ಮಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು ಈಗಾಗಲೇ ಸಾಕಷ್ಟು ಸಂಖ್ಯೆಯ ಐಶಾರಾಮಿ ಬಸ್‌ಗಳನ್ನು ಪರಿಚಯಿಸಿದ್ದು, ಇದೀಗ ಈ ಸಾಲಿಗೆ ಪಲಕ್ಕಿ ಎಂಬ ಹೊಸ ಸ್ಲೀಪರ್ ಕೋಚ್ ಬಸ್ ಸೇರ್ಪಡೆಗೊಂಡಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈಗಾಗಲೇ ರಾಜಹಂಸ, ಐರಾವತ, ಅಂಬಾರಿಯಂತಹ ಐಷಾರಾಮಿ ಸ್ಲೀಪರ್ ಕೋಚ್ ಬಸ್‌ಗಳುಲಭ್ಯವಿದ್ದು. ಇತ್ತೀಚೆಗೆ ಸೇರ್ಪಡೆಗೊಂಡ ಪಲ್ಲಕ್ಕಿ ಬಸ್ ಕೂಡ ಮಂಗಳೂರಿಗೆ ಲಗ್ಗೆ ಇಡಲಿದೆ.ಸಾರಿಗೆ ನಿಗಮವು ಪ್ರಸ್ತುತ 12 ಬಸ್ ಗಳು ಕಾರ್ಯಾಚರಣೆಯಲಿದ್ದು, ಆ ಸಾಲಿಗೆ ಈಗ 40 ಪಲ್ಲಕ್ಕಿ ಬಸ್ ಗಳನ್ನು ಸೇರಿಸಲು ಸಂಸ್ಥೆಯು ಯೋಜಿಸಿದೆ.
ಈ ಪೈಕಿ 8 ಬಸ್ ಗಳು ಮಂಗಳೂರಿಗೆ ಹಾಗೂ 4 ಬಸ್ ಗಳು ಪುತ್ತೂರು ವಿಭಾಗಕ್ಕೆ ಹೋಗಲಿವೆ.ಪಲ್ಲಕ್ಕಿ ಬಸ್‌ಗಳು ಸೇರಿದಂತೆ ಬೆಂಗಳೂರಿಗೆ ತೆರಳುವ ಹಲವು ಬಸ್‌ಗಳಿದ್ದು, ಪುತ್ತೂರು ವಲಯಕ್ಕೆ 9 ಹೊಸ ಕರ್ನಾಟಕ ಸಾರಿಗೆ ಬಸ್‌ಗಳು ಆಗಮಿಸಲಿವೆ. ಹೆಚ್ಚುವರಿಯಾಗಿ, ರಾಜ್ಯ ಸಾರಿಗೆ ಸಂಸ್ಥೆಯು ಬಿ.ಸಿ.ರೋಡ್, ಧರ್ಮಸ್ಥಳ ಮತ್ತು ಮಡಿಕೇರಿ ಡಿಪೋಗಳಿಗೆ 2 ಬಸ್ ಗಳನ್ನು ಮತ್ತು ಸುಳ್ಯಕ್ಕೆ 1 ಬಸ್ ಗಳನ್ನು ನಿಯೋಜಿಸಲು ಯೋಜಿಸಿದೆ.