ಮಂಗಳೂರು: ಕೇರಳಕ್ಕೆ ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿದ್ದ ಟಿಪ್ಪರ್ ಲಾರಿ ಮತ್ತು ಓಮ್ನಿ ಕಾರಿನ ನಡುವೆ ಡಿಕ್ಕಿ ಸಂಭವಿಸಿದ್ದು ಓಮ್ನಿ ಕಾರಿನಲ್ಲಿದ್ದ ಇಬ್ಬರು ತೀವ್ರ ಗಾಯಗೊಂಡ ಘಟನೆ ಕಿನ್ಯ ಗ್ರಾಮದ ನಡುಕುಮೇರ್ ಪಡುವಳ್ ಫಾರ್ಮ್ಸ್ ಬಳಿ ನಡೆದಿದೆ.
ಕೇರಳ ನೊಂದಣಿಯ ಟಿಪ್ಪರ್ ಲಾರಿ ಮರಳನ್ನು ತುಂಬಿಕೊಂಡು ದೇರಳಕಟ್ಟೆ ಕಡೆಗೆ ಸಾಗುತ್ತಿದ್ದು, ಈ ವೇಳೆ ನಾಟಿಕಲ್ ನಿಂದ ಕೆ.ಸಿ ರೋಡ್ ಕಡೆಗೆ ಬರುತ್ತಿದ್ದ ಓಮ್ನಿ ಕಾರು ಮುಖಾಮುಖಿ ಡಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ.
ಕೆ.ಸಿ ನಗರದ ಪೂಮಣ್ಣು ನಿವಾಸಿ ನೂರುದ್ದೀನ್ ಹಾಗೂ ಇಮ್ರಾನ್ ಎಂಬವರಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.