ಜುಲೈ 24-2020 ಶುಕ್ರವಾರ: ಇಂದಿನ ರಾಶಿಭವಿಷ್ಯ ಯಾರಿಗೆ ಶುಭ ಯಾರಿಗೆ ಅಶುಭ ಫಲ ವೀಕ್ಷಿಸಿ

ಪಂಚಾಂಗ:
ಶ್ರೀ ಶಾರ್ವರಿನಾಮ ಸಂವತ್ಸರ,
ದಕ್ಷಿಣಾಯನ ಪುಣ್ಯಕಾಲ,
ವರ್ಷ ಋತು, ಶ್ರಾವಣ ಮಾಸ,
ಶುಕ್ಲ ಪಕ್ಷ, ಚತುರ್ಥಿ ತಿಥಿ,
ಮಧ್ಯಾಹ್ನ 2:35 ನಂತರ ಪಂಚಮಿ ತಿಥಿ,
ಶುಕ್ರವಾರ, ಪೂರ್ವಫಾಲ್ಗುಣಿ ನಕ್ಷತ್ರ
ಸಂಜೆ 4:02 ಉತ್ತರ ಫಾಲ್ಗುಣಿ ನಕ್ಷತ್ರ

ರಾಹುಕಾಲ: ಬೆಳಗ್ಗೆ 10:54 ರಿಂದ 12:29
ಗುಳಿಕಕಾಲ: ಬೆಳಗ್ಗೆ 7:44 ರಿಂದ 9:19
ಯಮಗಂಡಕಾಲ: ಮಧ್ಯಾಹ್ನ 3:40 ರಿಂದ 5:15

ಮೇಷ

ಬೇರೆಯವರ ಅಪಹಾಸ್ಯಕ್ಕೆ ಗುರಿಯಾಗುವ ಸಾಧ್ಯತೆಯಿದ್ದು ಗಂಭೀರ ನಡವಳಿಕೆ ಅಗತ್ಯ. ಮಾನಸಿಕ ಚಂಚಲತೆಯುಂಟಾಗಿ ದುಸ್ವಪ್ನಗಳು ಉಂಟಾಗಬಹುದು. ಮನೆಯವರ ಆರೋಗ್ಯದೆಡೆಗೆ ಹೆಚ್ಚಿನ ಗಮನ ಅಗತ್ಯ.

ವೃಷಭ

ಹಿರಿಯರೊಂದಿಗೆ ವಿಧೇಯತೆಯಿಂದ ನಡೆದುಕೊಳ್ಳಿ. ಸಾಮಾಜಿಕ ಕಾರ್ಯಗಳಿಂದಾಗಿ ನೆಮ್ಮದಿ. ವೃಥಾ ವೈಮನಸ್ಸು ಎದುರಾಗಬಹುದು. ಆರ್ಥಿಕ ವಿಷಯದಲ್ಲಿ ಯಥಾಸ್ಥಿತಿ ಮುಂದುವರೆದು, ಕೆಲಸ–ಕಾರ್ಯಗಳಲ್ಲಿ ಉತ್ಸಾಹ.

ಮಿಥುನ

ಕಣ್ಣು ಅಥವಾ ತಲೆನೋವಿನಿಂದ ಬಳಲುವ ಸಾಧ್ಯತೆ. ಅತಿಯಾದ ವಾದ–ವಿವಾದದಿಂದಾಗಿ ವೈರತ್ವ. ಅಮೂಲ್ಯ ವಸ್ತುಗಳನ್ನು ಕಳೆದುಕೊಳ್ಳುವ ಸಾಧ್ಯತೆಯಿದ್ದು ಜಾಗೃತೆ ವಹಿಸಿ. ಅನಾವಶ್ಯಕ ದಂಡ ತೆರಬೇಕಾದಿತು.

ಕಟಕ

ಮನೆಯಲ್ಲಿ ಶುಭಕಾರ್ಯಗಳು ನೆರವೇರುವ ಸಾಧ್ಯತೆ. ನೌಕರಿಯಲ್ಲಿ ಬದಲಾವಣೆ ಕಂಡುಬರುವುದು. ಆರ್ಥಿಕ ಅನುಕೂಲತೆ ಉತ್ತಮಗೊಳ್ಳುವುದು. ಮಕ್ಕಳಿಂದ ಸಂತಸದ ಸುದ್ದಿ ಕೇಳುವಿರಿ. ಬಂಧುಗಳ ಸಮಾಗಮದ ನಿರೀಕ್ಷೆ.

ಸಿಂಹ

ನಿಮ್ಮ ನಿರ್ಣಯಗಳು ಫಲ ನೀಡುವವು. ಆದಾಯದಲ್ಲಿ ಹೆಚ್ಚಳ ಕಂಡುಬಂದು ಪರಿಸ್ಥಿತಿ ಸುಧಾರಿಸುವುದು. ವಾಹನ ಖರೀದಿ ಭಾಗ್ಯ ನಿಮ್ಮದಾಗಲಿದೆ. ಸ್ನೇಹಿತರೊಂದಿಗೆ ಸಂತೋಷ ಹಂಚಿಕೊಳ್ಳುವಿರಿ.

ಕನ್ಯಾ

ನಿಮ್ಮ ಕೆಲಸ–ಕಾರ್ಯಗಳು ಮಂದಗತಿಯಲ್ಲೂ ಪ್ರಗತಿ. ಉದರ ಸಂಬಂಧಿ ಸಣ್ಣಪುಟ್ಟ ತೊಂದರೆಗಳು ಕಂಡುಬರಬಹುದು. ಹೊಸ ಕಾರ್ಯಯೋಜನೆ ಪ್ರಾರಂಭಿಸದಿರುವುದೇ ಒಳ್ಳೆಯದು.

ತುಲಾ

ಸಂಕಷ್ಟಗಳು ಕಡಿಮೆಯಾಗಿ ಕೆಲಸ-ಕಾರ್ಯಗಳು ಸುಗಮ ಚಾಲನೆ ಪಡೆದುಕೊಳ್ಳುವವು. ಸಿಟ್ಟು ಸೆಡವುಗಳಿಂದಾಗಿ ತೊಂದರೆಗಳು ತಲೆದೋರಬಹುದು. ಅನಿರೀಕ್ಷಿತ ಅನವಶ್ಯಕ ಖರ್ಚು ಸಂಭವಿಸುವವು.

ವೃಶ್ಚಿಕ

ಆರ್ಥಿಕ ಉನ್ನತಿ ಕಂಡುಬರುವುದು. ಶತ್ರುಗಳ ವಿರುದ್ಧ ಜಯದ ಸವಾರಿ ಮಾಡುವ ಯೋಗ ಕೂಡಿದೆ. ಬಹುದಿನಗಳ ಸಮಸ್ಯೆಯಿಂದ ಪರಿಹಾರ ದೊರೆತು ನೆಮ್ಮದಿ. ಬಂಧುಗಳ ಆಗಮನವನ್ನು ನಿರೀಕ್ಷಿಸಿ.

ಧನು

ಅನವಶ್ಯಕ ಖರ್ಚು ತಲೆದೋರಬಹುದು. ಬಂಧುಗಳ ಭೇಟಿಯ ಸಾಧ್ಯತೆ. ಉದ್ಯೋಗದಲ್ಲಿ ಹೆಚ್ಚಿನ ಒತ್ತಡ. ಆಹಾರದಲ್ಲಿನ ವ್ಯತ್ಯದಿಂದಾಗಿ ಅಜೀರ್ಣ ಸಂಬಂಧಿ ರೋಗಗಳು ಕಂಡುಬರಬಹುದು. ಸಂಗಾತಿಯಿಂದ ಸಹಕಾರ.

ಮಕರ

ಬರಬೇಕಾದ ಹಣ ಹಿಂದಿರುಗಿ ಬರುವ ಸಾಧ್ಯತೆ. ಉಳಿತಾಯದಲ್ಲಿ ಪ್ರಗತಿ. ಆರೋಗ್ಯದಲ್ಲಿ ಸುಧಾರಣೆ. ಸಂತಾನಭಾಗ್ಯ ಪ್ರಾಪ್ತಿಯಾಗುವ ಕಾಲ ಸನ್ನಿಹಿತವಾಗಿದೆ. ನಿಂತುಹೋದ ಯೋಜನೆಗಳು ಪುನರಾರಂಭಗೊಳ್ಳುವವು.

ಕುಂಭ

ಆರ್ಥಿಕ ಅನುಕೂಲ ನಿಮ್ಮನ್ನರಸಿ ಬರುವುದು. ಧಾರ್ಮಿಕ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವುದರೊಂದಿಗೆ ವೆಚ್ಚವನ್ನೂ ಮಾಡುವಿರಿ. ನಿಮ್ಮ ಉತ್ತಮ ನಡುವಳಿಕೆಯಿಂದಾಗಿ ಗೌರವಾದರಗಳು ಲಭ್ಯವಾಗುವವು.

ಮೀನ

ನೌಕರರು ಮತ್ತು ಸ್ವಂತ ಉದ್ಯೋಗಿಗಳು ತಪ್ಪು ನಡೆಗಳಿಗೆ ಅವಕಾಶವಾಗದಂತೆ ಎಚ್ಚರಿಕೆ ವಹಿಸುವುದು ಅಗತ್ಯ. ಉದ್ಯೋಗ ಅಥವಾ ವಾಸದ ಸ್ಥಾನ ಪಲ್ಲಟವಾಗುವ ಸಾಧ್ಯತೆ. ಉತ್ತಮ ಸ್ಥಾನ ದೊರಕುವುದು.

Spread the love
  • Related Posts

    ಶನಿವಾರದ ದಿನಭವಿಷ್ಯ ಯಾವ ರಾಶಿಯವರಿಗಿದೆ ಶುಭ ಫಲ!

    ಮೇಷ ರಾಶಿ: ನಿಮ್ಮ ಸಂಗಾತಿ ಎಂದಿಗೂ ಇಷ್ಟೊಂದು ಸುಂದರವಾಗಿರಲಿಲ್ಲ ಎಂದು ನಿಮಗೆ ಅರಿವಾಗುತ್ತದೆ. ನಿಮ್ಮ ಹಿತನುಡಿಗಳಿಂದ ಸಂಗಾತಿ ಫುಲ್ ಖುಷಿ. ನೀವು ಸಂಗಾತಿಯೊಡನೆ ದಿನಪೂರ್ತಿ ಕಾಲ ಕಳೆಯಬಹುದು. ಕೆಲಸದಲ್ಲಿ ಸಂಭವಿಸುವ ದೌರ್ಜನ್ಯ ಅದು ನಿಮಗೆ ಮುಂದಿನ ಭವಿಷ್ಯದಲ್ಲಿ ಪ್ರಜ್ವಲ ಶಕ್ತಿ ನೀಡುತ್ತದೆ.…

    Spread the love

    ಶನಿವಾರದ ರಾಶಿಭವಿಷ್ಯ ಯಾರಿಗೆಲ್ಲ ಇಂದು ಶುಭಕರ

    ಮೇಷ: ಸಾಲದ ಸಹಾಯ, ಆರ್ಥಿಕ ಚೇತರಿಕೆಯ ಲಕ್ಷಣ, ಉದ್ಯೋಗದಲ್ಲಿ ಹಿನ್ನಡೆ, ಆತುರದಿಂದ ಸಂಕಷ್ಟ ತಂದುಕೊಳ್ಳುವಿರಿ, ಶುಭಕಾರ್ಯಕ್ಕೆ ಮನಸ್ಸು ಮಾಡುವಿರಿ ವೃಷಭ: ಸ್ವಯಂಕೃತ ಅಪರಾಧಗಳು, ಆರ್ಥಿಕ ಸಂಕಷ್ಟದ ದಿವಸಗಳು, ಶುಭಕಾರ್ಯದ ಚಿಂತೆ, ಕಾರ್ಯ ವಿಘ್ನ, ಸ್ಥಿರಾಸ್ತಿ ವ್ಯವಹಾರಗಳಲ್ಲಿ ಸೋಲು, ತಂದೆಯಿಂದ ನಷ್ಟ, ಸರ್ಕಾರಿ…

    Spread the love

    You Missed

    ಬೆಳ್ತಂಗಡಿ ವಕೀಲರ ಸಂಘದಿಂದ ಕ್ರಿಸ್ಮಸ್ ಹಬ್ಬದ ಆಚರಣೆ

    • By admin
    • December 17, 2024
    • 88 views
    ಬೆಳ್ತಂಗಡಿ ವಕೀಲರ ಸಂಘದಿಂದ ಕ್ರಿಸ್ಮಸ್ ಹಬ್ಬದ ಆಚರಣೆ

    ರುಡ್ ಸೆಟ್ ಸಂಸ್ಥೆ, ಉಜಿರೆಯಲ್ಲಿ ಉಚಿತ ಮಹಿಳೆಯರ ವಸ್ತ್ರ ವಿನ್ಯಾಸ ತರಬೇತಿ

    • By admin
    • December 15, 2024
    • 51 views
    ರುಡ್ ಸೆಟ್ ಸಂಸ್ಥೆ,  ಉಜಿರೆಯಲ್ಲಿ  ಉಚಿತ ಮಹಿಳೆಯರ ವಸ್ತ್ರ ವಿನ್ಯಾಸ ತರಬೇತಿ

    ಮೋಸ ಮೋಸ ಮಹಾಮೋಸ ಆನೆ ಮೇಲೆ ಕ್ಲಿಕ್ ಮಾಡಿ ಹಣ ಗೆಲ್ಲಿ ಸಂದೇಶ ರವಾನೆ, ಪಾವತಿಗೂ ಮುನ್ನಾ ಜಾಗೃತರಾಗಿ

    • By admin
    • December 14, 2024
    • 54 views
    ಮೋಸ ಮೋಸ ಮಹಾಮೋಸ ಆನೆ ಮೇಲೆ ಕ್ಲಿಕ್ ಮಾಡಿ ಹಣ ಗೆಲ್ಲಿ ಸಂದೇಶ ರವಾನೆ,  ಪಾವತಿಗೂ ಮುನ್ನಾ ಜಾಗೃತರಾಗಿ

    ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ ವೀರೇಂದ್ರ ಹೆಗ್ಗಡೆಯವರಿಂದ  ರಾಷ್ಟ್ರಪತಿಗಳ  ಭೇಟಿ

    • By admin
    • December 12, 2024
    • 137 views
    ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ ವೀರೇಂದ್ರ ಹೆಗ್ಗಡೆಯವರಿಂದ  ರಾಷ್ಟ್ರಪತಿಗಳ  ಭೇಟಿ

    ಜಮ್ಮು ಮತ್ತು ಕಾಶ್ಮೀರದ ಪೂಂಚ್‌ನಲ್ಲಿ ನೆಲಬಾಂಬ್ ಸ್ಫೋಟದಲ್ಲಿ ಯೋಧ ಹುತಾತ್ಮ

    • By admin
    • December 10, 2024
    • 77 views
    ಜಮ್ಮು ಮತ್ತು ಕಾಶ್ಮೀರದ ಪೂಂಚ್‌ನಲ್ಲಿ ನೆಲಬಾಂಬ್ ಸ್ಫೋಟದಲ್ಲಿ ಯೋಧ ಹುತಾತ್ಮ

    ಮುರುಡೇಶ್ವರ ಪ್ರವಾಸಕ್ಕೆ ಬಂದ ವಿದ್ಯಾರ್ಥಿನಿಯರು ಸಮುದ್ರದ ನೀರಿನಲ್ಲಿ ಮುಳುಗಿ ನಾಪತ್ತೆ

    • By admin
    • December 10, 2024
    • 87 views
    ಮುರುಡೇಶ್ವರ ಪ್ರವಾಸಕ್ಕೆ ಬಂದ ವಿದ್ಯಾರ್ಥಿನಿಯರು ಸಮುದ್ರದ ನೀರಿನಲ್ಲಿ ಮುಳುಗಿ ನಾಪತ್ತೆ