ಧರ್ಮಸ್ಥಳ: ಬೆಳ್ತಂಗಡಿ ತಾಲೂಕು ಧರ್ಮಸ್ಥಳ ಮಹಾದ್ವಾರದ ಬಳಿ ksrtc ಬಸ್ ಚಾಲಕನಿಗೆ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ವರದಿಯಾಗಿದೆ.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಸುಳ್ಯ ಡಿಪೊದಲ್ಲಿ ಚಾಲಕನಾಗಿ ಕರ್ತವ್ಯ ನಿರ್ವಹಿಸುತ್ತಿರುವ
ಲಿಂಗರಾಜು, ಕೆ.ಎಮ್ ಎಂಬವರಿಗೆ 4 ಜನರ ತಂಡವೊಂದು ಹಲ್ಲೆ ನಡೆಸಿರುವ ಬಗ್ಗೆ ವರದಿಯಾಗಿದೆ.
ಬೆಂಗಳೂರಿನಿಂದ ಧರ್ಮಸ್ಥಳಕ್ಕೆ ಪ್ರಯಾಣಿಕರನ್ನು ಹೇರಿಕೊಂಡು ಬಂದು ಮಧ್ಯಾಹ್ನ 3.00 ಗಂಟೆಗೆ ಧರ್ಮಸ್ಥಳ ದೇವಾಸ್ಥಾನದ ಮಹಾದ್ವಾರದ ಬಳಿ ರಸ್ತೆಯ ಎಡ ಬದಿಯಲ್ಲಿ ನಿಲ್ಲಿಸಿದ್ದು ಆ ಸಮಯ 4 ಜನ ಆರೋಪಿಗಳು ಒಟ್ಟು ಸೇರಿ ಬಸ್ಸ್ ಚಾಲಕರಲ್ಲಿ ಬಸ್ಸನ್ನು ಮುಂದಕ್ಕೆ ಚಲಾಯಿಸಲು ತಿಳಿಸಿದ್ದು ಆ ಸಮಯ ಪ್ರಯಾಣಿಕರು ಇಳಿಯುತ್ತಿದ್ದ ಕಾರಣ ಮುಂದಕ್ಕೆ ಹೋಗಲು ಆಗದೇ ಇದ್ದುದರಿಂದ ಮುಂದಕ್ಕೆ ಚಲಾಯಿಸದ ಕಾರಣ ಕೋಪಗೊಂಡ ಆಟೋ ಚಾಲಕರು ಬಸ್ ಚಾಲಕ ಲಿಂಗರಾಜು ರವರಿಗೆ ಅವಾಚ್ಯ ಶಬ್ದಗಳಿಂದ ಬೈಯ್ದು, ಬಸ್ಸಿನಿಂದ ಎಳೆದು ಹಾಕಿ ಬಾಗಿಲಿನ ಲಾಕ್ ನ್ನು ಕೈಯಿಂದ ಮುರಿದು ಚಾಲಕನ ತಲೆಯ ಮುಂಬಾಗಕ್ಕೆ ಹೊಡೆದು ರಕ್ತ ಬರುವಂತೆ ಹಲ್ಲೆ ನಡೆಸಿದ್ದಾಗಿ ತಿಳಿದು ಬಂದಿದೆ.
ಗಾಯಗೊಂಡ ಬಸ್ ಚಾಲಕ ಬೆಳ್ತಂಗಡಿ ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸಾರ್ವಜನಿಕ ಸೇವೆಯನ್ನು ನಿರ್ವಹಿಸುತ್ತಿದ್ದ ಸರಕಾರಿ ನೌಕರರಾಗಿದ್ದು ಆರೋಪಿಗಳು ಕರ್ತವ್ಯಕ್ಕೆ ಅಡ್ಡಿ ಪಡಿಸಿ ಅವಾಚ್ಯವಾಗಿ ನಿಂದಿಸಿ ಹಲ್ಲೆ ನಡೆಸಿರುವ ಬಗ್ಗೆ ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆರೋಪಿಗಳನ್ನು ಚಂದನ್ ಮತ್ತು ಸ್ವಸ್ತಿಕ್ ಎಂದು ಗುರುತಿಸಲಾಗಿದ್ದು ಇನ್ನಿಬ್ಬರ ಮಾಹಿತಿ ಇನ್ನಷ್ಟೇ ಲಭ್ಯವಾಗಬೇಕಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಧರ್ಮಸ್ಥಳ ಠಾಣೆಯ ಪೋಲೀಸರು ತನಿಖೆ ನಡೆಸುತ್ತಿದ್ದಾರೆ.