
ಸುಳ್ಯ: ತಡ ರಾತ್ರಿಯಲ್ಲಿ ಈಚರ್ ಲಾರಿಯೊಂದು ಹೊತ್ತಿ ಉರಿದ ಘಟನೆ ಜೋಡುಪಾಲದಲ್ಲಿ ನಡೆದಿದೆ. ಹೆಚ್ ಡಿ ಕೋಟೆಯಿಂದ ಭತ್ತದ ಲೋಡ್ ಉಡುಪಿಗೆ ಸಾಗಿಸುತ್ತಿದ್ದ ವೇಳೆ ಏಕಾ ಏಕಿ ಲಾರಿಗೆ ಬೆಂಕಿ ಹೊತ್ತಿಕೊಂಡಿದೆ ಎನ್ನಲಾಗಿದೆ. ಇದನ್ನು ಗಮನಿಸಿದ ಚಾಲಕ ಹಾಗೂ ಕ್ಲೀನರ್ ಲಾರಿಯನ್ನು ರಸ್ತೆ ಪಕ್ಕ ನಿಲ್ಲಿಸಿ, ಕೆಳಗಿಳಿದಿದ್ದಾರೆ. ಈ ಘಟನೆಯಿಂದ ಹೆದ್ದಾರಿಯಲ್ಲಿ ಹೆಚ್ಚು ಸಮಯ ಸಂಚಾರ ಅಸ್ತವ್ಯಸ್ತಗೊಂಡಿತು.