ಕೆಎಸ್ಸಾರ್ಟಿಸಿ ನೌಕರ ಹಾಗೂ ಅವಲಂಬಿತರಿಗೆ ನಗದುರಹಿತ ಚಿಕಿತ್ಸಾ ವೆಚ್ಚ ಯೋಜನೆ ಜಾರಿ; 34 ಸಾವಿರ ಕುಟುಂಬಗಳಿಗೆ ಉಪಯೋಗ: ಮುಖ್ಯಮಂತ್ರಿ ಸಿದ್ಧರಾಮಯ್ಯ

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಸುಮಾರು 34 ಸಾವಿರ ನೌಕರರು ಮತ್ತು ಅವಲಂಬಿತರಿಗೆ ಸುಮಾರು 272 ಸರ್ಕಾರಿ / ಖಾಸಗಿ ಆಸ್ಪತ್ರೆಗಳಲ್ಲಿ ನಗದುರಹಿತ ಚಿಕಿತ್ಸಾ ಯೋಜನೆ ಜಾರಿಗೆ ತಂದಿದ್ದು, ಇದಕ್ಕೆ ಒಟ್ಟು 46 ಕೋಟಿ ವೆಚ್ಚವಾಗಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಯ್ಯ ಹೇಳಿದರು.
ಇಂದು ವಿಧಾನಸೌಧದಲ್ಲಿ, ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ನೌಕರರು ಮತ್ತು ಸಿಬ್ಬಂದಿಗೆ ನಗದು ರಹಿತ ಆರೋಗ್ಯ ಸವಲತ್ತು ಯೋಜನೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.


ಸಾರಿಗೆ ನೌಕರರ ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು ಈ ಯೋಜನೆಯನ್ನು ಜಾರಿಗೆ ತರಲಾಗಿದೆ. ನೌಕರರ ಕುಟುಂಬದವರು ನಗದು ರಹಿತ ಚಿಕಿತ್ಸಾ ಯೋಜನೆಗೆ ಅರ್ಹರಾಗಿರುತ್ತಾರೆ. ಅವರು ಎಲ್ಲಿ ನೆಲೆಸಿರುವರೋ ಅಲ್ಲಿಯೇ ಚಿಕಿತ್ಸೆಯನ್ನು ಪಡೆಯಬಹುದಾಗಿದೆ. ನೌಕರರು ಪ್ರತಿ ತಿಂಗಳು ರೂ 650 ನ್ನು ಈ ಯೋಜನೆಗೆ ಮೀಸಲಿಡಬೇಕು. ಸರ್ಕಾರವು ಪ್ರತಿ ವರ್ಷ 20 ಕೋಟಿ ಧನ ಸಹಾಯ ಮಾಡಲಿದೆ. ಉಳಿದಂತೆ ನೌಕರರ ವಂತಿಕೆಯಿಂದ ಬಂದ ಹಣವನ್ನು ಯೋಜನೆಗೆ ಉಪಯೋಗಿಸಲಾಗುವುದು ಎಂದರು.


ಸಾರಿಗೆ ಸುರಕ್ಷಾ ವಿಮಾ ಯೋಜನೆಯಡಿ 1 ಕೋಟಿ ರೂಪಾಯಿಗಳ ಅಪಘಾತ ವಿಮೆಯನ್ನು 24 ನೌಕರರ ಕುಟುಂಬದವರಿಗೆ ವಿತರಿಸಲಾಗಿದೆ. ನೌಕರರ ಕುಟುಂಬ ಕಲ್ಯಾಣ ಪರಿಹಾರ ಯೋಜನೆಯಡಿ ವಿವಿಧ ರೋಗಗಳಿಂದ ಮೃತ ಪಟ್ಟ ನಿಗಮದ ನೌಕರರಿಗೆ ಮೊದಲಿದ್ದ 3 ಲಕ್ಷ ಪರಿಹಾರ ಮೊತ್ತವನ್ನು 10 ಲಕ್ಷ ರೂಪಾಯಿಗೆ ಹೆಚ್ಚಿಸಲಾಗಿದೆ. ಇದರಲ್ಲಿ ಒಟ್ಟು 94 ಸಿಬ್ಬಂದಿಗಳ ಅವಲಂಬಿತರಿಗೆ 9.40 ಕೋಟಿ ಪರಿಹಾರವನ್ನು ನೀಡಲಾಗಿದೆ. ನಿಗಮದ 1227 ಹಳೆಯ ವಾಹನಗಳನ್ನು ಪುನಃಶ್ಚೇತನಗೊಳಿಸಲಾಗಿದೆ ಎಂದರು.


ಈ ಯೋಜನೆ ನಿಗಮದ ನೌಕರರು ಹಾಗೂ ಕುಟುಂಬದವರಿಗೆ ಬಹಳಷ್ಟು ಅನುಕೂಲವಾಗಲಿದೆ.
ಮುಂಬರುವ ದಿನಗಳಲ್ಲಿ ಬಿ.ಎಂಟಿ.ಸಿ ನೌಕರರಿಗೂ ಈ ಯೋಜನೆಯನ್ನು ವಿಸ್ತರಿಸಲಾಗುವುದು. ಈ ಯೋಜನೆಯಡಿ 272 ಆಸ್ಪತ್ರೆಗಳೊಂದಿಗೆ ಒಡಂಬಡಿಕೆ ಮಾಡಿಕೊಳ್ಳಲಾಗಿದ್ದು, ಒಡಂಬಡಿಕೆ ಮಾಡಿಕೊಳ್ಳಲಾದ ಆಸ್ಪತ್ರೆಗಳು, ನೌಕರರು ಮತ್ತು ಅವಲಂಬಿತರಿಗೆ ತಾರತಮ್ಯ ತೋರದೇ ಸಕಾಲದಲ್ಲಿ ಸೂಕ್ತ ಚಿಕಿತ್ಸೆ ನೀಡಿ ಸ್ಪಂದಿಸಬೇಕು ಎಂದರು.


ಲಿಂಗ ತಾರತಮ್ಯ ಹೋಗಲಾಡಿಸಲು ಹಾಗೂ ಮಹಿಳೆಯರಲ್ಲಿ ಶಕ್ತಿ ತುಂಬಲು ಶಕ್ತಿ ಯೋಜನೆಯನ್ನು ರಾಜ್ಯಾದ್ಯಂತ ಜಾರಿಗೊಳಿಸಲಾಗಿದೆ. ಶಕ್ತಿ ಯೋಜನೆ ಪರಿಣಾಮ ಧಾರ್ಮಿಕ ಸ್ಥಳಗಳು ಮತ್ತು ಪ್ರವಾಸೋದ್ಯಮ ಸಂಸ್ಥೆಗಳಿಗೆ ಭಕ್ತರ ಮತ್ತು ಪ್ರವಾಸಿಗರ ಸಂಖ್ಯೆ ಹೆಚ್ಚಾಗಿದ್ದು, ಆರ್ಥಿಕವಾಗಿ ವೃದ್ದಿ ಕಂಡಿದೆ. ಈ ಕುರಿತು ಧರ್ಮಸ್ಥಳದ ಧರ್ಮಾಧಿಕಾರಿಗಳೂ ನನಗೂ ಪತ್ರ ಬರೆದಿದ್ದಾರೆ ಎಂದು ಅವರು ನುಡಿದರು.


ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಮಾತನಾಡಿ, ನೌಕರರ ಬಹುದಿನದ ಬೇಡಿಕೆಯಾಗಿದ್ದ ಈ ನಗದು ರಹಿತ ಚಿಕಿತ್ಸಾ ಸೌಲಭ್ಯವನ್ನು ಜಾರಿಗೊಳಿಸಲಾಗಿದೆ. ಇದರಿಂದ ಸುಮಾರು 34 ಸಾವಿರ ನೌಕರರು ಮತ್ತು ಅವರ ಅವಲಂಬಿತರಿಗೆ ಈ ಯೋಜನೆಯು ಸಹಾಯವಾಗಲಿದೆ ಎಂದರು.


ಶಾಸಕರು ಹಾಗೂ ಕರ್ನಾಟಕ ರಾಜ್ಯ ರಸ್ತೆ ನಿಗಮದ ಅಧ್ಯಕ್ಷರಾದ ಎಸ್.ಆರ್. ಶ್ರೀನಿವಾಸ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ನಿಗಮದ ನೌಕರರು ಸುಮಾರು 272 ಆಸ್ಪತ್ರೆಗಳು, 24 ಡಯಾಗ್ನೋಸ್ಟಿಕ್ ಕೇಂದ್ರ, 6 ಆಯುಶ್ ಆಸ್ಪತ್ರೆಗಳಲ್ಲಿ ನಗದು ರಹಿತ ಚಿಕಿತ್ಸೆ ಪಡೆದುಕೊಳ್ಳಬಹುದಾಗಿದೆ. ಪ್ರತಿ ದಿನ 8849 ವಾಹನಗಳ ಮೂಲಕ 28.50 ಲಕ್ಷ ಕಿ.ಮಿ. ಕ್ರಮಿಸಿ 34.92 ಲಕ್ಷ ಪ್ರಯಾಣಿಕರಿಗೆ ಸಾರಿಗೆ ಸೇವೆಯನ್ನು ಒದಗಿಸಲಾಗುತ್ತಿದೆ. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ಒಟ್ಟು 24,282 ಬಸ್ಸುಗಳನ್ನು ಹೊಂದಿದ್ದು, ದೇಶದಲ್ಲಿಯೇ ಪ್ರಥಮ ಸ್ಥಾನ ಗಳಿಸಿದೆ. ನಿಗಮಗಳಿಗೆ 4301 ಹೊಸ ಬಸ್ಸುಗಳು ಸೇರ್ಪಡೆಗೊಂಡಿವೆ. ನಾಲ್ಕು ನಿಗಮಗಳಲ್ಲಿ ಸುಮಾರು 9 ಸಾವಿರ ಹುದ್ದೆಗಳ ನೇಮಕಾತಿಗೆ ಸರ್ಕಾರ ಅನುಮತಿ ನೀಡಿದೆ. ನಿಗಮದ ನೌಕರರು ನಗದು ರಹಿತ ಆರೋಗ್ಯ ಸೌಲಭ್ಯವನ್ನು ಸಹಭಾಗಿತ್ವ ಯೋಜನೆಯಡಿ, ಸರ್ಕಾರದ ಅನುದಾನದ ಜೊತೆಗೆ ನೌಕರರ ವಂತಿಕೆಯನ್ನು ಸಹ ಪರಿಗಣಿಸಲಾಗುವುದು. ಪ್ರತಿಯೊಬ್ಬರಿಗೂ ಆರೋಗ್ಯ ಕಾರ್ಡು ವಿತರಿಸಲಾಗುವುದು. ಇದರಿಂದ ನಿಗದಿತ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆಯನ್ನು ಪಡೆದುಕೊಳ್ಳಬಹುದು ಎಂದು ನುಡಿದರು.


ಈ ಸಂದರ್ಭದಲ್ಲಿ ನಿಗಮದ ವಿವಿಧ ಯೋಜನೆಗಳ ಫಲಾನುಭವಿಗಳ ಕುಟುಂಬಗಳಿಗೆ ಚೆಕ್‍ಗಳನ್ನು ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಸಚಿವ ಡಾ. ಎಚ್.ಸಿ. ಮಹದೇವಪ್ಪ, ಶಾಸಕಿ ನಯನಾ ಮೋಟಮ್ಮ, ಸರ್ಕಾರದ ಮುಖ್ಯ ಸಚೇತಕರಾದ ಆಶೋಕ್ ಪಠಾಣ್, ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ಹಾಗೂ ಇತರೆ ಗಣ್ಯರು ಉಪಸ್ಥಿತರಿದ್ದರು.

Spread the love
  • Related Posts

    ದ.ಕ ಜಿಲ್ಲೆಯಲ್ಲಿ ಮುಂದುವರಿದ ಮಳೆ ಹಿನ್ನೆಲೆ ಆಗಸ್ಟ್ 30 ಪ್ರಾಥಮಿಕ ಪ್ರೌಢ ಶಾಲೆಗಳಿಗೆ ರಜೆ ಘೋಷಣೆ

    ಮಂಗಳೂರು: ಬಾರಿ ಮಳೆ ಹಿನ್ನೆಲೆಯಲ್ಲಿ 30/08/2025ನೇ ಶುಕ್ರವಾರ ದಕ್ಷಿಣಕನ್ನಡ ಜಿಲ್ಲೆಯಾದ್ಯಂತ ಅಂಗನವಾಡಿ, ಪ್ರಾಥಮಿಕ, ಪ್ರೌಢ ಶಾಲೆಗಳಿಗೆ ರಜೆ ಘೋಷಿಸಲಾಗಿದೆ ಎಂದು ಜಿಲ್ಲಾಡಳಿತ ಆದೇಶವನ್ನು ಹೊರಡಿಸಿದೆ. Spread the love

    Spread the love

    ಉಚಿತ ಟೈಲರಿಂಗ್ ತರಬೇತಿ ಉದ್ಘಾಟನೆ

    ಸಕಲೇಶಪುರ: ಹಾಸನ ಜಿಲ್ಲೆ ಸಕಲೇಶಪುರ ತಾಲೂಕಿನ ಹಾನುಬಾಳು ಗ್ರಾಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ ಸಕಲೇಶಪುರ ವತಿಯಿಂದ ಜ್ಞಾನ ವಿಕಾಸ ಕಾರ್ಯಕ್ರಮದಡಿಯಲ್ಲಿ ಉಚಿತ ಟೈಲರಿಂಗ್ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು. ಪರಮ ಪೂಜ್ಯ ಶ್ರೀ ಡಾ.ಡಿ ವಿರೇಂದ್ರ…

    Spread the love

    You Missed

    ದ.ಕ ಜಿಲ್ಲೆಯಲ್ಲಿ ಮುಂದುವರಿದ ಮಳೆ ಹಿನ್ನೆಲೆ ಆಗಸ್ಟ್ 30 ಪ್ರಾಥಮಿಕ ಪ್ರೌಢ ಶಾಲೆಗಳಿಗೆ ರಜೆ ಘೋಷಣೆ

    • By admin
    • August 29, 2025
    • 289 views
    ದ.ಕ ಜಿಲ್ಲೆಯಲ್ಲಿ ಮುಂದುವರಿದ ಮಳೆ ಹಿನ್ನೆಲೆ ಆಗಸ್ಟ್ 30 ಪ್ರಾಥಮಿಕ ಪ್ರೌಢ ಶಾಲೆಗಳಿಗೆ ರಜೆ ಘೋಷಣೆ

    ಉಚಿತ ಟೈಲರಿಂಗ್ ತರಬೇತಿ ಉದ್ಘಾಟನೆ

    • By admin
    • August 29, 2025
    • 47 views
    ಉಚಿತ ಟೈಲರಿಂಗ್ ತರಬೇತಿ ಉದ್ಘಾಟನೆ

    ಬಾರಿ ಮಳೆ ಹಿನ್ನೆಲೆಯಲ್ಲಿ ನಾಳೆ ದಕ್ಷಿಣಕನ್ನಡ ಜಿಲ್ಲೆಯಾದ್ಯಂತ ಅಂಗನವಾಡಿ, ಪ್ರಾಥಮಿಕ, ಪ್ರೌಢ ಶಾಲೆ,PUಕಾಲೇಜಿಗೆ ರಜೆ ಘೋಷಣೆ

    • By admin
    • August 28, 2025
    • 320 views
    ಬಾರಿ ಮಳೆ ಹಿನ್ನೆಲೆಯಲ್ಲಿ ನಾಳೆ ದಕ್ಷಿಣಕನ್ನಡ ಜಿಲ್ಲೆಯಾದ್ಯಂತ ಅಂಗನವಾಡಿ, ಪ್ರಾಥಮಿಕ, ಪ್ರೌಢ ಶಾಲೆ,PUಕಾಲೇಜಿಗೆ ರಜೆ ಘೋಷಣೆ

    ಬೆಳ್ತಂಗಡಿ ತಾಲೂಕಿನ ನಿರಂತರ ಮಳೆ ಹಿನ್ನೆಲೆಯಲ್ಲಿ ಪ್ರಾಥಮಿಕ, ಪ್ರೌಢ ಶಾಲೆಗೆ ರಜೆ ಘೋಷಣೆ

    • By admin
    • August 28, 2025
    • 55 views
    ಬೆಳ್ತಂಗಡಿ ತಾಲೂಕಿನ ನಿರಂತರ ಮಳೆ ಹಿನ್ನೆಲೆಯಲ್ಲಿ ಪ್ರಾಥಮಿಕ, ಪ್ರೌಢ ಶಾಲೆಗೆ ರಜೆ ಘೋಷಣೆ

    ನಾಡಿನ ವಿವಿಧೆಡೆ ಗಣೇಶೋತ್ಸವದ ಸಂಭ್ರಮ ಸಡಗರ ಒಂದೆಡೆ ವೀಕ್ಷಿಸಿ ಹಲವು ಗಣಪ

    • By admin
    • August 27, 2025
    • 113 views
    ನಾಡಿನ ವಿವಿಧೆಡೆ ಗಣೇಶೋತ್ಸವದ ಸಂಭ್ರಮ ಸಡಗರ ಒಂದೆಡೆ ವೀಕ್ಷಿಸಿ ಹಲವು ಗಣಪ

    ಶ್ರೀ ಮಹಾಗಣಪತಿ ದೇವಸ್ಥಾನ ಸುಂಕದ ಕಟ್ಟೆ ಅಳದಂಗಡಿ ಇದರ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾಗಿ ಶಶಿಧರ ಡೋಂಗ್ರೆ ಆಯ್ಕೆ

    • By admin
    • August 25, 2025
    • 52 views
    ಶ್ರೀ ಮಹಾಗಣಪತಿ ದೇವಸ್ಥಾನ ಸುಂಕದ ಕಟ್ಟೆ ಅಳದಂಗಡಿ ಇದರ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾಗಿ ಶಶಿಧರ ಡೋಂಗ್ರೆ  ಆಯ್ಕೆ