ಮಂಜೇಶ್ವರ : ಇಲ್ಲಿನ ಕಾಸರಗೋಡಿನಲ್ಲಿ ಮೀನುಗಾರಿಕಾ ದೋಣಿ ಅಪಘಾತಕ್ಕಿಡಾಗಿ ಮೂವರು ನಾಪತ್ತೆಯಾದ ಘಟನೆ ಇಂದು ಬೆಳಗ್ಗೆ ಸಂಭವಿಸಿದೆ.
ಮೀನನ್ನು ಹೊತ್ತು ಬರುತ್ತಿದ್ದ ಹಡಗು ಕಾಸರಗೋಡು ಕಸಬಾ ಬಂದರಿನಲ್ಲಿ ಅಪಘಾತಕ್ಕೆ ಸಿಲುಕಿ ಸಮುದ್ರಕ್ಕೆ ಕುಸಿದು ಬಿದ್ದಿದೆ.
ಅಪಘಾತಕ್ಕೆ ಸಿಲುಕಿದ ಹಡಗಿನಲ್ಲಿದ್ದ ಸ೦ದೀಪ್ (32) ಕಾತಿ೯ಕ್(28) ರತೀಶ್(34) ಎಂಬವರು ನಾಪತ್ತೆಯಾಗಿದ್ದಾರೆ. ಇವರಿಗಾಗಿ ಬಂದರು ಪೊಲೀಸರು ಶೋಧ ಆರಂಭಿಸಿದ್ದಾರೆ.