
ಬೆಳ್ತಂಗಡಿ: ಪೂಂಜಾಲಕಟ್ಟೆ ಠಾಣೆಯ ಪಿ.ಎಸ್.ಐ ಆಗಿ ಕಾರ್ಯನಿ ರ್ವಹಿಸುತ್ತಿದ್ದ ನಂದಕುಮಾರ್. ಎಂ.ಎಸ್ ಅವರಿಗೆ ಪೊಲೀಸ್ ಇನ್ಸ್ ಪೆಕ್ಟರ್ ಆಗಿ ಮುಂಬಡ್ತಿ ನೀಡಿ ಇಲಾಖೆ ಆದೇಶ ಹೊರಡಿಸಿದೆ. ರಾಜ್ಯದಲ್ಲಿ ಒಟ್ಟು 36 ಮಂದಿಗೆ ಮುಂಬಡ್ತಿ ಲಭಿಸಿದ್ದು ನಂದಕುಮಾರ್ ಅವರಿಗೆ ಬಡ್ತಿ ನೀಡಿ ಡಿ.ಎಸ್.ಬಿ ದ.ಕ ಜಿಲ್ಲೆ ಇಲ್ಲಿಗೆ ಇನ್ಸ್ ಪೆಕ್ಟರ್ ಆಗಿ ನೇಮಕಗೊಳಿಸಿ ಆದೇಶ ಹೊರಡಿಸಲಾಗಿದೆ.