
ಮಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ಸುಗಳಲ್ಲಿ ಈಗಾಗಲೇ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅವಕಾಶವಿದ್ದು ಇದರ ಬೆನ್ನಲ್ಲೇ ಹಣಪಾವತಿ ಮಾಡಿ ಪ್ರಯಾಣ ಮಾಡುವ ಪ್ರಯಾಣಿಕರಿಗೆ ಬಿಗ್ ಶಾಕ್ ಎದುರಾಗಿದೆ.
ಪ್ರಯಾಣಿಕರು ಪ್ರಯಾಣಕ್ಕೆ ನೀಡಬೇಕಾದ ಒಂದೆಡೆ ಇನ್ನೊಂದೆಡೆ ಅದೇ ಮೊತ್ತಕ್ಕೆ 5% ಶುಲ್ಕವನ್ನು ವಿಧಿಸಿ ಟಿಕೆಟ್ ನೀಡುತ್ತಿರುವುದು ಬೆಳಕಿಗೆ ಬಂದಿದೆ. ಈ ಶುಲ್ಕ ಯಾಕಾಗಿ ಎಂಬುದನ್ನು ರಸ್ತೆ ಸಾರಿಗೆ ಸಂಸ್ಥೆಯು ಸ್ಪಷ್ಟ ಪಡಿಸಬೇಕಾಗಿದೆ.
ಇದರಿಂದಾಗಿ ದೂರದ ಊರುಗಳಿಗೆ ಪ್ರಯಾಣ ಮಾಡುವ ಪ್ರಯಾಣಿಕರಿಗೆ ದೊಡ್ಡ ಮೊತ್ತದ ಬರೆ ಬಿದ್ದಂತಾಗಿದೆ ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಬಹಳಷ್ಟು ಚರ್ಚೆಗಳು ಆಗುತ್ತಿದೆ ಇಷ್ಟೆಲ್ಲಾ ಹಣ ಪಾವತಿ ಮಾಡಿ ಬಸ್ ನಲ್ಲಿ ಪ್ರಯಾಣ ಮಾಡಿದರೂ ಬಸ್ಸಿನಲ್ಲಿ ಕುಳಿತು ಪ್ರಯಾಣಿಸುವ ಅವಕಾಶವು ಬಹುತೇಕ ಕಡೆ ಸಿಗುತ್ತಿಲ್ಲ ಹಾಗೂ ಕೆಲವೊಂದು ವಾಹನಗಳು ನಿರ್ವಹಣೆ ಸರಿಯಾಗಿ ಆಗದೇ ಮಳೆಗಾಲದಲ್ಲಿ ಅಲ್ಲಲ್ಲಿ ಬಾಕಿಯಾಗುವ, ಇತರ ತಾಂತ್ರಿಕ ತೊಂದರೆ ಆಗುವುದರ ಜೊತೆಗೆ ಬಸ್ ಗಳಲ್ಲಿ ನೀರು ಸೋರುವ ಸಮಸ್ಯೆ ಕೂಡ ಕಾಣುತ್ತಿದೆ ಆದ್ದರಿಂದ ಸಂಬಂಧ ಪಟ್ಟವರು ಗುಣಮಟ್ಟದ ಸೇವೆಗೆ ಹೆಚ್ಚಿನ ಆಧ್ಯತೆ ನೀಡುವ ಮೂಲಕ ಉತ್ತಮ ಸೇವೆಯನ್ನು ಕಲ್ಪಿಸುವಂತಾಗಲಿ ಎಂಬುದು ನಮ್ಮ ಕೋರಿಕೆ