
ಮಂಗಳೂರು: ಬಿಗ್ಬಾಸ್ ಕನ್ನಡ ಸೀಸನ್ 11 ಯಶಸ್ವಿಯಾಗಿ ಚಾಲ್ತಿಯಲ್ಲಿದೆ. ಕೆಲವರು ಅಚ್ಚರಿಯ ಪ್ರದರ್ಶನ ಹೆಚ್ಚು ವಾರಗಳ ಕಾಲ ಉಳಿದುಕೊಂಡಿದ್ದಾರೆ. ಅವರಲ್ಲಿ ಧನರಾಜ್ ಸಹ ಒಬ್ಬರು. ಧನರಾಜ್, ಬಿಗ್ ಬಾಸ್ ಬಂದ ಆರಂಭದಲ್ಲಿ ಇವರು ಬೇಗನೆ ಎಲಿಮಿನೇಟ್ ಆಗುತ್ತಾರೆ ಎಂದು ಬಹಳ ಮಂದಿ ಅಂದುಕೊಂಡಿದ್ದರು, ಆದರೆ ಎಲ್ಲರೊಡನೆ ಸ್ನೇಹ ಉಳಿಸಿಕೊಂಡು ಧನರಾಜ್ ಹಲವು ವಾರಗಳ ಕಾಲ ಉಳಿದುಕೊಂಡು ಬಂದಿದ್ದಾರೆ. ಬಿಗ್ಬಾಸ್ ಮನೆಯಿಂದ ಅನಿವಾರ್ಯ ಕಾರಣದಿಂದ ಹೊರಗೆ ಹೋದ ಸುರೇಶ್ ಅವರೊಟ್ಟಿಗೆ ಧನರಾಜ್ಗೆ ಒಳ್ಳೆಯ ಗೆಳೆತನ ಇತ್ತು. ಮನೆಯಲ್ಲಿದ್ದಾಗ, ಧನರಾಜ್ ಮಗಳಿಗೆ ತೊಟ್ಟಿಲು ಉಡುಗೊರೆ ಕೊಡುವುದಾಗಿ ಸುರೇಶ್ ಹೇಳಿದ್ದರು. ಇದೀಗ ಬಿಗ್ಬಾಸ್ ಮನೆಯಿಂದ ಹೊರಗೆ ಹೋಗಿರುವ ಸುರೇಶ್, ಧನರಾಜ್ ಮನೆಗೆ ಭೇಟಿ ನೀಡಿ ಮಗಳಿಗೆ ಉಡುಗೊರೆ ಕೊಟ್ಟಿದ್ದಾರೆ.