ಬೆಳ್ತಂಗಡಿ: 2021-2022ನೇ ಸಾಲಿನ ಶೈಕ್ಷಣಿಕ ವರ್ಷದ ದ್ವೀತಿಯ ಪಿಯುಸಿಯ ಪ್ರಥಮ ಬ್ಯಾಚಿನಲ್ಲಿಯೇ 99.61%ಫಲಿತಾಂಶ ತರುವ ಮೂಲಕ ಶಿಕ್ಷಣ ಕ್ಷೇತ್ರದಲ್ಲಿ ಹೊಸಕ್ರಾಂತಿಯನ್ನು ಮೂಡಿಸುವಲ್ಲಿ ಗುರುವಾಯನಕೆರೆಯ ಎಕ್ಸೆಲ್ ಪದವಿ ಪೂರ್ವ ಕಾಲೇಜು ಯಶಸ್ವಿಯಾಗಿದೆ.
ತನ್ನ ದ್ವಿತೀಯ ಪಿಯುಸಿ ಯ ಪ್ರಥಮ ಬ್ಯಾಚಿನಲ್ಲೇ ಅತ್ಯುತ್ತಮ ಫಲಿತಾಂಶ ದಾಖಲಿಸುವುದರೊಂದಿಗೆ ಕಾಲೇಜಿನ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ಪ್ರಥಮ ಬ್ಯಾಚ್ ಫಲಿತಾಂಶದಲ್ಲೇ ರಾಜ್ಯಮಟ್ಟದಲ್ಲಿ 4ನೇಯ ರಾಂಕ್ ದಾಖಲಿಸಿದೆ.
ವಿಜ್ಞಾನ ವಿಭಾಗದ ಆಗ್ನೇಯ ಡಿ. ಎ ನಾಲ್ಕು ವಿಷಯಗಳಲ್ಲಿ ತಲಾ 100 ಅಂಕ ಗಳನ್ನು ಗಳಿಸುವುದರೊಂದಿಗೆ ಒಟ್ಟು 595 ಅಂಕ ಗಳಿಸಿ ರಾಜ್ಯಮಟ್ಟದಲ್ಲಿ ನಾಲ್ಕನೇ ಸ್ಥಾನ ಪಡೆದಿದ್ದಾರೆ.
ಹಾಗೆಯೇ ದೀಕ್ಷಾ.ಬಿ.ಎಸ್ 593 ಮತ್ತು ಉಜ್ವಲಾ. ಎನ್.ಕೆ 592 ಅಂಕ ಪಡೆದು ಸಂಸ್ಥೆಗೆ ಮತ್ತು ತಾಲೂಕಿಗೆ ಕೀರ್ತಿ ತಂದಿದ್ದಾರೆ. ಒಟ್ಟು 257 ವಿದ್ಯಾರ್ಥಿಗಳಲ್ಲಿ 33 ವಿದ್ಯಾರ್ಥಿಗಳು 95% ಅಧಿಕ ಅಂಕಗಳಿಸಿದ್ದಾರೆ.
70ವಿದ್ಯಾರ್ಥಿಗಳು 90 ಶೇಕಡಾಕ್ಕಿಂತ ಹೆಚ್ಚು ಅಂಕ ಗಳಿಸಿದ್ದಾರೆ. 155 ವಿದ್ಯಾರ್ಥಿಗಳು ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ. 95 ವಿದ್ಯಾರ್ಥಿಗಳು ಪ್ರಥಮ ದರ್ಜೆ ಹಾಗೂ 7 ವಿದ್ಯಾರ್ಥಿಗಳು ದ್ವಿತೀಯ ದರ್ಜೆ ಯಲ್ಲಿ ತೇರ್ಗಡೆ ಹೊಂದಿದ್ದಾರೆ. 2 ವಿದ್ಯಾರ್ಥಿಗಳು 4 ವಿಷಯಗಳಲ್ಲಿ, ಐದು ವಿದ್ಯಾರ್ಥಿಗಳು 3 ವಿಷಯಗಳಲ್ಲಿ,19 ವಿದ್ಯಾರ್ಥಿಗಳು 2 ವಿಷಯಗಳಲ್ಲಿ ಹಾಗೂ 50 ವಿದ್ಯಾರ್ಥಿಗಳು ತಲಾ ಒಂದು ವಿಷಯದಲ್ಲಿ ನೂರು ಅಂಕ ಪಡೆದಿದ್ದಾರೆ.
ಕಾಲೇಜು ಒಟ್ಟು 99.61ಶೇಕಡಾ ಅಂಕ ದಾಖಲಿಸಿದೆ. ಸಾಧನೆಗೈದ ವಿದ್ಯಾರ್ಥಿಗಳನ್ನು ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷರಾದ ಸುಮಂತ್ ಕುಮಾರ್ ಜೈನ್ ಹಾಗೂ ಇತರ ಪದಾಧಿಕಾರಿಗಳು, ಪ್ರಾಧ್ಯಾಪಕವೃಂದ ಅಭಿನಂದಿಸಿದ್ದಾರೆ.