ಬೆಳ್ತಂಗಡಿ: ವಕೀಲರ ಸಂಘ.ರಿ. ಬೆಳ್ತಂಗಡಿ ಇದರ ವತಿಯಿಂದ ಸಂವಿಧಾನ ದಿನಾಚರಣೆಯ ಅಂಗವಾಗಿ ಬೆಳ್ತಂಗಡಿ ತಾಲೂಕು ಮಟ್ಟದ ಹೈಸ್ಕೂಲ್ ವಿದ್ಯಾರ್ಥಿಗಳಿಗೆ ಭಾರತದ ಸಂವಿಧಾನ ಎಂಬ ವಿಷಯದ ಬಗ್ಗೆ ಭಾಷಣ ಸ್ಪರ್ಧೆಯನ್ನು ವಕೀಲರ ಭವನ ಬೆಳ್ತಂಗಡಿಯಲ್ಲಿ ಆಯೋಜಿಸಲಾಗಿತ್ತು.
ಈ ಕಾರ್ಯಕ್ರಮದ ಉದ್ಘಾಟನೆಯನ್ನು ಕ್ಷೇತ್ರ ಶಿಕ್ಷಣಾಧಿಕಾರಿಯಾದ ಶ್ರೀಮತಿ ತಾರಕೇಶ್ವರಿ ಯವರು ನೆರವೇರಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಕೀಲರ ಸಂಘದ ಅಧ್ಯಕ್ಷರಾದ ಶ್ರೀ ವಸಂತ ಮರಕಡ ವಹಿಸಿದ್ದರು.
ಸಿ ಅಶೋಕ್ ಕರಿಯನೆಲ ಉಪಾಧ್ಯಕ್ಷರು ವಕೀಲರ ಸಂಘ ಬೆಳ್ತಂಗಡಿ, ಶ್ರೀ ಸಂದೀಪ್ ಡಿಸೋಜ, ಅಧ್ಯಕ್ಷರು ಯುವಕೀಲರ ವೇದಿಕೆ ಬೆಳ್ತಂಗಡಿ, ಖಜಾಂಚಿಯಾದ ಶ್ರೀ ಪ್ರಶಾಂತ್ ಎಂ. ವೇದಿಕೆಯಲ್ಲಿ ಉಪಸ್ಥಿತರಿದ್ದರು.
ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಶ್ರೀ ನವೀನ್ ಬಿ. ಕೆ ನಿರೂಪಿಸಿದರು.
ಸಮಾರೋಪ ಸಮಾರಂಭದ ಅಧ್ಯಕ್ಷತೆ ಶ್ರೀ ವಸಂತ ಮರಕಡ ಅಧ್ಯಕ್ಷರು ವಕೀಲರ ಸಂಘ ಬೆಳ್ತಂಗಡಿ ವಹಿಸಿದ್ದರು
ಮುಖ್ಯ ಅತಿಥಿಗಳಾಗಿ ಶ್ರೀ ದೇವರಾಜು ಹಿರಿಯ ಶ್ರೇಣಿ ನ್ಯಾಯಾಧೀಶರು ಬೆಳ್ತಂಗಡಿ ಸಂದೇಶ್ ಕೆ ಜೆ, ಪ್ರಧಾನ ನ್ಯಾಯಾಧೀಶರು ಬೆಳ್ತಂಗಡಿ ವಿಜಯೇಂದ್ರ ಟಿ ಎಚ್, ಹೆಚ್ಚುವರಿ ಸವಿನ್ ನ್ಯಾಯಾಧೀಶರು ಬೆಳ್ತಂಗಡಿ, ಭಾಗವಹಿಸಿದ್ದರು.
ಮುಖ್ಯ ಅತಿಥಿ ನೆಲೆಯಲ್ಲಿ ಬೆಳ್ತಂಗಡಿ ವಕೀಲರ ಸಂಘದ ಹಿರಿಯ ನ್ಯಾಯವಾದಿ ಶ್ರೀ ಡಿಕೆ ಧನಂಜಯ ರಾವ್ ಸಂವಿಧಾನದ ಕುರಿತಾಗಿ ಚುಟುಕಾಗಿ ಅರ್ಥ ವಿವರಣೆಗೈದರು. ಶ್ರೀ ಪ್ರಶಾಂತ್ ಎಂ, ಖಜಾಂಚಿ ವಕೀಲರ ಸಂಘ ಬೆಳ್ತಂಗಡಿ, ಶ್ರೀ ಅಶೋಕ್ ಕರಿಯನೆಲ, ಉಪಾಧ್ಯಕ್ಷರು ವಕೀಲ ಸಂಘ ಬೆಳ್ತಂಗಡಿ, ವೇದಿಕೆಯಲ್ಲಿ ಹಾಜರಿದ್ದರು.
ಈ ಸಂದರ್ಭದಲ್ಲಿ ಕುಂದಾಪುರದಲ್ಲಿ ನಡೆದ ಸಾಂಸ್ಕೃತಿಕ ಕಲರವದಲ್ಲಿ ಭಾಗವಹಿಸಿದ ಎಲ್ಲಾ ವಕೀಲರನ್ನು ಗೌರವಿಸಲಾಯಿತು.
ಪ್ರಥಮ : ಶರಣ್ಯ 9ನೇ ತರಗತಿ
ಜಿ. ಪಿ. ಯು. ಸಿ. ವೇಣೂರು
ದ್ವಿತೀಯ : ಡಿ ಜಿ ಮಹಿಮಾ,8ನೇ ತರಗತಿ, ಎಸ್ ಡಿ ಎಂ ಧರ್ಮಸ್ಥಳ
ತೃತೀಯ : ಪಲ್ಲವಿ, 10 ನೇ ತರಗತಿ,ಎಸ್ ಡಿ ಎಂ ಆಂಗ್ಲ ಮಾಧ್ಯಮ(CBSC) ಶಾಲೆ ಉಜಿರೆ.
ತೀರ್ಪುಗಾರರಾಗಿ ವಕೀಲರುಗಳಾದ ಶ್ರೀ ಶಿವಕುಮಾರ್ ಎಸ್.ಎಂ ಶ್ರೀಕೃಷ್ಣ ಶೆಣೈ ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ವಕೀಲ ಸಂಘದ ಪ್ರಧಾನ ಕಾರ್ಯದರ್ಶಿ ಶ್ರೀ ನವೀನ್ ಬಿಕೆ ಧನ್ಯವಾದಗಳು ಧನ್ಯವಾದವಿತ್ತರು.