ಹಾಡಹಗಲೇ ಮನೆಯಿಂದ ನಗದು ಸಹಿತ ಚಿನ್ನಾಭರಣ ಕಳವುಗೈದ ಪ್ರಕರಣ: ಕಳವಾದ ನಗದು, ಚಿನ್ನಾಭರಣಗಳ ಸಹಿತ ಮೂವರು ಆರೋಪಿಗಳ ಬಂಧನ

ಬೆಳ್ತಂಗಡಿ : ಹಾಡು ಹಗಲೇ ಇಂದಬೆಟ್ಟುವಿನ ಮನೆಯಿಂದ 5,200 ರೂ. ನಗದು ಸಹಿತ 1205,200 ರೂ. ಮೌಲ್ಯದ 40 ಪವನ್ ಚಿನ್ನಾಭರಣ ಕಳವು ನಡೆಸಿದ ಪ್ರಕರಣದ ತನಿಖೆ ನಡೆಸಿದ ಬೆಳ್ತಂಗಡಿ ಪೊಲೀಸರು ಮೂರು ಮಂದಿ ಆರೋಪಿಗಳನ್ನು ಬಂಧಿಸಿ, ಕಳವಾದ ನಗದು ಸಹಿತ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ನಾವೂರು ಗ್ರಾಮದ ನಿರಿಂದಿ ಮನೆ ನಿವಾಸಿ ಅಬ್ದುಲ್ ರಹಿಮಾನ್ ಎಂಬವರ ಪುತ್ರ ಮಹಮ್ಮದ್ ಸ್ವಾಲಿ ( 26 ವರ್ಷ), ಲಾಯಿಲ ಗ್ರಾಮದ ಕುಂಟಿನಿ ಮನೆ ಅಬ್ಬಾಸ್ ಎಂಬರ ಪುತ್ರ ಯಾಹ್ಯಾ ( 32 ವರ್ಷ), ನಾವೂರು ಗ್ರಾಮದ ಕಿರ್ನಡ್ಕ ನಿವಾಸಿ ಹುಸೈನ್ ಎಂಬವರ ಪುತ್ರ ಬಿ.ಹೆಚ್ ನೌಫಲ್ (27 ವರ್ಷ) ಬಂಧಿತ ಆರೋಪಿಗಳು.

ಅ.31 ರಂದು ಇಂದಬೆಟ್ಟು ಗ್ರಾಮದ ಬಂಗಾಡಿ ದೇರಾಜೆ ಮನೆ ನಿವಾಸಿ ಮಹಮ್ಮದ್ ಎಂಬವರ ಮನೆಯಿಂದ ಮನೆಯಲ್ಲಿ ಯಾರೂ ಇಲ್ಲದ ವೇಳೆ ಮನೆಗೆ ನುಗ್ಗಿ ಮನೆಯ ಗೋದ್ರೇಜ್ ನಲ್ಲಿಟ್ಟಿದ್ದ ಐದು ಪವನಿನ ಚಿನ್ನದ ಚೈನ್ 1, ಒಂದು ವವನಿನ ಚಿನ್ನದ ಸಣ್ಣ ಚೈನ್ 1, ಮಕ್ಕಳ ಚೈನ್ 2, ತಲಾ ಒಂದು ಒಂದು ವವನಿನ ಚಿನ್ನದ ಕಾಯಿನ್ಸ್ 4 , ತಲಾ ನಾಲ್ಕು ಪವನಿನ ಚಿನ್ನದ ಬಿಸ್ಕಟ್ 4, ಎರಡು ವವನಿನ ಚಿನ್ನದ ಗಟ್ಟಿ 1, 13ಪವನಿನ ಚಿನ್ನದ ನೆಕ್ಲೀಸ್ 1, ಒಂದು ಒಂದೂವರೆ ಪವನಿನ ಚಿನ್ನದ ವವನಿನ ಚಿನ್ನದ ತುಂಡಾದ ಬಳ ಹಾಗೂ ಪೆಂಡೆಂಟ್ 1, ಅರ್ಧ ಪವನಿನ ಚಿನ್ನದ ಮಗುವಿನ ಕಿವಿ ಓಲೆ 1, ಅರ್ಧ ಪವನಿನ ಚಿನ್ನದ ಬ್ರಾಸ್ ಲೈಟ್ 1, ಸೇರಿದಂತೆ ಸುಮಾರು 12,05,200ರೂಪಾಯಿ ಮೌಲ್ಯದ ವಿವಿಧ ರೀತಿಯ 40 ಪವನ್ ಚಿನ್ನಾಭರಣಗಳು ಮತ್ತು ನಗದು ಹಣ 5200 ರೂಪಾಯಿ ಕಳವು ಮಾಡಿದ್ದು, ಈ ಬಗ್ಗೆ ಮಹಮ್ಮದ್ ರವರು ನೀಡಿದ ದೂರಿನಂತೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಪ್ರಕರಣದ ತೀವ್ರ ತನಿಖೆ ನಡೆಸಿದ ಬೆಳ್ತಂಗಡಿ ಪೊಲೀಸರು ಇಂದಬೆಟ್ಟು ಗ್ರಾಮಕ್ಕೆ ಅಂದು ಬಂದ ಅಪರಿಚಿತರ ಮಾಹಿತಿ ಕಲೆ ಹಾಕಿದಾಗ ಬೈಕ್‌ನಲ್ಲಿ ಹೆಲ್ಮೆಟ್ ಹಾಕಿ ಇಬ್ಬರು ಬಂದಿರುವ ಮಾಹಿತಿ ಲಭಿಸಿತು. ಇದರ ಬಗ್ಗೆ ಸಿಸಿ ಟಿ.ವಿ ಹಾಗೂ ಇತರ ಮೂಲಗಳಿಂದ ಮಾಹಿತಿ ಕಲೆ ಹಾಕಿ ಇದೀಗ ಮೂರು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.

ಕಾರ್ಯಚರಣೆಯಲ್ಲಿ ದ.ಕ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಸೋನವನೆ ಋಷಿಕೇಶ್ ಭಗವಾನ್, ಶಿವಕುಮಾರ್ ಗುಣಾರೆ, ಹೆಚ್ಚುವರಿ ಪೊಲೀಸ್ ಅಧೀಕ್ಷಕರು ರವರುಗಳ ನಿರ್ದೇಶನದಂತೆ, ಶಿವಾಂಶು ರಜಪೂತ್ ಬಂಟ್ವಾಳ ಸಹಾಯಕ ಪೊಲೀಸ್ ಅಧೀಕ್ಷರು ರವರ ಸೂಚನೆಯಂತೆ ಈ ಪ್ರಕರಣದ ತನಿಖಾಧಿಕಾರಿಯಾದ ಬೆಳ್ತಂಗಡಿ ವೃತ್ತ ನಿರೀಕ್ಷಕರಾದ ಶಿವಕುಮಾರ ಬಿ, ಬೆಳ್ತಂಗಡಿ ಪೊಲೀಸ್ ಠಾಣಾ ಪಿ.ಎಸ್.ಐ ನಂದ ಕುಮಾರ್, ಪ್ರೊ.ಪಿಎಸ್‌ಐ ಮೂರ್ತಿ, ಎಎಸೈ ದೇವಪ್ಪ ಎಂಕೆ, ಸಿಬ್ಬಂದಿಗಳಾದ ಲಾರೆನ್ಸ್ ರಾಜೇಶ್ ಎನ್, ವೃಷಭ, ಪ್ರಮೋದ್ ನಾಯ್ಕ, ಇಬ್ರಾಹಿಂ ಗರ್ಡಾಡಿ,ಲತೀಫ್, ವಿಜಯ ಕುಮಾರ್ ರೈ, ವೆಂಕಟೇಶ್, ಬಸವರಾಜ್, ಚರಣ್, ಅವಿನಾಶ್, ವಾಹನ ಚಾಲಕರಾದ ಮಹಮ್ಮದ್ ಆಸೀಫ್, ಸತೀಶ್, ತಾಂತ್ರಿಕ ಸಿಬ್ಬಂದಿಗಳಾದ ದಿವಾಕರ, ಸಂಪತ್ ಕುಮಾರ್ ಪಾಲ್ಗೊಂಡಿದ್ದರು.

ಆರೋಪಿಗಳಿಂದ ಕೃತ್ಯಕ್ಕೆ ಉಪಯೋಗಿಸಿದ ಅಲ್ಟೊ ಕಾರು, ಪಲ್ಸರ್ ಎನ್ ಎಸ್ ಮೋಟಾರು ಸೈಕಲ್, ನಾಲ್ಕು ಮೊಬೈಲ್ ಹ್ಯಾಂಡ್ ಸೆಟ್ ಇವುಗಳ ಒಟ್ಟು ಮೌಲ್ಯ 1,96,500 ರೂ.ಗಳು, ಹಾಗೂ ಕಳವಾದ 12,05,200 ರೂಪಾಯಿ ಮೌಲ್ಯದ 320 ಗ್ರಾಂ ಚಿನ್ನಾಭರಣಗಳು, ನಗದು 1230 ರೂ. ಗಳನ್ನು ವಶಪಡಿಸಿಕೊಳ್ಳಲಾಗಿದೆ.

ಸ್ವಾಧೀನ ಪಡಿಸಿಕೊಂಡ ಸ್ವತ್ತುಗಳ ಒಟ್ಟು ಮೌಲ್ಯ 12,75,930ರೂಪಾಯಿ ಆಗಿದ್ದು, ಆರೋಪಿಗಳನ್ನು ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಪ್ರಕರಣವನ್ನು ಶೀಘ್ರವಾಗಿ ಪತ್ತೆ ಹಚ್ಚಿದ ಬೆಳ್ತಂಗಡಿ ಪೊಲೀಸರಿಗೆ ದ.ಕ ಜಿಲ್ಲಾ ಎಸ್.ಪಿ ಯವರು ವಿಶೇಷ ಬಹುಮಾನ ಘೋಷಿಸಿದ್ದಾರೆ.

Spread the love
  • Related Posts

    ಕೂಲಿ ಕಾರ್ಮಿಕರನ್ನು ಕರೆದೊಯ್ದುತ್ತಿದ್ದ ವೇಳೆ ಚಾಲಕನ ನಿಯಂತ್ರಣ ತಪ್ಪಿ ಕಾಲುವೆಗೆ ಉರುಳಿದ ಟಾಟಾ ಏಸ್

    ರಾಯಚೂರು: ಟಾಟಾ ಏಸ್ ಗೂಡ್ಸ್ ವಾಹನದಲ್ಲಿ ಕೂಲಿ ಕಾರ್ಮಿಕರನ್ನು ಕೆಲಸಕ್ಕೆ ಕರೆದುಕೊಂಡು ಹೋಗುವಾಗ ಚಾಲಕನ ನಿಯಂತ್ರಣ ತಪ್ಪಿ ಕಾಲುವೆಗೆ ಉರುಳಿ ಬಿದ್ದ ಬಳಿಕ ಘಟನೆ ನಡೆದಿದ್ದು ಘಟನೆಯ ಬಳಿಕ ಕಾರ್ಮಿಕ ಮಹಿಳೆಯರನ್ನು ವಾಹನದಲ್ಲೇ ಬಿಟ್ಟು ಚಾಲಕ ಪರಾರಿಯಾಗಿರುವ ಘಟನೆ ರಾಯಚೂರು ಜಿಲ್ಲೆಯ…

    Spread the love

    ಬೆಳ್ಳಂಬೆಳಗ್ಗೆ ಕಾಣಿಸಿಕೊಂಡ ಒಂಟಿ ಸಲಗ ರೈತರಲ್ಲಿ ಹೆಚ್ಚಿದ ಆತಂಕ

    ಬೆಳ್ತಂಗಡಿ: ತಾಲೂಕಿನ ಚಾರ್ಮಾಡಿ ಗ್ರಾಮದ ಮೈಕಾನ್, ಪರ್ಲಾಣಿ ಸಮೀಪದಲ್ಲಿ ರವಿವಾರ ಮುಂಜಾನೆ 7 ಗಂಟೆಗೆ ಸುಮಾರಿಗೆ ಮೃತ್ಯುಂಜಯ ನದಿಯಲ್ಲಿ ಒಂಟಿ ಸಲಗ ಕಾಣಿಸಿಕೊಂಡಿದೆ. ತೋಟಗಳ ಮೂಲಕ ಹಾಗೂ ನದಿಯಲ್ಲಿ ಓಡಾಟ ನಡೆಸಿದ ಒಂಟಿ ಸಲಗ ಹೊಸಮಠ ಕಡೆಗೆ ತೆರಳಿರುವ ಬಗ್ಗೆ ವರದಿಯಾಗಿದೆ.…

    Spread the love

    You Missed

    ಕೂಲಿ ಕಾರ್ಮಿಕರನ್ನು ಕರೆದೊಯ್ದುತ್ತಿದ್ದ ವೇಳೆ ಚಾಲಕನ ನಿಯಂತ್ರಣ ತಪ್ಪಿ ಕಾಲುವೆಗೆ ಉರುಳಿದ ಟಾಟಾ ಏಸ್

    • By admin
    • November 19, 2024
    • 40 views
    ಕೂಲಿ ಕಾರ್ಮಿಕರನ್ನು ಕರೆದೊಯ್ದುತ್ತಿದ್ದ ವೇಳೆ ಚಾಲಕನ ನಿಯಂತ್ರಣ ತಪ್ಪಿ ಕಾಲುವೆಗೆ ಉರುಳಿದ ಟಾಟಾ ಏಸ್

    ಬೆಳ್ತಂಗಡಿ: ಪತ್ರಕರ್ತ ಭುವನೇಂದ್ರ ಪುದುವೆಟ್ಟು ನಿಧನ

    • By admin
    • November 19, 2024
    • 139 views
    ಬೆಳ್ತಂಗಡಿ: ಪತ್ರಕರ್ತ ಭುವನೇಂದ್ರ ಪುದುವೆಟ್ಟು ನಿಧನ

    ಪಶ್ಚಿಮ ಘಟ್ಟದ ತಪ್ಪಲಿನ ಅರಣ್ಯದಂಚಿನಲ್ಲಿ ಮೊಳಗಿದ ಗುಂಡಿನ ಸದ್ದು ನಕ್ಸಲ್ ನಾಯಕ ವಿಕ್ರಂಗೌಡ ಎನ್‌ಕೌಂಟರ್‌

    • By admin
    • November 19, 2024
    • 73 views
    ಪಶ್ಚಿಮ ಘಟ್ಟದ ತಪ್ಪಲಿನ ಅರಣ್ಯದಂಚಿನಲ್ಲಿ ಮೊಳಗಿದ ಗುಂಡಿನ ಸದ್ದು ನಕ್ಸಲ್ ನಾಯಕ ವಿಕ್ರಂಗೌಡ ಎನ್‌ಕೌಂಟರ್‌

    ಬೆಳ್ಳಂಬೆಳಗ್ಗೆ ಕಾಣಿಸಿಕೊಂಡ ಒಂಟಿ ಸಲಗ ರೈತರಲ್ಲಿ ಹೆಚ್ಚಿದ ಆತಂಕ

    • By admin
    • November 17, 2024
    • 54 views
    ಬೆಳ್ಳಂಬೆಳಗ್ಗೆ ಕಾಣಿಸಿಕೊಂಡ ಒಂಟಿ ಸಲಗ ರೈತರಲ್ಲಿ ಹೆಚ್ಚಿದ ಆತಂಕ

    ಧರ್ಮಸ್ಥಳ “ಗ್ರಾಮೀಣ ಯೋಜನೆಯ ಪ್ರಯೋಗಾಲಯ” ಗ್ರಾಮೀಣ ಭಾಗದ ಮಹಿಳೆಯರಿಗೆ ಶಕ್ತಿ ತುಂಬುವ ಕೆಲಸ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಆಗುತ್ತಿದೆ: ನಿರ್ಮಲಾ ಸೀತಾರಾಮನ್

    • By admin
    • November 14, 2024
    • 60 views
    ಧರ್ಮಸ್ಥಳ “ಗ್ರಾಮೀಣ ಯೋಜನೆಯ ಪ್ರಯೋಗಾಲಯ” ಗ್ರಾಮೀಣ ಭಾಗದ ಮಹಿಳೆಯರಿಗೆ ಶಕ್ತಿ ತುಂಬುವ ಕೆಲಸ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಆಗುತ್ತಿದೆ: ನಿರ್ಮಲಾ ಸೀತಾರಾಮನ್

    ಪದವಿ ಪೂರ್ವ ಕಾಲೇಜುಗಳ ರಾಜ್ಯಮಟ್ಟದ ಕ್ರೀಡಾಕೂಟದಲ್ಲಿ ಮುಂಡಾಜೆಯ ತೇಜಲ್ ಗೆ ಚಿನ್ನದ ಪದಕ

    • By admin
    • November 9, 2024
    • 61 views
    ಪದವಿ ಪೂರ್ವ ಕಾಲೇಜುಗಳ ರಾಜ್ಯಮಟ್ಟದ ಕ್ರೀಡಾಕೂಟದಲ್ಲಿ ಮುಂಡಾಜೆಯ ತೇಜಲ್ ಗೆ ಚಿನ್ನದ ಪದಕ