ಮಂಗಳೂರು: ಪಣಂಬೂರು ಸಮುದ್ರ ತೀರದಲ್ಲಿ ದೋಣಿಯೊಂದು ಅಪಘಾತಕ್ಕೀಡಾಗಿದ್ದು, ಮೀನುಗಾರ ನೀರು ಪಾಲಾಗಿದ್ದಾರೆ.
ಅಝರ್ ಮಾಲೀಕತ್ವದ ಗಿಲ್ ನೆಟ್ ಬೋಟ್ ಇದಾಗಿದ್ದು, ಅವಘಡ ಸಂಭವಿಸಿ ನೀರುಪಾಲಾಗಿದ್ದ ಅಬ್ದುಲ್ ಅಜೀಜ್, ಇಂತಿಯಾಜ್, ಸಿನಾನ್, ಫೈರೋಜ್ ಎಂಬ ನಾಲ್ವರು ಮೀನುಗಾರರನ್ನು ದಡದಲ್ಲಿದ್ದ ಸ್ಥಳೀಯರು ರಕ್ಷಣೆ ಮಾಡಿದ್ದಾರೆ.
ಈ ಪೈಕಿ ಒಬ್ಬ ನಾಪತ್ತೆಯಾಗಿದ್ದು ಆತನನ್ನು ಶರೀಫ್ ಎಂದು ಗುರುತಿಸಲಾಗಿದೆ. ಸದ್ಯ ದೋಣಿಯನ್ನು ದಡಕ್ಕೆ ತರಲಾಗಿದೆ.