ಕರಾವಳಿಯ ಹಳ್ಳಿ ಹಳ್ಳಿಗಳಲ್ಲಿ ನೆಟ್ ವರ್ಕ್ ಸಮಸ್ಯೆಯ ಕೂಗು ಬಲು ಜೋರು! ಆನ್ ಲೈನ್ ಕ್ಲಾಸ್ ಗೂ ತಟ್ಟಿದ ನೆಟ್ ವರ್ಕ್ ಬ್ಯುಸಿ ಸಮಸ್ಯೆ

ಕರಾವಳಿಯ ಎಲ್ಲೆಡೆ ಹೋದರು ಅಲ್ಲಲ್ಲಿ ಕಾಣಸಿಗುವುದೇ ಟವರ್ ಗಳ ರಾಶಿ ರಾಶಿ, ಆದರೆ ಇವೆಲ್ಲವೂ ಯಾರಿಗೂ ಸಮಯಕ್ಕೆ ಸರಿಯಾಗಿ ಬಳಕೆ ಮಾಡಲು ಸಾಧ್ಯವಾಗದಷ್ಟು ಕಠಿಣವಾಗಿದೆ.

ಇತ್ತೀಚೆಗಂತೂ ಆನ್ ಲೈನ್ ಕ್ಲಾಸ್ ಗಳು ನಡೆಯುತ್ತಿದ್ದು ಮಕ್ಕಳ ಪರದಾಟಕ್ಕೆ ಕೊನೆಯೇ ಇಲ್ಲದಂತಾಗಿದೆ. ಮೊಬೈಲ್ ನಲ್ಲಿ ಸಿಗ್ನಲ್ ತೋರಿಸಿದರು ನೆಟ್ ಸರಿಯಾಗಿ ಸಿಗದೇ ತೊಂದರೆ ಪಡುವವರ ಸಂಕಷ್ಟ ಅಷ್ಟಿಷ್ಟಲ್ಲ.

ಮೂಲಭೂತ ಸೌಕರ್ಯಗಳ ಪಟ್ಟಿಯಲ್ಲಿ ಮೊಬೈಲ್ ನೆಟ್ ವರ್ಕ್ ಸೇರಿಸುವುದು ಸೂಕ್ತ:

ಮೂಲಭೂತ ಸೌಕರ್ಯದ ಕೊರತೆಯಲ್ಲಿ ಮೊಬೈಲ್ ನೆಟ್ ವರ್ಕ್ ನ್ನು ಸೇರಿಸಿದರೆ ಉತ್ತಮ ಇತ್ತೀಚಿನ ದಿನಗಳಲ್ಲಿ ಮೊಬೈಲ್ ಬಳಕೆ ಮಾಡದೇ ಇರುವ ವ್ಯಕ್ತಿಗಳಿಲ್ಲ ಪ್ರತಿ ಕ್ಷಣಕ್ಷಣಕ್ಕೂ ಎಲ್ಲಾ ವಿಚಾರಗಳಿಗೂ ಮೊಬೈಲ್ ಬಳಕೆ ಕಡೆಗೆ ಜನತೆಯ ಒಲವು ಹೆಚ್ಚಾಗುತ್ತಿದ್ದು ಕುಡಿಯುವ ನೀರು, ರಸ್ತೆ ಸಂಪರ್ಕದಂತೆ ಮೂಲಭೂತ ಸೌಕರ್ಯಗಳ ಪಟ್ಟಿಯಲ್ಲಿ ಮೊಬೈಲ್ ನೆಟ್ ವರ್ಕ್ ಗಳನ್ನು ಸೇರಿಸುವ ಅನಿವಾರ್ಯತೆ ಇದೆ.

ಕಣಿವೆ ಪ್ರದೇಶ – ಘಾಟ್ ರಸ್ತೆಗಳಲ್ಲಿಯೂ ನೆಟ್ ವರ್ಕ್ ಗೆ ಬರ!

ಕರಾವಳಿಯನ್ನು ಸಂದಿಸುವ ಚಾರ್ಮಾಡಿ ಘಾಟ್, ಶಿರಾಡಿ ಘಾಟ್ ರಸ್ತೆಗಳಲ್ಲೂ ಹಲವಾರು ಕಿ.ಮೀ ವರೆಗೆ ನೆಟ್ ವರ್ಕ್ ಮಾಯವಾಗಿದೆ. ಈ ಸ್ಥಳದಲ್ಲಿ ಅಫಘಾತಗಳು ಅಥವಾ ವಾಹನಗಳು ಕೆಟ್ಟು ನಿಂತರೇ ಅಲ್ಲಿ ಆಗುವ ನರಕ ವೇದನೆಯನ್ನು ಹೇಳ ತೀರದು. ವಾಸ್ತವಿಕವಾಗಿ ಈ ಪ್ರದೇಶದಲ್ಲಿ ಕಾನೂನಿನ ತೊಡಕು ಇದ್ದರೂ ಇಂತಹ ಸೂಕ್ಷ್ಮ ಪ್ರದೇಶದಲ್ಲಿ ನೆಟ್ ವರ್ಕ್ ಅನಿವಾರ್ಯವಾಗಿ ಬೇಕಾಗುತ್ತದೆ.

ಹಣ ಕೊಟ್ಟು ನದಿ ದಾಟಿದ ಗಾದೆಯಂತಾಗಿದೆ ಇಂದಿನ ನೆಟ್ ವರ್ಕ್ ಪರಿಸ್ಥಿತಿ:

ಹೌದು ಇತ್ತೀಚಿನ ಕೆಲವೋಂದು ನೆಟ್ ವರ್ಕ್ ಕಂಪೆನಿಗಳ ನಿಯಮ ನಿಬಂಧನೆಗಳನ್ನು ಮೊಬೈಲ್ ಬಳಕೆದಾರರು ಸರಿಯಾಗಿ ಪಾಲನೆ ಮಾಡಬೇಕಾದ ಅನಿವಾರ್ಯತೆ ಬಂದೊದಗಿದೆ. ಇಲ್ಲವಾದಲ್ಲಿ ಕ್ಷಣ ಮಾತ್ರದಲ್ಲಿ ಸಂಪರ್ಕ ಕಡಿತವಾಗುತ್ತದೆ. ಪ್ರತಿ ತಿಂಗಳು ಮೂರುತಿಂಗಳು, ಆರು ತಿಂಗಳು, ವರ್ಷದ ಆಫರ್ ಗಳ ಮೇಲೆ ರಿಚಾರ್ಜ್ ಮಾಡಿಸಿ ಕನಿಷ್ಠ ಮಾತನಾಡಲು ಆಗದಂತಹ ಪರಿಸ್ಥಿತಿಗಳು ಬಹುತೇಕರ  ಅನುಭವಕ್ಕೆ ಬಂದಿರಲೂ ಬಹುದು. ಗ್ರಾಮೀಣ ಪರಿಸರದಲ್ಲಂತೂ ಶೇ.90 ರಷ್ಟು ಮಂದಿ ರಿಚಾರ್ಜ್ ಮಾಡಿ ಮೊಬೈಲ್ ಬಳಕೆ ಮಾಡಲಾಗದೆ ಕಂಗೆಟ್ಟಿರೋದಂತು ಸ್ಪಷ್ಟ.

ನೆಟ್ ವರ್ಕ್ ಸಮಸ್ಯೆಗಳಿಗೆ ಮುಕ್ತಿ ಎಂದು: ಹಲವು ದಿನಗಳಿಂದ ಬಿಗಡಾಯಿಸಿದ ಈ ನೆಟ್ ವರ್ಕ್ ಸಮಸ್ಯೆಗೆ ಶಾಶ್ವತ ಮುಕ್ತಿ ಯಾವಾಗ ಎಂಬುದೇ ಯಕ್ಷ ಪ್ರಶ್ನೆಯಾಗಿ ಉಳಿದಿದೆ. ಶೀಘ್ರದಲ್ಲೇ ಈ ಸಮಸ್ಯೆಗೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಇದಕ್ಕೆ ಸಂಬಂಧಿಸಿದ ಅಧಿಕಾರಿಗಳು ಶಾಶ್ವತ ಪರಿಹಾರಕ್ಕೆ ಕಾರ್ಯತಂತ್ರ ರೂಪಿಸುವಂತಾಗಲಿ.

Spread the love
  • Related Posts

    ರುಡ್ ಸೆಟ್ ಸಂಸ್ಥೆ, ಉಜಿರೆಯಲ್ಲಿ ಉಚಿತ ಮಹಿಳೆಯರ ವಸ್ತ್ರ ವಿನ್ಯಾಸ ತರಬೇತಿ

    ಉಜಿರೆ: ಶ್ರೀ ಕ್ಷೇತ್ರ ಧರ್ಮಸ್ಥಳ ಸಮೀಪದಲ್ಲಿರುವ ರುಡ್ ಸೆಟ್ ಸಂಸ್ಥೆ, ಉಜಿರೆಯಲ್ಲಿ ಮಹಿಳೆಯರ ವಸ್ತ್ರ ವಿನ್ಯಾಸ ತರಬೇತಿ / Dress Designing (ಚೂಡಿದಾರ್, ಬ್ಲೌಸ್, ಗೌನ್‌, ಸಾರಿ ಸ್ಕರ್ಟ್, ನೈಟಿ, ಫ್ರಾಕ್ , ಸ್ಯಾರಿ ಫಾಲ್, ಸಾರಿ ಕುಚ್ಚು ಇತ್ಯಾದಿ) ತರಬೇತಿಯನ್ನು…

    Spread the love

    ಮೋಸ ಮೋಸ ಮಹಾಮೋಸ ಆನೆ ಮೇಲೆ ಕ್ಲಿಕ್ ಮಾಡಿ ಹಣ ಗೆಲ್ಲಿ ಸಂದೇಶ ರವಾನೆ, ಪಾವತಿಗೂ ಮುನ್ನಾ ಜಾಗೃತರಾಗಿ

    ಮೋಸ ಹೋಗುವವರು ಇರುವವರೆಗೂ ಮೋಸಮಾಡುವವರು ಜೀವಂತ ಇರುತ್ತಾರೆ ಹಾಗಂತಾ ನಾವು ನಮ್ಮ ಎಚ್ಚರಿಕೆಯಲ್ಲಿ ಇರಬೇಕು ಸ್ವಲ್ಪ ಯಮಾರಿದ್ರು ಖಾತೆಯಿಂದ ಮಾಯವಾಗಬಹುದು. ಹಣ ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಬೇರೆಬೇರೆ ರೀತಿಯಲ್ಲಿ ಹಣ ಕಳೆದುಕೊಂಡವರನ್ನು ಕಾಣಬಹುದು ಹಾಗೆ ಮೋಸ ಮಾಡುವವರು ಬೇರೆ ಬೇರೆ…

    Spread the love

    You Missed

    ಬೆಳ್ತಂಗಡಿ ವಕೀಲರ ಸಂಘದಿಂದ ಕ್ರಿಸ್ಮಸ್ ಹಬ್ಬದ ಆಚರಣೆ

    • By admin
    • December 17, 2024
    • 86 views
    ಬೆಳ್ತಂಗಡಿ ವಕೀಲರ ಸಂಘದಿಂದ ಕ್ರಿಸ್ಮಸ್ ಹಬ್ಬದ ಆಚರಣೆ

    ರುಡ್ ಸೆಟ್ ಸಂಸ್ಥೆ, ಉಜಿರೆಯಲ್ಲಿ ಉಚಿತ ಮಹಿಳೆಯರ ವಸ್ತ್ರ ವಿನ್ಯಾಸ ತರಬೇತಿ

    • By admin
    • December 15, 2024
    • 49 views
    ರುಡ್ ಸೆಟ್ ಸಂಸ್ಥೆ,  ಉಜಿರೆಯಲ್ಲಿ  ಉಚಿತ ಮಹಿಳೆಯರ ವಸ್ತ್ರ ವಿನ್ಯಾಸ ತರಬೇತಿ

    ಮೋಸ ಮೋಸ ಮಹಾಮೋಸ ಆನೆ ಮೇಲೆ ಕ್ಲಿಕ್ ಮಾಡಿ ಹಣ ಗೆಲ್ಲಿ ಸಂದೇಶ ರವಾನೆ, ಪಾವತಿಗೂ ಮುನ್ನಾ ಜಾಗೃತರಾಗಿ

    • By admin
    • December 14, 2024
    • 53 views
    ಮೋಸ ಮೋಸ ಮಹಾಮೋಸ ಆನೆ ಮೇಲೆ ಕ್ಲಿಕ್ ಮಾಡಿ ಹಣ ಗೆಲ್ಲಿ ಸಂದೇಶ ರವಾನೆ,  ಪಾವತಿಗೂ ಮುನ್ನಾ ಜಾಗೃತರಾಗಿ

    ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ ವೀರೇಂದ್ರ ಹೆಗ್ಗಡೆಯವರಿಂದ  ರಾಷ್ಟ್ರಪತಿಗಳ  ಭೇಟಿ

    • By admin
    • December 12, 2024
    • 136 views
    ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ ವೀರೇಂದ್ರ ಹೆಗ್ಗಡೆಯವರಿಂದ  ರಾಷ್ಟ್ರಪತಿಗಳ  ಭೇಟಿ

    ಜಮ್ಮು ಮತ್ತು ಕಾಶ್ಮೀರದ ಪೂಂಚ್‌ನಲ್ಲಿ ನೆಲಬಾಂಬ್ ಸ್ಫೋಟದಲ್ಲಿ ಯೋಧ ಹುತಾತ್ಮ

    • By admin
    • December 10, 2024
    • 75 views
    ಜಮ್ಮು ಮತ್ತು ಕಾಶ್ಮೀರದ ಪೂಂಚ್‌ನಲ್ಲಿ ನೆಲಬಾಂಬ್ ಸ್ಫೋಟದಲ್ಲಿ ಯೋಧ ಹುತಾತ್ಮ

    ಮುರುಡೇಶ್ವರ ಪ್ರವಾಸಕ್ಕೆ ಬಂದ ವಿದ್ಯಾರ್ಥಿನಿಯರು ಸಮುದ್ರದ ನೀರಿನಲ್ಲಿ ಮುಳುಗಿ ನಾಪತ್ತೆ

    • By admin
    • December 10, 2024
    • 86 views
    ಮುರುಡೇಶ್ವರ ಪ್ರವಾಸಕ್ಕೆ ಬಂದ ವಿದ್ಯಾರ್ಥಿನಿಯರು ಸಮುದ್ರದ ನೀರಿನಲ್ಲಿ ಮುಳುಗಿ ನಾಪತ್ತೆ