ಬೆಂಗಳೂರು: ಹೊಸ ಕೊರೋನಾದ ಆತಂಕದ ಮಧ್ಯದಲ್ಲೆ ಜ1ರಿಂದ ಶಾಲೆಗಳನ್ನು ಆರಂಭಿಸಲು ಸರ್ಕಾರ ನಿರ್ಧರಿಸಿದೆ. ಆದ್ದರಿಂದ ಶಾಲಾ-ಕಾಲೇಜುಗಳ ಶೈಕ್ಷಣಿಕ ಚಟುವಟಿಕೆಗೆ ತೊಂದರೆಯಾಗದಂತೆ, ಶಿಕ್ಷಣ ಇಲಾಖೆಯಿಂದ 1- 10ನೇ ತರಗತಿಯವರೆಗೆ ಪಠ್ಯವನ್ನು ಕಡಿತಗೊಳಿಸಿದೆ. ಅಲ್ಲದೇ ಬೋಧನಾ ಅವಧಿ 120 ಗಂಟೆಗೆ ಇಳಿಕೆ ಮಾಡಿದೆ. ಜೊತೆಗೆ ಸೆಪ್ಟೆಂಬರ್ 1ರಿಂದ ಮಾರ್ಚ್ 31ರವರೆಗೆ ಅನ್ವಯವಾಗುವಂತೆ ಶೈಕ್ಷಣಿಕ ಚಟುವಟಿಕೆಗಳನ್ನು ನಿಗದಿ ಪಡಿಸಿದೆ. ಪ್ರಮುಖ ವಿಷಯಗಳನ್ನು ಬೋದಿಸುವಂತೆ ಪಠ್ಯ ನಿಗದಿ ಮಾಡಿದೆ.
ಗಣಿತ ವಿಷಯದ ಬೋಧನೆಯನ್ನು 180 ಗಂಟೆಯಿಂದ 120 ಗಂಟೆಗೆ ಇಳಿಕೆ ಮಾಡಿದೆ. ಇನ್ನು ಸಮಾಜ ವಿಜ್ಞಾನ, ವಿಜ್ಞಾನ, ಪರಿಸರ ಅಧ್ಯಯನ ವಿಷಯದ ಬೋಧನಾ ಅವಧಿಯನ್ನು ಕೂಡ 120 ಗಂಟೆಗೆ ಇಳಿಕೆ ಮಾಡಲಾಗಿದೆ ಎನ್ನಲಾಗಿದೆ.