
ಮಂಗಳೂರು: ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿಗಳಾದ ಆಂಟೋನಿ ಮರಿಯಪ್ಪ ಅವರನ್ನು ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಭೇಟಿಯಾಗಿ ಇತ್ತೀಚಿಗೆ ಕೊಕ್ಕಡದ ಬಳಿ ಆನೆ ಧಾಳಿಗೆ ಮೃತಪಟ್ಟ ಬಾಲಕೃಷ್ಣ ಶೆಟ್ಟಿ ಅವರ ಕುಟುಂಬಕ್ಕೆ ಪರಿಹಾರ ಹಾಗೂ ಮಗಳಿಗೆ ಉದ್ಯೋಗ ದೊರಕಿಸಿ ಕೊಡುವ ಬಗ್ಗೆ ಹಾಗೂ ಕಾಡು ಪ್ರಾಣಿಗಳಿಂದ ಕೃಷಿಕರಿಗೆ ಆಗುವ ತೊಂದರೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ಕುರಿತು ಮತ್ತು ಉಜಿರೆ -ಚಾರ್ಮಾಡಿ ಹಾಗೂ ಉಜಿರೆ -ಪೆರಿಯಶಾಂತಿ ರಸ್ತೆಯ ದ್ವೀಪಥ ಕಾಮಗಾರಿ ಆರಂಭ ಆಗುವ ಸಂಧರ್ಭದಲ್ಲಿ ಅರಣ್ಯ ಇಲಾಖೆಯಿಂದ ನೀರಕ್ಷೇಪಣೆ ನೀಡುವ ಬಗ್ಗೆ ಹಾಗೂ ಹಲವಾರು ಬಡವರು ಆಶ್ರಯ ಪಡೆದಿರುವ 94C ಜಾಗದಲ್ಲಿ ಅರಣ್ಯ ಇಲಾಖೆಯ ತೊಡಕುಗಳನ್ನು ನಿವಾರಿಸಿ ನೀರಕ್ಷೇಪಣೆ ನೀಡುವ ಕುರಿತು ಚರ್ಚಿಸಿದರು.