿಸಿಕೊಂಡಿದ್ದಾರೆ. ಅತ್ಯುತ್ತಮ ಓದುಗ ಹಾಗೂ ಲೇಖಕ ಸಹ ಆಗಿದ್ದಾರೆ. ಧರ್ಮೋತ್ಥಾನ ಟ್ರಸ್ಟ್‌ನ ಮೂಲಕ ನಾಡಿನಾದ್ಯಂತ 200ಕ್ಕೂ ಅಧಿಕ ದೇವಾಲಯಗಳ ಜೀರ್ಣೋದ್ಧಾರ ಮಾಡಿದ್ದಾರೆ ಎಂದು ವಿವರಿಸಿದರು.