ವಿವಿಧ ಠರಾವುಗಳನ್ನು ಒಪ್ಪಿಗೆ ನೀಡಿ ೯ ನೇ ‘ಅಖಿಲ ಭಾರತೀಯ ಹಿಂದೂ ರಾಷ್ಟ್ರ ಅಧಿವೇಶನ’ ಉತ್ಸಾಹ ಪೂರ್ಣ ವಾತಾವರಣದಿಂದ ಸಮಾರೋಪ !

ಮಂಗಳೂರು: ಹಿಂದೂಗಳೇ, ಈಗ ಕಾಶಿ, ಮಥುರಾ ಹಾಗೂ ಹಿಂದೂ ರಾಷ್ಟ್ರ ಸ್ಥಾಪನೆ ಇವುಗಳಿಗಾಗಿ ಕೃತಿಶೀಲರಾಗಿ ! – ಶಾಸಕ ಶ್ರೀ. ಟಿ. ರಾಜಾಸಿಂಹ, ಭಾಗ್ಯನಗರ, ತೆಲಂಗಾಣ

ತ್ರಿವಳಿ ತಲಾಖ್ ನಿಷೇಧ, ಕಲಂ 370 ರದ್ದು ಪಡಿಸುವುದು ಹಾಗೂ ಶ್ರೀರಾಮಮಂದಿರದ ನಿರ್ಮಾಣ ಈ ಮೂರೂ ಅಂಶಗಳು ಪೂರ್ಣವಾಗಿವೆ. ಈಗ ಇನ್ನೂ 3 ಬಾಕಿ ಉಳಿದಿದೆ. ಅದೆಂದರೆ ಕಾಶಿಯಲ್ಲಿನ ವಿಶ್ವನಾಥ ದೇವಸ್ಥಾನ ಹಾಗೂ ಮಥುರಾದಲ್ಲಿನ ಶ್ರೀಕೃಷ್ಣ ದೇವಸ್ಥಾನ ಇವುಗಳನ್ನು ನಿರ್ಮಿಸುವುದು ಹಾಗೂ ಕೊನೆಯಲ್ಲಿ ಅಖಂಡ ಹಿಂದೂ ರಾಷ್ಟ್ರದ ಸ್ಥಾಪನೆ ಮಾಡುವುದು ! ಅಖಂಡ ಹಿಂದೂ ರಾಷ್ಟ್ರದ ಸ್ಥಾಪನೆ ಕೇವಲ ಮಾತನಾಡುವುದರಿಂದ ಆಗುವುದಿಲ್ಲ, ಬದಲಾಗಿ ಅದಕ್ಕಾಗಿ ಪ್ರತ್ಯಕ್ಷ ಕೃತಿ ಮಾಡಬೇಕಾಗಬಹುದು. ಆದ್ದರಿಂದ ಛತ್ರಪತಿ ಶಿವಾಜಿ ಮಹಾರಾಜ ಹಾಗೂ ಧರ್ಮವೀರ ಸಂಭಾಜಿ ಮಹಾರಾಜರ ಮಾರ್ಗವನ್ನು ಅನುಸರಿಸಬೇಕು. ಹಿಂದೂ ರಾಷ್ಟ್ರದಲ್ಲಿ ‘ಗೋಹತ್ಯೆ’, ‘ಲವ್ ಜಿಹಾದ್’, ‘ಲ್ಯಾಂಡ್ ಜಿಹಾದ್’ ನಂತಹ ಹಿಂದೂಗಳ ಮೇಲಿನ ಆಘಾತಗಳು ಇರುವುದಿಲ್ಲ. ಹಿಂದೂಗಳು ಜಾಗೃತ ಹಾಗೂ ಸಂಘಟಿತರಾಗಿ ಹಿಂದೂ ರಾಷ್ಟ್ರಕ್ಕಾಗಿ ಕೃತಿಶೀಲರಾಗಬೇಕು, ಎಂದು ಪ್ರಖರ ಹಿಂದುತ್ವನಿಷ್ಠ ಹಾಗೂ ತೆಲಂಗಾಣದ ಭಾಜಪದ ಶಾಸಕ ಶ್ರೀ. ಟಿ. ರಾಜಾಸಿಂಹ ಇವರು ಕರೆ ನೀಡಿದರು. ಅವರು ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಆಯೋಜಿಸಲಾಗಿದ್ದ ‘ಆನ್‌ಲೈನ್’ 9 ನೇ ‘ಅಖಿಲ ಭಾರತೀಯ ಹಿಂದೂ ರಾಷ್ಟ್ರ ಅಧಿವೇಶನ’ದ ಸಮಾರೋಪ ಸಮಾರಂಭದಲ್ಲಿ ಮಾತನಾಡುತ್ತಿದ್ದರು. ಈ ಅಧಿವೇಶನವನ್ನು ಸಮಿತಿಯ ‘ಯೂ-ಟ್ಯೂಬ್’ ಚಾನೆಲ್ ಹಾಗೂ ‘ಫೇಸ್‌ಬುಕ್ ಪೇಜ್’ ಮೂಲಕ 64 ಸಾವಿರಕ್ಕೂ ಹೆಚ್ಚು ಜನರು ಪ್ರತ್ಯಕ್ಷವಾಗಿ ನೋಡಿದರೆ, 2 ಲಕ್ಷ 47 ಸಾವಿರಕ್ಕೂ ಹೆಚ್ಚು ಜನರ ತನಕ ವಿಷಯ ತಲುಪಿದೆ.

ಈ ಸಮಯದಲ್ಲಿ ಅಯೋಧ್ಯೆಯ ‘ಶ್ರೀರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್’ ನ ಕೋಷಾಧ್ಯಕ್ಷ ಸ್ವಾಮಿ ಗೋವಿಂದ ದೇವಗಿರಿ ಮಹಾರಾಜರೂ ಉಪಸ್ಥಿತರಿದ್ದರು. ಅವರು, ಭಾರತವು ಸ್ವಯಂಭೂ ಹಿಂದೂ ರಾಷ್ಟ್ರವಾಗಿದೆ. ಛತ್ರಪತಿ ಶಿವಾಜಿ ಮಹಾರಾಜರೂ ಹಿಂದೂ ಸಾಮ್ರಾಜ್ಯದ ಸ್ಥಾಪನೆ ಮಾಡಿದ್ದರು. ಸ್ವಾತಂತ್ರ್ಯದ ನಂತರ ಮಾತ್ರ ಅಧಿಕಾರಕ್ಕೆ ಬರುವವರು ಹಿಂದೂವಿರೋಧಿ ವಿಚಾರವನ್ನು ಕಾಪಾಡಿದ್ದಾರೆ; ಆದರೆ ಮುಂದೆ ಹಿಂದೂ ರಾಷ್ಟ್ರವನ್ನು ಅಬಾಧಿತವಾಗಿಡುವುದು ಪ್ರತಿಯೊಬ್ಬ ಹಿಂದೂಗಳ ಜವಾಬ್ದಾರಿಯಾಗಿದೆ. ಅದಕ್ಕಾಗಿ ಸ್ವಾತಂತ್ರ್ಯವೀರ ಸಾವರಕರ ಇವರು ಹೇಳಿದಂತೆ ರಾಜಕಾರಣಿಗಳ ಹಿಂದೂಕರಣವಾಗುವುದು ಅಗತ್ಯವಿದೆ ಎಂದು ಹೇಳಿದರು.

ಈ ಸಮಯದಲ್ಲಿ ಸನಾತನ ಸಂಸ್ಥೆಯ ಧರ್ಮಪ್ರಸಾರಕ ಸದ್ಗುರು ನಂದುಕುಮಾರ ಜಾಧವ ಇವರು ಮಾತನಾಡುತ್ತಾ, ‘ನನ್ನ ಭಕ್ತರ ನಾಶ ಎಂದಿಗೂ ಆಗುವುದಿಲ್ಲ’ ಎಂಬುದು ಭಗವಂತನ ವಚನವಾಗಿದೆ, ಇದನ್ನು ನಾವು ಅನುಭವಿಸುತ್ತಿದ್ದೇವೆ. ಈಶ್ವರ ಮಾತ್ರ ಭಕ್ತರ ಕರೆಗೆ ಧಾವಿಸಿ ಬರುತ್ತಾನೆ. ಆದ್ದರಿಂದ ಮುಂಬರುವ ಆಪತ್ಕಾಲದಲ್ಲಿ ನಮ್ಮ ರಕ್ಷಣೆಯಾಗಲು ಈಶ್ವರನ ಭಕ್ತರಾಗಬೇಕು ಹಾಗೂ ಇತರರಿಗೂ ಸಾಧನೆಯನ್ನು ಮಾಡಲು ಸಹಾಯ ಮಾಡಬೇಕು’ ಎಂದು ಹೇಳಿದರು.

ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ಮಾರ್ಗದರ್ಶಕರಾದ ಸದ್ಗುರು(ಡಾ.) ಚಾರುದತ್ತ ಪಿಂಗಳೆಯವರು ಮಾತಮಾಡುತ್ತಾ, ಸದ್ಯದ ಆಪತ್ಕಾಲದಲ್ಲಿ ಜಗತ್ತು ಮೂರನೇ ಮಹಾಯುದ್ಧದ ಹೊಸ್ತಿಲಿನಲ್ಲಿದೆ. ಕೊರೋನಾ ಮಹಾಮಾರಿಯ ನಂತರ ಚೀನಾದ ವಿರುದ್ಧ ಅನೇಕ ದೇಶಗಳು ಒಟ್ಟಾಗಿವೆ. ವಿಶ್ವಯುದ್ಧ ಆರಂಭವಾದರೆ, ದೆಹಲಿ ಗಲಭೆ, ಶಾಹಿನಬಾಗ ಆಂದೋಲನ, ಸಿಎಎಯ ವಿರುದ್ಧದ ಹಿಂಸಾತ್ಮಕ ಅಂದೋಲನದಂತೆ ಭಾರತವಿರೋಧಿ ಶಕ್ತಿಗಳು ಜಾತಿ-ಧರ್ಮ ಇವುಗಳ ಹೆಸರಿನಲ್ಲಿ ಗೃಹಯುದ್ಧ ನಡೆಸುವ ಸಂಚನ್ನು ರೂಪಿಸುವ ಸಾಧ್ಯತೆಗಳಿವೆ. ಈ ಮುಂಬರುವ ಅರಾಜಕತೆಯ ಪರಿಸ್ಥಿತಿಯನ್ನು ಎದುರಿಸಲು ಹಿಂದುತ್ವನಿಷ್ಠರು ಅಗ್ನಿಶಮನ, ಪ್ರಥಮೋಪಚಾರ, ಆಪತ್ಕಾಲಿನ ಸಹಾಯಗಳು, ನಾಗರಿಕರ ರಕ್ಷಣೆ ಇತ್ಯಾದಿ ಆಪತ್ಕಾಲದ ಪರಿಸ್ಥಿತಿಯನ್ನು ನಿಭಾಯಿಸಲು ಪ್ರಶಿಕ್ಷಣ ತೆಗೆದುಕೊಳ್ಳುವುದು ಅವಶ್ಯಕತೆ ಇದೆ. ಕಾಲಮಹಾತ್ಮೆಗನುಸಾರ 2023 ಲ್ಲಿ ಹಿಂದೂ ರಾಷ್ಟ್ರದ ಸ್ಥಾಪನೆ ಖಂಡಿತ ಆಗಲಿದೆ. ಅದಕ್ಕಾಗಿ ಯೋಗದಾನ ನೀಡುವುದು, ಸಾಧನೆಯೇ ಆಗಿದೆ’ ಎಂದು ಹೇಳಿದರು.

ಈ ಅಧಿವೇಶನದಲ್ಲಿ ರಾಷ್ಟ್ರ ಮತ್ತು ಧರ್ಮ ರಕ್ಷಣೆಯ ವಿವಿಧ ಮಿಷಯಗಳ ಬಗ್ಗೆ ಸಮಾನ ಕೃತಿ ಕಾರ್ಯಕ್ರಮ ನಿರ್ಧರಿಸಲು ‘ಆನ್‌ಲೈನ್’ ಗುಂಪು ಚರ್ಚೆಯನ್ನೂ ತೆಗೆದುಕೊಳ್ಳಲಾಯಿತು. ಅದಕ್ಕಾಗಿ ವಿವಿಧ ರಾಜ್ಯಗಳಲ್ಲಿನ ಹಿಂದುತ್ವನಿಷ್ಠರ ವಿವಿಧ 16 ಗುಂಪುಗಳನ್ನು ಮಾಡಲಾಗಿತ್ತು ಈ ‘ಆನ್‌ಲೈನ್’ ಚರ್ಚೆಗಳಲ್ಲಿ ನೂರಾರು ಹಿಂದುತ್ವನಿಷ್ಠರು ಪಾಲ್ಗೊಂಡಿದ್ದರು. ಅಧಿವೇಶನದ ಕೊನೆಯಲ್ಲಿ ಹಿಂದೂ ಜನಜಾಗೃತಿ ಸಮಿತಿಯ ಜಳಗಾವ ಜಿಲ್ಲಾ(ಮಹಾರಾಷ್ಟ್ರ) ಸಮನ್ವಯಕರಾದ ಶ್ರೀ. ಪ್ರಶಾಂತ ಜುವೇಕರ ಇವರು ಹಿಂದೂ ರಾಷ್ಟ್ರದ ದೃಷ್ಟಿಯಲ್ಲಿ ಕೆಲವು ಠರಾವುಗಳನ್ನು ಓದಿದರು. ಈ ಠರಾವಿಗೆ ‘ಹರ ಹರ ಮಹಾದೇವ’ ಜಯಘೋಷ ಮಾಡುತ್ತಾ, ಅದೇರೀತಿ ‘ಕಮೆಂಟ್ ಬಾಕ್ಸ್’ನಲ್ಲೂ ‘ಹರ ಹರ ಮಹಾದೇವ’ ಪೋಸ್ಟ್ ಮಾಡುತ್ತಾ ಎಲ್ಲರೂ ಠರಾವಿಗೆ ಒಪ್ಪಿಗೆ ನೀಡಿದರು.

ಆನ್‌ಲೈನ್ ೯ ನೇ ‘ಅಖಿಲ ಭಾರತೀಯ ಹಿಂದೂ ರಾಷ್ಟ್ರ ಅಧಿವೇಶನದಲ್ಲಿ’ ಒಪ್ಪಿಗೆ ನೀಡಿದ್ದ ಠರಾವುಗಳು !
೧.
ಅಯೋಧ್ಯೆಯಲ್ಲಿ ನಿರ್ಮಾಣವಾಗುವ ಶ್ರೀರಾಮಮಂದಿರದಲ್ಲಿ ಹಿಂದೂಗಳಿಗಾಗಿ ಧರ್ಮಶಿಕ್ಷಣ ನೀಡಬೇಕು. ಅಲ್ಲಿಯ ಇತರ ದೇವಸ್ಥಾನಗಳು ಹಾಗೂ ಐತಿಹಾಸಿಕ ವಾರಸ್ಸುಗಳಾಗಿರುವ ಸ್ಥಳಗಳನ್ನೂ ಆಕ್ರಮಣದಿಂದ ಮುಕ್ತ ಮಾಡಿ ಅದರ ಜೀರ್ಣೋದ್ಧಾರ ಮಾಡಬೇಕು. ಧಾರ್ಮಿಕ ಅಸಮಾಧಾನವನ್ನು ತಡೆಗಟ್ಟಲು ಅಯೋಧ್ಯೆಯಲ್ಲಿ ಇತರ ಧರ್ಮಗಳ ಧಾರ್ಮಿಕ ಕಟ್ಟಡಗಳನ್ನು ನಿರ್ಮಿಸಲು ಅನುಮತಿಯನ್ನು ನೀಡಬಾರದು.


೨. ಹಿಂದೂಗಳ ಮೂಲಭೂತ ಅಧಿಕಾರಗಳ ಕಗ್ಗೊಲೆ ಮಾಡುವ ‘ಪ್ಲೇಸಸ್ ಆಫ್ ವರ್ಶಿಪ್ ಆಕ್ಟ್ 1991’ ಈ ಕಾನೂನನ್ನು ಕೂಡಲೇ ರದ್ದು ಪಡಿಸಿ ರಾಮಮಂದಿರದಂತೆ ಕಾಶಿ, ಮಥುರಾ ಇತ್ಯಾದಿಗಳಂತಹ ಮೊಗಲ ಆಕ್ರಮಣಕಾರರಿಂದಾಗಿ ಕಬಳಿಸಿದ್ದ ಹಿಂದೂಗಳ ಸಾವಿರಾರು ದೇವಸ್ಥಾನಗಳನ್ನು ಮತ್ತು ಭೂಮಿಯನ್ನು ಹಿಂದೂಗಳಿಗೆ ಒಪ್ಪಿಸಬೇಕು.


೩. ಎಲ್ಲರಿಗೆ ಸಮಾನ ಅಧಿಕಾರ ನೀಡಲು ಸಂವಿಧಾನದಲ್ಲಿ ‘ಸೆಕ್ಯುಲರ್’ ಶಬ್ಧವನ್ನು ತೆಗೆದು ‘ಸ್ಪಿರಿಚ್ಯುವಲ್’ ಶಬ್ಧ ಹಾಕಬೇಕು ಹಾಗೂ ಭಾರತವನ್ನು ‘ಹಿಂದೂ ರಾಷ್ಟ್ರ’ವೆಂದು ಘೋಷಿಸಬೇಕು.


೪. ‘ನೇಪಾಳ ಹಿಂದೂ ರಾಷ್ಟ್ರವೆಂದು ಘೋಷಿತವಾಗಬೇಕು’, ಎಂಬ ನೇಪಾಳದಲ್ಲಿನ ಹಿಂದೂಗಳ ಆಗ್ರಹವನ್ನು ಈ ಅಧಿವೇಶನವು ಸಂಪೂರ್ಣ ಬೆಂಬಲಿಸುತ್ತದೆ.


೫. ಕೇಂದ್ರಸರಕಾರವು ಹಿಂದೂ ಸಮಾಜದ ತೀವ್ರ ಭಾವನೆಯನ್ನು ಗಮನದಲ್ಲಿಸಿರಿ ‘ಇಡೀ ದೇಶದಲ್ಲಿ ಗೋವಂಶ ಹತ್ಯಾನಿಷೇಧ’ ಮತ್ತು ‘ಮತಾಂತರ ನಿಷೇಧ’ ಇವುಗಳ ಬಗ್ಗೆ ನಿರ್ಣಾಯಕ ಕಾನೂನುಗಳನ್ನು ಅಂಗೀಕರಿಸಬೇಕು.


. ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಶ್ರೀಲಂಕಾಗಳಲ್ಲಿನ ಹಿಂದೂಗಳ ಮೇಲಾಗುವ ದೌರ್ಜನ್ಯಗಳ ಬಗ್ಗೆ ಅಂತರರಾಷ್ಟ್ರೀಯ ಮಾನವಾಧಿಕಾರ ಸಂಘಟನೆ ಹಾಗೂ ಭಾರತ ಸರಕಾರಗಳ ಮೂಲಕ ತನಿಖೆ ನಡೆಸಿ ಅಲ್ಲಿನ ಅಲ್ಪಸಂಖ್ಯಾತ ಹಿಂದೂಗಳಿಗೆ ಸುರಕ್ಷೆಯನ್ನು ನೀಡಬೇಕು.


. ಕಾಶ್ಮೀರ ಕಣಿವೆಯಲ್ಲಿ ಸ್ವತಂತ್ರ ‘ಪನೂನ ಕಾಶ್ಮೀರ’ ಈ ಕೇಂದ್ರಾಡಳಿತ ಪ್ರದೇಶವನ್ನು ನಿರ್ಮಿಸಿ ನಿರಾಶ್ರಿತ ಕಾಶ್ಮೀರಿ ಹಿಂದೂಗಳಿಗೆ ಪುನರ್ವಸತಿ ಕಲ್ಪಿಸಬೇಕು.


೮. ತಮಿಳುನಾಡಿನ ಶ್ರೀ ನಟರಾಜ ದೇವಸ್ಥಾನದ ಸ್ವಾಧೀನವನ್ನು ರದ್ದು ಪಡಿಸುವ ಸರ್ವೋಚ್ಚ ನ್ಯಾಯಾಲಯದ ಆದೇಶಕ್ಕನುಸಾರ ದೇಶದಲ್ಲಿಯ ದೇವಸ್ಥಾನಗಳ ಸರಕಾರದ ಸ್ವಾಧೀನವನ್ನು ಕೂಡಲೇ ರದ್ದು ಪಡಿಸಿ ದೇವಸ್ಥಾನವನ್ನು ಭಕ್ತರಿಗೆ ಒಪ್ಪಿಸಬೇಕು.


. ಕೇಂದ್ರ ಸರಕಾರವು ತಕ್ಷಣವೇ ‘ಕೇಂದ್ರೀಯ ನಾಮಕರಣ ಆಯೋಗ’ವನ್ನು ಸ್ಥಾಪಿಸಿ ದೇಶಾದ್ಯಂತದ ನಗರಗಳು, ವಾಸ್ತು, ರಸ್ತೆಗಳು, ಸಂಗ್ರಹಾಲಯಗಳು ಮುಂತಾದವುಗಳಿಗಿರುವ ಪರಕೀಯ ಆಕ್ರಮಣಕಾರರ ಹೆಸರುಗಳನ್ನು ಬದಲಾಯಿಸಿ ಅವುಗಳಿಗೆ ಮೂಲ ಹೆಸರಿನಿಂದ ನಾಮಕರಣ ಮಾಡಬೇಕು.


೧೦. ‘ವೆಬ್‌ಸಿರಿಜ್’ನ ಮಾಧ್ಯಮದಿಂದ ಹಿಂದೂ ಧರ್ಮ, ದೇವತೆ, ಸಂತರು ಇತ್ಯಾದಿಗಳ ಸತತವಾಗುತ್ತಿರುವ ಘೋರ ಅವಮಾನ, ದೊಡ್ಡ ಪ್ರಮಾಣದಲ್ಲಿ ಆಗುತ್ತಿರುವ ಅಶ್ಲೀಲತೆ ಹಾಗೂ ಹಿಂಸೆಗಳ ಪ್ರಸಾರ ಇವುಗಳನ್ನು ಗಮನದಲ್ಲಿಟ್ಟುಕೊಂಡು ಸರಕಾರವು ‘ವೆಬ್‌ಸಿರಿಜ್’ನ ‘ಸೆನ್ಸ್‌ರ’ ಮಾಡಬೇಕು. ಅದೇರೀತಿ ಈ ಮೂಲಕ ಹಿಂದೂ ಧರ್ಮ ಹಾಗೂ ದೇವತೆಗಳ ಆಗುವ ಅವಮಾನದ ವಿರುದ್ಧ ಕಠಿಣ ಕ್ರಮಕೈಗೊಳ್ಳಲು ವಿಶೇಷ ಕಾನೂನನ್ನು ಕೂಡಲೇ ಅಂಗೀಕರಿಸಬೇಕು.


೧೧. ರಾಷ್ಟ್ರದ ಸುರಕ್ಷೆಯ ದೃಷ್ಟಿಯಿಂದ ಭಾರತದಲ್ಲಿ ಆಶ್ರಯ ನೀಡಿದ ರೋಹಿಂಗ್ಯಾ ಮುಸಲ್ಮಾನರಿಗೆ ಪುನಃ ಹಿಂದೆ ಕಳುಹಿಸಲು ಸರಕಾರವು ಕಾನೂನನ್ನು ರೂಪಿಸಬೇಕು.


೧೨. ದೆಹಲಿ ಗಲಭೆಯ ಸೂತ್ರದಾರ ಆಮ ಆದಮಿ ಪಕ್ಷದ ನಗರ ಸೇವಕ ತಾಹಿರ ಹುಸೇನ್, ಅದೇರೀತಿ ‘ಸಿಎಎ’ ಹಾಗೂ ‘ಎನ್‌ಆರ್‌ಸಿ’ಯ ಕಾಯ್ದೆಯ ವಿರುದ್ಧ ಶಾಹೀನಬಾಗನಂತಹ ಹಿಂಸಾತ್ಮಕ ಆಂದೋಲನಗಳನ್ನು ಮಾಡುವವರ ಮೇಲೆ ದೇಶದ್ರೋಹಿಯ ಮೊಕದ್ದಮೆಯನ್ನು ಹೂಡಬೇಕು.


೧೩. ಕಳೆದ ಕೆಲವು ವರ್ಷಗಳಲ್ಲಿ ಹಿಂದೂಯೇತರರು ಜನಸಂಖ್ಯೆಯ ವಿಸ್ಪೋಟವನ್ನು ನೋಡುತ್ತಾ ಎಲ್ಲ ಧರ್ಮೀಯರಿಗೆ ಜನಸಂಖ್ಯೆಯ ಸಮತೋಲನವನ್ನಿಡಲು ದೇಶದಲ್ಲಿ ಕೂಡಲೇ ‘ಜನಸಂಖ್ಯಾ ನಿಯಂತ್ರಣ ಕಾನೂನನ್ನು’ ಜಾರಿಗೊಳಿಸಬೇಕು.


೧೪. ಭಾರತದಲ್ಲಿ ‘ಎಫ್.ಎಸ್.ಎಸ್.ಎ.ಐ.’ ಹಾಗೂ ‘ಎಫ್.ಡಿ.ಎ.’ ನಂತಹ ಸರಕಾರಿ ಸಂಸ್ಥೆಗಳಿರುವಾಗ ಧಾರ್ಮಿಕ ಆಧಾರದಲ್ಲಿ ‘ಸಮನಾಂತರ ಅರ್ಥವ್ಯವಸ್ಥೆ’ ನಿರ್ಮಿಸುವ ‘ಹಲಾಲ್ ಸರ್ಟಿಫಿಕೆಶನ್’ನ ವ್ಯವಸ್ಥೆಯನ್ನು ಕೂಡಲೇ ನಿಲ್ಲಿಸಬೇಕು.


೧೫. ಯಾವುದೇ ಸಾಕ್ಷಿಗಳು ಇಲ್ಲದಿರುವಾಗ ಸೆರೆಮನೆಯಲ್ಲಿರುವ ಎಲ್ಲ ಹಿಂದುತ್ವನಿಷ್ಠರ ಮೇಲಿನ ಮೊಕದ್ದಮೆಗಳನ್ನು ನಡೆಸಲು ‘ವಿಶೇಷ ತ್ವರಿತಗತಿ ನ್ಯಾಯಾಲಯ’ದ ಸ್ಥಾಪನೆಯನ್ನು ಮಾಡಬೇಕು ಹಾಗೂ ಅಮಾಯಕ ಹಿಂದುತ್ವನಿಷ್ಠರಿಗೆ ನ್ಯಾಯ ಒದಗಿಸಬೇಕು.

Spread the love
  • Related Posts

    ವಿವಿಧ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ಕರ್ನಾಟಕದಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಅಂಗನವಾಡಿ, ಅಕ್ಷರ ದಾಸೋಹ, ಆಶಾ ನೌಕರರ ಪ್ರಮುಖರ ಸಭೆ ಆಯೋಜಿಸಿದ ಕೇಂದ್ರ ಸಚಿವ ಎಚ್ ಡಿ ಕೆ

    ನವದೆಹಲಿ: ಕೇಂದ್ರ ಸಚಿವರಾದ ಎಚ್ ಡಿ ಕುಮಾರಸ್ವಾಮಿ ಮೂವರು ವಿವಿಧ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ಕರ್ನಾಟಕದಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಅಂಗನವಾಡಿ, ಅಕ್ಷರ ದಾಸೋಹ, ಆಶಾ ನೌಕರರ ಪ್ರಮುಖರನ್ನು ನವದೆಹಲಿಗೆ ಕರೆಸಿ, ಅವರ ಜತೆಯಲ್ಲಿ ಕೇಂದ್ರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆಯ…

    Spread the love

    ಸಂಗಮ ಕ್ಷೇತ್ರ ಪಜಿರಡ್ಕ ಶ್ರೀ ಸದಾಶಿವೇಶ್ವರ ದೇವಸ್ಥಾನದ ನೂತನ ಧ್ವಜಸ್ತಂಭಕ್ಕೆ ಧರ್ಮಸ್ಥಳದಲ್ಲಿ ವಿಷೇಶ ಪೂಜೆ

    ಧರ್ಮಸ್ಥಳ: ಶ್ರೀ ಸದಾಶಿವೇಶ್ವರ ದೇವಸ್ಥಾನ ಸಂಗಮ ಕ್ಷೇತ್ರಕ್ಕೆ ಮುಂಚಾನ ಶ್ರೀ ಮಹಾದೇವಿಕೃಪಾ ಮನೆಯ ಸುಕನ್ಯಾ ಮತ್ತು ಜಯರಾಮ ರಾವ್ ಮತ್ತು ಮಕ್ಕಳು ಸಮರ್ಪಿಸಲಿರುವ ನೂತನ ಶಿಲಾಮಯ ಧ್ವಜಸ್ಥಂಭವು ಕಾರ್ಕಳದಿಂದ ಹೊರಟು ಬೆಳ್ತಂಗಡಿ ಮಾರ್ಗವಾಗಿ ಡಿ.4ರಂದು ಧರ್ಮಸ್ಥಳ ತಲುಪಿ ಧರ್ಮಸ್ಥಳ ಅಣ್ಣಪ್ಪ ಬೆಟ್ಟದಲ್ಲಿ…

    Spread the love

    You Missed

    ಜೇಸಿ ಉತ್ಸವ ತಾಲೂಕು ಮಟ್ಟದ ಚಿತ್ರಕಲಾ ಸ್ಪರ್ಧೆ: ಪುಷ್ಠಿ ಮುಂಡಾಜೆ ಪ್ರಥಮ

    • By admin
    • December 8, 2025
    • 16 views
    ಜೇಸಿ ಉತ್ಸವ ತಾಲೂಕು ಮಟ್ಟದ ಚಿತ್ರಕಲಾ ಸ್ಪರ್ಧೆ: ಪುಷ್ಠಿ ಮುಂಡಾಜೆ ಪ್ರಥಮ

    ವಿವಿಧ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ಕರ್ನಾಟಕದಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಅಂಗನವಾಡಿ, ಅಕ್ಷರ ದಾಸೋಹ, ಆಶಾ ನೌಕರರ ಪ್ರಮುಖರ ಸಭೆ ಆಯೋಜಿಸಿದ ಕೇಂದ್ರ ಸಚಿವ ಎಚ್ ಡಿ ಕೆ

    • By admin
    • December 4, 2025
    • 34 views
    ವಿವಿಧ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ಕರ್ನಾಟಕದಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಅಂಗನವಾಡಿ, ಅಕ್ಷರ ದಾಸೋಹ, ಆಶಾ ನೌಕರರ ಪ್ರಮುಖರ ಸಭೆ ಆಯೋಜಿಸಿದ ಕೇಂದ್ರ ಸಚಿವ ಎಚ್ ಡಿ ಕೆ

    ಸಂಗಮ ಕ್ಷೇತ್ರ ಪಜಿರಡ್ಕ ಶ್ರೀ ಸದಾಶಿವೇಶ್ವರ ದೇವಸ್ಥಾನದ ನೂತನ ಧ್ವಜಸ್ತಂಭಕ್ಕೆ ಧರ್ಮಸ್ಥಳದಲ್ಲಿ ವಿಷೇಶ ಪೂಜೆ

    • By admin
    • December 4, 2025
    • 55 views
    ಸಂಗಮ ಕ್ಷೇತ್ರ ಪಜಿರಡ್ಕ ಶ್ರೀ ಸದಾಶಿವೇಶ್ವರ ದೇವಸ್ಥಾನದ ನೂತನ ಧ್ವಜಸ್ತಂಭಕ್ಕೆ ಧರ್ಮಸ್ಥಳದಲ್ಲಿ ವಿಷೇಶ ಪೂಜೆ

    ಸೇವಾ ಭಾರತಿಯ ನೂತನ ಕಾರ್ಯಾಲಯ ಸೇವಾನಿಕೇತನ’ದ ಉದ್ಘಾಟನೆ ಹಾಗೂ 21ನೇ ವರ್ಷದ ಸಂಭ್ರಮ ಕಾರ್ಯಕ್ರಮ

    • By admin
    • December 4, 2025
    • 35 views
    ಸೇವಾ ಭಾರತಿಯ ನೂತನ ಕಾರ್ಯಾಲಯ ಸೇವಾನಿಕೇತನ’ದ ಉದ್ಘಾಟನೆ ಹಾಗೂ 21ನೇ ವರ್ಷದ ಸಂಭ್ರಮ ಕಾರ್ಯಕ್ರಮ

    ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ ವೀರೇಂದ್ರ ಹೆಗ್ಗಡೆಯವರಿಂದ ಉಪರಾಷ್ಟ್ರಪತಿ ಭೇಟಿ

    • By admin
    • December 4, 2025
    • 43 views
    ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ ವೀರೇಂದ್ರ ಹೆಗ್ಗಡೆಯವರಿಂದ ಉಪರಾಷ್ಟ್ರಪತಿ ಭೇಟಿ

    ಯುವಜನತೆ ದುಶ್ಚಟಗಳಿಂದ ದೂರವಿದ್ದು ಸ್ವಾಸ್ಥ್ಯ ಸಮಾಜ ನಿರ್ಮಾಣಕ್ಕೆ ಕೈಜೋಡಿಸಿ: ಡಾ.ನವೀನ್ ಚಂದ್ರ ಶೆಟ್ಟಿ

    • By admin
    • December 2, 2025
    • 72 views
    ಯುವಜನತೆ ದುಶ್ಚಟಗಳಿಂದ ದೂರವಿದ್ದು ಸ್ವಾಸ್ಥ್ಯ ಸಮಾಜ ನಿರ್ಮಾಣಕ್ಕೆ ಕೈಜೋಡಿಸಿ: ಡಾ.ನವೀನ್ ಚಂದ್ರ ಶೆಟ್ಟಿ