ಮುಂಡಿತ್ತಡ್ಕ: ಶ್ರೀ ಮಹಾವಿಷ್ಣು ಭಜನಾ ಸಂಘ(ರಿ) ಇದರ 32ನೇ ವಾರ್ಷಿಕೋತ್ಸವವು ವಿವಿಧ ವೈದಿಕ ಹಾಗೂ ಭಜನಾ ಕಾರ್ಯಕ್ರಮಗಳೊಂದಿಗೆ ಸಂಪನ್ನಗೊಂಡಿತು.
25/1/2022 ನೇ ಮಂಗಳವಾರದಂದು ಭಜನಾ ಸಂಘದ ಹಿರಿಯ ಸದಸ್ಯರಾದ ಶ್ರೀ ರಾಮಣ್ಣ ನಾಯ್ಕ ನೂಜಿಲ ಇವರ ದಿವ್ಯಹಸ್ತದಿಂದ ದೀಪ ಪ್ರಜ್ವಲನೆಗೊಂಡು ಶ್ರೀ ಅಶೋಕ ಅರಿಯಪ್ಪಾಡಿ ಮತ್ತು ಬಳಗದಿಂದ ಭಕ್ತಿ ಸಂಗೀತ ಕಾರ್ಯಕ್ರಮ ನಡೆಯಿತು. ನಂತರ ಶ್ರೀ ದೇವರಿಗೆ ಮಹಾಪೂಜೆ, ಪ್ರಸಾದ ವಿತರಣೆ ಹಾಗೂ ಅನ್ನದಾನ ನಡೆಯಿತು. ಎರಡನೆ ದಿನವಾದ 26/1/2022 ರಂದು ಶ್ರೀ ದುರ್ಗಾಪರಮೇಶ್ವರಿ ಭಜನಾ ಸಂಘ ಕಂಬಾರ್ ಇವರಿಂದ ಭಜನಾ ಸಂಕೀರ್ತನೆ ಹಾಗೂ ಕುಣಿತ ಭಜನೆ ನಡೆಯಿತು. ನಂತರ ಶ್ರೀ ದೇವರಿಗೆ ಮಹಾಪೂಜೆ ಪ್ರಸಾದ ವಿತರಣೆ ಹಾಗೂ ಅನ್ನಪ್ರಸಾದದೊಂದಿಗೆ ದಿನ ಸಂಪನ್ನಗೊಂಡಿತು.
ದಿನಾಂಕ 27/1/2022 ನೇ ಗುರುವಾರ ಬೆಳಗ್ಗೆ 9 ಗಂಟೆಗೆ ದೇಲಂಪಾಡಿ ಶ್ರೀ ಗಣೇಶ್ ತಂತ್ರಿಯವರ ಮಾರ್ಗದರ್ಶನದಲ್ಲಿ 12 ತೆಂಗಿನಕಾಯಿಗಳ ಗಣಹೋಮ, ಪ್ರತಿಷ್ಠಾ ದಿನ ಕಾರ್ಯಕ್ರಮ ಹಾಗೂ ಸಾರ್ವಜನಿಕ ಸತ್ಯನಾರಾಯಣ ಪೂಜೆ ಜರಗಿತು. ತದನಂತರ ಶ್ರೀ ದೇವರಿಗೆ ಮಹಾಮಂಗಳಾರತಿ ಹಾಗೂ ಪ್ರಸಾದ ವಿತರಣೆ,ಅನ್ನ ಸಂತರ್ಪಣೆ ನಡೆಯಿತು. ಮಧ್ಯಾಹ್ನ 12 ಗಂಟೆಯಿಂದ ರಾತ್ರಿ 12 ಗಂಟೆಯವರೆಗೆ ವಿವಿಧ ಭಜನಾ ತಂಡಗಳಿಂದ ಭಜನಾ ಸಂಕೀರ್ತನೆ ನಡೆಯಿತು. ನಂತರ ಶ್ರೀ ಮಹಾವಿಷ್ಣು ದೇವರಿಗೆ ಮಹಾಪೂಜೆ ಹಾಗೂ ಪ್ರಸಾದ ವಿತರಣೆಯೊಂದಿಗೆ ಕಾರ್ಯಕ್ರಮವು ಸಂಪನ್ನಗೊಂಡಿತು. ಊರಿನ ಹಾಗೂ ಪರವೂರಿನ ಭಗವದ್ಭಕ್ತರು ಎಲ್ಲಾ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಶ್ರೀ ದೇವರ ಕೃಪೆಗೆ ಪಾತ್ರರಾದರು.