ಸಾಧುಗಳ ಹತ್ಯೆ ಮಾಡಿದ ಮತಾಂಧರ ಮೇಲಿನ ಖಟ್ಲೆಯನ್ನು ತ್ವರಿತಗತಿ ನ್ಯಾಯಾಲಯದಲ್ಲಿ ನಡೆಸಿ ! ಇದು ಸಾಧುಗಳ ಮೇಲಲ್ಲ, ಕೇಸರಿಯ ಮೇಲೆ ಹಾಗೂ ಹಿಂದೂ ಧರ್ಮದ ಮೇಲಿನ ಹಲ್ಲೆ ! – ಹಿಂದೂ ಜನಜಾಗೃತಿ ಸಮಿತಿ ಖಂಡನೆ

ಉತ್ತರ ಪ್ರದೇಶ: ಅಬ್ದುಲಾಪುರ ಬಾಜಾರ (ಮಿರತ, ಉತ್ತರ ಪ್ರದೇಶ) – ಇಲ್ಲಿಯ ಒಂದು ಶಿವ ದೇವಸ್ಥಾನದ ಕಮಿಟಿಯ ಉಪಾಧ್ಯಕ್ಷ ಹಾಗೂ ಅರ್ಚಕ ಕಾರ್ಯ ಮಾಡುವ ಕಾಂತಿ ಪ್ರಸಾದ ಈ ಸಾಧುವನ್ನು ಮತಾಂಧ ಯುವಕರು ಹಾಡುಹಗಲೇ ಹತ್ಯೆ ಮಾಡಿದ್ದಾರೆ. ಹಿಂದೂ ಜನಜಾಗೃತಿ ಸಮಿತಿಯು ಈ ಹತ್ಯೆಯನ್ನು ತೀವ್ರವಾಗಿ ಖಂಡಿಸುತ್ತದೆ. ಸಾಧು ಕಾಂತಿ ಪ್ರಸಾದ ಇವರು ಕೇಸರಿ ವಸ್ತ್ರವನ್ನು ಹಾಕಿಕೊಂಡಿದ್ದರೆಂದು ಅನಸ ಕುರೈಶಿ ನಿಂದಿಸಿದನು ಹಾಗೂ ಇದನ್ನು ವಿರೋಧಿಸಿದ್ದರಿಂದ ಮತಾಂಧನು ಹಿಗ್ಗಾಮುಗ್ಗಾ ಥಳಿಸುತ್ತಾ ಆ ಸಾಧುವಿನ ಹತ್ಯೆ ಮಾಡಿದನು. ಇದರಿಂದ ಹಿಂದೂ ಬಹುಸಂಖ್ಯಾತ ಭಾರತದಲ್ಲಿ ಕೇಸರಿ ವಸ್ತ್ರ ಹಾಕುವವರನ್ನು ಗುರಿಯಾಗಿಸುತ್ತಿದ್ದಾರೆ, ಎಂಬುದು ಗಮನಕ್ಕೆ ಬರುತ್ತದೆ. ಇದು ಸಾಧುವಿನ ಮೇಲಿನ ಹಲ್ಲೆಯಾಗಿರದೇ ಕೇಸರಿಯ ಮೇಲಿನ ದಾಳಿಯಾಗಿದೆ, ಹಿಂದೂ ಧರ್ಮದ ಮೇಲಿನ ಹಲ್ಲೆಯಾಗಿದೆ, ಅನಸ ಕುರೈಶಿಯನ್ನು ಬಂಧಿಸಿದ್ದರೂ ಆತನ ಮೇಲಿನ ಖಟ್ಲೆಯನ್ನು ತ್ವರಿತಗತಿ (ಫಾಸ್ಟ್ ಟ್ರ್ಯಾಕ್) ನ್ಯಾಯಾಲಯದಲ್ಲಿ ನಡೆಸಿ ಅವನಿಗೆ ಕಠಿಣ ಶಿಕ್ಷೆಯಾಗಬೇಕು ಹಾಗೂ ಈ ಘಟನೆಯ ಹಿಂದೆ ಕೋಮುಭಾವನೆಯನ್ನು ಕೆರಳಿಸುವ ಸಂಚು ಇದೆಯೋ ಎಂಬುದನ್ನು ಪತ್ತೆ ಹಚ್ಚಬೇಕು, ಎಂದು ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ವಕ್ತಾರರಾದ ಶ್ರೀ. ರಮೇಶ ಶಿಂದೆಯವರು ಆಗ್ರಹಿಸಿದ್ದಾರೆ.

ಮೊದಲಿಗೆ ಪಾಲ್ಘರ್, ಬುಲಂದಶಹರ್, ನಾಂದೇಡ್ ಮತ್ತು ಈಗ ಮೀರತ್‌ನಲ್ಲಿ ಸನ್ಯಾಸಿಗಳ ಹತ್ಯಾ ಸರಣಿ ನಡೆಯುತ್ತಲೇ ಇದೆ. ಈ ಘಟನೆಗಳಿಂದ ಹಿಂದೂ ಸಮಾಜದಲ್ಲಿ ಆಕ್ರೋಶದ ಭಾವನೆ ಇದೆ. ಒಂದುವೇಳೆ ಈ ಘಟನೆ ಮುಸಲ್ಮಾನರ ಅಥವಾ ಇನ್ನೊಂದು ಸಮುದಾಯದ ವ್ಯಕ್ತಿಯ ವಿಷಯದಲ್ಲಿ ಸಂಭವಿಸಿದ್ದರೆ, ಜಾತ್ಯತೀತವಾದಿಗಳು ‘ಮಾಬ್ ಲಿಂಚಿಂಗ್’ ಹೇಳುತ್ತಾ ದೇಶದಲ್ಲಿ ಅಲ್ಲೋಲಕಲ್ಲೋಲ ಮಾಡಿ ಹಿಂದುತ್ವವನ್ನು ದೂಷಿಸುತ್ತಿದ್ದರು; ಆದರೆ ಮೃತಪಟ್ಟವರು ಹಿಂದೂ ಸಾಧು ಮತ್ತು ಹಂತಕ ಮುಸಲ್ಮಾನನಾಗಿದ್ದಾನೆ. ಆದ್ದರಿಂದ ಯಾವುದೇ ಪ್ರಗತಿಪರ ನಾಯಕನು ಖಂಡಿಸಿಲ್ಲ. ಇದು ಭಾರತದಲ್ಲಿ ಜಾತ್ಯತೀತತೆಯ ಸೋಲಾಗಿದೆ. ಉತ್ತರ ಪ್ರದೇಶದ ಮಾನ್ಯ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರು ಸಾಧುಗಳ ಹತ್ಯೆಯ ಮೂಲವನ್ನು ಪತ್ತೆ ಹಚ್ಚಿ ಹಿಂದೂಗಳಿಗೆ ನ್ಯಾಯ ನೀಡುತ್ತಾರೆ ಎಂದು ನಾವು ಆಶಿಸುತ್ತೇವೆ ಎಂದೂ ಶ್ರೀ. ಶಿಂದೆಯವರು ಪ್ರಕಟಣೆಯಲ್ಲಿ ಹೇಳಿಕೆ ನಿಡಿದ್ದಾರೆ

Spread the love
  • Related Posts

    ರುಡ್ ಸೆಟ್ ಸಂಸ್ಥೆ, ಉಜಿರೆಯಲ್ಲಿ ಉಚಿತ ಮಹಿಳೆಯರ ವಸ್ತ್ರ ವಿನ್ಯಾಸ ತರಬೇತಿ

    ಉಜಿರೆ: ಶ್ರೀ ಕ್ಷೇತ್ರ ಧರ್ಮಸ್ಥಳ ಸಮೀಪದಲ್ಲಿರುವ ರುಡ್ ಸೆಟ್ ಸಂಸ್ಥೆ, ಉಜಿರೆಯಲ್ಲಿ ಮಹಿಳೆಯರ ವಸ್ತ್ರ ವಿನ್ಯಾಸ ತರಬೇತಿ / Dress Designing (ಚೂಡಿದಾರ್, ಬ್ಲೌಸ್, ಗೌನ್‌, ಸಾರಿ ಸ್ಕರ್ಟ್, ನೈಟಿ, ಫ್ರಾಕ್ , ಸ್ಯಾರಿ ಫಾಲ್, ಸಾರಿ ಕುಚ್ಚು ಇತ್ಯಾದಿ) ತರಬೇತಿಯನ್ನು…

    Spread the love

    ಮೋಸ ಮೋಸ ಮಹಾಮೋಸ ಆನೆ ಮೇಲೆ ಕ್ಲಿಕ್ ಮಾಡಿ ಹಣ ಗೆಲ್ಲಿ ಸಂದೇಶ ರವಾನೆ, ಪಾವತಿಗೂ ಮುನ್ನಾ ಜಾಗೃತರಾಗಿ

    ಮೋಸ ಹೋಗುವವರು ಇರುವವರೆಗೂ ಮೋಸಮಾಡುವವರು ಜೀವಂತ ಇರುತ್ತಾರೆ ಹಾಗಂತಾ ನಾವು ನಮ್ಮ ಎಚ್ಚರಿಕೆಯಲ್ಲಿ ಇರಬೇಕು ಸ್ವಲ್ಪ ಯಮಾರಿದ್ರು ಖಾತೆಯಿಂದ ಮಾಯವಾಗಬಹುದು. ಹಣ ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಬೇರೆಬೇರೆ ರೀತಿಯಲ್ಲಿ ಹಣ ಕಳೆದುಕೊಂಡವರನ್ನು ಕಾಣಬಹುದು ಹಾಗೆ ಮೋಸ ಮಾಡುವವರು ಬೇರೆ ಬೇರೆ…

    Spread the love

    You Missed

    ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ವಿಧಿವಶ

    • By admin
    • December 26, 2024
    • 52 views
    ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ವಿಧಿವಶ

    ಜಮ್ಮು ಕಾಶ್ಮೀರದಲ್ಲಿ ಕಂದಕಕ್ಕೆ ಉರುಳಿದ ಸೇನಾ ವಾಹನ, ಕುಂದಾಪುರದ ಯೋಧ ಅನೂಪ್‌ ಹುತಾತ್ಮ

    • By admin
    • December 25, 2024
    • 94 views
    ಜಮ್ಮು ಕಾಶ್ಮೀರದಲ್ಲಿ ಕಂದಕಕ್ಕೆ ಉರುಳಿದ ಸೇನಾ ವಾಹನ, ಕುಂದಾಪುರದ ಯೋಧ ಅನೂಪ್‌ ಹುತಾತ್ಮ

    ಬೆಳ್ತಂಗಡಿ ವಕೀಲರ ಸಂಘದಿಂದ ಕ್ರಿಸ್ಮಸ್ ಹಬ್ಬದ ಆಚರಣೆ

    • By admin
    • December 17, 2024
    • 99 views
    ಬೆಳ್ತಂಗಡಿ ವಕೀಲರ ಸಂಘದಿಂದ ಕ್ರಿಸ್ಮಸ್ ಹಬ್ಬದ ಆಚರಣೆ

    ರುಡ್ ಸೆಟ್ ಸಂಸ್ಥೆ, ಉಜಿರೆಯಲ್ಲಿ ಉಚಿತ ಮಹಿಳೆಯರ ವಸ್ತ್ರ ವಿನ್ಯಾಸ ತರಬೇತಿ

    • By admin
    • December 15, 2024
    • 60 views
    ರುಡ್ ಸೆಟ್ ಸಂಸ್ಥೆ,  ಉಜಿರೆಯಲ್ಲಿ  ಉಚಿತ ಮಹಿಳೆಯರ ವಸ್ತ್ರ ವಿನ್ಯಾಸ ತರಬೇತಿ

    ಮೋಸ ಮೋಸ ಮಹಾಮೋಸ ಆನೆ ಮೇಲೆ ಕ್ಲಿಕ್ ಮಾಡಿ ಹಣ ಗೆಲ್ಲಿ ಸಂದೇಶ ರವಾನೆ, ಪಾವತಿಗೂ ಮುನ್ನಾ ಜಾಗೃತರಾಗಿ

    • By admin
    • December 14, 2024
    • 62 views
    ಮೋಸ ಮೋಸ ಮಹಾಮೋಸ ಆನೆ ಮೇಲೆ ಕ್ಲಿಕ್ ಮಾಡಿ ಹಣ ಗೆಲ್ಲಿ ಸಂದೇಶ ರವಾನೆ,  ಪಾವತಿಗೂ ಮುನ್ನಾ ಜಾಗೃತರಾಗಿ

    ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ ವೀರೇಂದ್ರ ಹೆಗ್ಗಡೆಯವರಿಂದ  ರಾಷ್ಟ್ರಪತಿಗಳ  ಭೇಟಿ

    • By admin
    • December 12, 2024
    • 144 views
    ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ ವೀರೇಂದ್ರ ಹೆಗ್ಗಡೆಯವರಿಂದ  ರಾಷ್ಟ್ರಪತಿಗಳ  ಭೇಟಿ