ಧರ್ಮಸ್ಥಳ: ಅಪ್ರಾಪ್ತ ಬಾಲಕಿಯೊಬ್ಬಳನ್ನು ಮನೆಯಿಂದ ಪುಸಲಾಯಿಸಿ ಕರೆದುಕೊಂಡು ಹೋಗಿ ಬೆಳ್ತಂಗಡಿಯ ನಾಗವರ್ಮ ಮೆಲಂತಬೆಟ್ಟು ದೇವಾಸ್ಥಾನದಲ್ಲಿ ಅನದೀಕೃತವಾಗಿ ವಿವಾಹವಾಗಿರುವ ಆರೋಪದಲ್ಲಿ ನಿನ್ನೆ ಬಂಧಿತನಾಗಿರುವ ವ್ಯಕ್ತಿಗೆ ಕೊರೋನಾ ದೃಢವಾಗಿದೆ.
ಪ್ರಕರಣದ ತನಿಖೆ ನಡೆಸಿದ ಧರ್ಮಸ್ಥಳ ಠಾಣೆಯ ಪೊಲೀಸರಿಗೆ ಕೊರೋನಾ ಭೀತಿ ಶುರುವಾಗಿದ್ದು, ಈ ಹಿನ್ನಲೆಯಲ್ಲಿ ಐದು ಪೊಲೀಸ್ ಸಿಬ್ಬಂದಿಗಳನ್ನು ಕ್ವಾರಂಟೈನ್ ನಲ್ಲಿರಿಸಲಾಗಿದೆ.