ಬೆಂಗಳೂರು: ರಾಜ್ಯಾದ್ಯಂತ ಸರಕಾರಿ ಬಸ್ ನೌಕರರ ಮುಷ್ಕರ ಮುಂದುವರೆದಿದ್ದು ಇಂದು ಯಾವುದೇ ಬಸ್ ಗಳು ರಸ್ತೆಗೆ ಇಳಿಯುವ ಸಾಧ್ಯತೆ ಬಹುತೇಕ ಕಡಿಮೆಯಾಗಿದೆ. ರಸ್ತೆಸಾರಿಗೆ ಸೌಲಭ್ಯಗಳನ್ನು ಅವಲಂಬಿತರಾದ ಪ್ರಯಾಣಿಕರು ಪರದಾಟಪಡುವ ಸ್ಥಿತಿ ನಿರ್ಮಾಣವಾಗಿದೆ.
ರಾಜ್ಯದಲ್ಲಿ ಸಾರಿಗೆ ನೌಕರರ ಮುಷ್ಕರ ಮುಂದುವರೆದಿದ್ದು ಇಂದಿನಿಂದ ಸಾರಿಗೆ ಸಿಬ್ಬಂದಿ ಅನಿರ್ಧಿಷ್ಟಾವಧಿ ಮುಷ್ಕರ ಕೈಗೊಂಡಿದ್ದಾರೆ. ಬೇಡಿಕೆ ಈಡೇರುವವರೆಗೂ ಮುಷ್ಕರ ಮುಂದುವರಿಸಲಿದ್ದಾರೆ.
ನಿನ್ನೆ ರಾತ್ರಿ ಪಾಳಿಯ ಬಿಎಂಟಿಸಿ ಬಸ್ ಗಳಾದರೂ ರಸ್ತೆಗೆ ಇಳಿದಿದ್ದವು. ಇಂದು ಯಾವುದೇ ಬಿಎಂಟಿಸಿ ಬಸ್ ಗಳು ರಸ್ತೆಗಿಳಿಯುವುದಿಲ್ಲ. ರಾಜ್ಯಾದ್ಯಂತ ksrtc ಬಸ್ ಗಳ ಸಂಚಾರ ಕೂಡ ಅನುಮಾನವೆನ್ನಲಾಗಿದೆ.
1.37 ಲಕ್ಷ ಸಿಬ್ಬಂದಿ ಮುಷ್ಕರ ಕೈಗೊಂಡಿದ್ದಾರೆ. ನಾಲ್ಕು ನಿಗಮಗಳ 18 ಸಾವಿರ ಬಸ್ ಗಳು ನಿಂತಲ್ಲೇ ನಿಂತಿವೆ. ಡಿಸೆಂಬರ್ 10 ರಂದು ಸಾರಿಗೆ ನೌಕರರು ಪ್ರತಿಭಟನಾ ಮೆರವಣಿಗೆ ನಡೆಸಿ, ನಡೆಸಿದರೂ ಸರ್ಕಾರ ಸ್ಪಂದಿಸಲಿಲ್ಲ. ಬೇಡಿಕೆ ಈಡೇರಿಸುವ ಸಂಬಂಧ ಧರಣಿ ನಿರತರನ್ನು ಕರೆಸಿ ಚರ್ಚೆ ಮಾಡದ ಹಿನ್ನೆಲೆಯಲ್ಲಿ ಆಕ್ರೋಶ ವ್ಯಕ್ತಪಡಿಸಲಾಗಿದೆ.
ಅಲ್ಲದೇ, ಸಾವಿರಾರು ಸಾರಿಗೆ ಸಿಬ್ಬಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಇದರಿಂದಾಗಿ ರೊಚ್ಚಿಗೆದ್ದು ನಿನ್ನೆಯಿಂದ ಕೆಲಸಕ್ಕೆ ಗೈರು ಹಾಜರಾಗಿ ಹೋರಾಟ ಕೈಗೊಂಡಿದ್ದಾರೆ. ಇಂದಿನಿಂದ ಸಾರಿಗೆ ಸಿಬ್ಬಂದಿ ಅನಿರ್ಧಿಷ್ಟಾವಧಿ ಮುಷ್ಕರ ಕೈಗೊಂಡಿದ್ದಾರೆ. ಇದರಿಂದಾಗಿ ಬೆಂಗಳೂರು ಸೇರಿ ರಾಜ್ಯದ ಬಹುತೇಕ ಭಾಗದಲ್ಲಿ ಪ್ರಯಾಣಿಕರು ಪರದಾಡುವಂತಾಗಿದೆ.