ಪ್ರಕೃತಿಯ ಮಡಿಲಲ್ಲಿದೆ ‘ನೋನಿ’ಯೆಂಬ ಸಂಜೀವಿನಿ

🖊️ ಸಂಪಾದಕೀಯ

ನಮ್ಮ ಪರಿಸರದಲ್ಲಿ ಅದೆಷ್ಟು ಔಷಧೀಯ ಗುಣಗಳಿರುವ ಸಸ್ಯ ಪ್ರಭೇದಗಳಿವೆ. ಪ್ರಭೇದಗಳನ್ನು ಗುರುತಿಸಿ ಅವುಗಳಲ್ಲಿ ಔಷಧೀಯ ಗುಣಗಳಿವೆ ಎಂಬುದನ್ನು ನಾವು ತಿಳಿದುಕೊಂಡಿರುವುದಿಲ್ಲ. ಆರೋಗ್ಯವನ್ನು ಕಾಪಾಡುವಲ್ಲಿ ಹಣ್ಣುಗಳು ಸಹ ಮುಖ್ಯ ಪಾತ್ರವಹಿಸಿವೆ. ಕೆಲವೊಂದು ಹಣ್ಣುಗಳನ್ನು ತಿಂದರೆ ಕೆಲವೊಂದು ಕಾಯಿಲೆಗಳು ದೂರವಾಗುತ್ತದೆ. ಇದರಂತೆ ನೋನಿ ಹಣ್ಣು ಸೇವಿಸಿದರೆ ಆರೋಗ್ಯ ವೃದ್ಧಿಸುವುದು ಖಂಡಿತ.

ನೋನಿ ಹಣ್ಣು ಮೂಲತಃ ಭಾರತದ ಔಷಧೀಯ ಹಣ್ಣುಗಳಲ್ಲಿ ಒಂದು. ಪ್ರಕೃತಿಯಲ್ಲಿ ದೊರೆಯುವ ಅದ್ಭುತ ಆರೋಗ್ಯ ಹಾಗೂ ರೋಗನಿರೋಧಕ ಹಣ್ಣು ಇದಾಗಿದ್ದು ಈ ಹಣ್ಣು ಮೋರಿಂಡ ಸಿಕ್ರೆ ಪೋಲಿಯ ಎಂಬ ಸಸ್ಯ ಪ್ರಭೇದಕ್ಕೆ ಸೇರಿದೆ.

ಸುಮಾರು 150ಕ್ಕೂ ಹೆಚ್ಚಿನ ಪೋಷಕಾಂಶಗಳನ್ನು ಹೊಂದಿರುವ ನೋನಿ ಕಾಯಿಯು ಹಲವು ಕಾಯಿಲೆಗಳ ಶಮನಕ್ಕೆ ಉಪಯುಕ್ತವಾಗಿದೆ ಮಾನಸಿಕ ಒತ್ತಡ ಅಲರ್ಜಿ ಅಸ್ತಮಾ ಕ್ಯಾನ್ಸರ್ ಗಂಟಲು ನೋವು ಕೂದಲು ಉದರುವಿಕೆ ಸಕ್ಕರೆಕಾಯಿಲೆ ಮೂತ್ರಜನಕಾಂಗದ ಕಾಯಿಲೆ ಚರ್ಮರೋಗ ಕೆಮ್ಮು ಜ್ವರಗಳಂಥ ಕಾಯಿಲೆಗಳಿಗೂ ಕೂಡ ರಾಮಬಾಣವಾಗಿದೆ. ವಿಟಮಿನ್ ಸಿ, ಎ, ಬಿ ಮತ್ತು ಕಬ್ಬಿಣದ ಅಂಶಗಳನ್ನು ಹೊಂದಿರುವ ನೋನಿ ಹಣ್ಣಿನ ಬಳಕೆಯಿಂದ ಆರೋಗ್ಯಕ್ಕೆ ಹಲವಾರು ಪ್ರಯೋಜನಗಳಿವೆ.

ಔಷಧೀಯ ಗುಣವನ್ನು ಹೊಂದಿರುವ ಈ ನೋನಿಯ ಜೊತೆ ನೀರು, ಬೆಲ್ಲ, ಏಲಕ್ಕಿ ಸೇರಿಸಿ ಜ್ಯೂಸ್ ಮಾಡಿದಾಗ ಹಾಲಿನಂತೆ ನೋರೆಯು ಬರುತ್ತದೆ. ಕುಡಿಯಲು ರುಚಿಕರವಾಗಿರುವ ನೋನಿ ಹಣ್ಣುಗಳನ್ನು ನಿತ್ಯವೂ ಸೇವನೆ ಮಾಡುವುದರಿಂದ ಆರೋಗ್ಯಕ್ಕೆ ಹೊಸ ಚೈತನ್ಯವನ್ನು ಪಡೆಯಬಹುದು.

ನೋನಿ ಹಣ್ಣಿನಲ್ಲಿರುವ ಔಷಧೀಯ ಗುಣಗಳ ಬಗ್ಗೆ ವಿಶ್ವವಿದ್ಯಾನಿಲಯದ ಸಂಶೋಧನೆಯಿಂದಲೂ ದೃಢಪಟ್ಟಿದೆ. ರೋಗನಿರೋಧಕ ಶಕ್ತಿಯನ್ನು ವೃದ್ಧಿಸಲು, ಮಾನಸಿಕ ಒತ್ತಡದಿಂದ ಮುಕ್ತರಾಗಲು, ನಿದ್ರೆಯ ಸಮಸ್ಯೆ ಇರುವವರು, ಸುಸ್ತು ಕಾಡುತ್ತಿರುವವರು, ಉಸಿರಾಟದ ಸಮಸ್ಯೆ ಇರುವವರು, ಮಲಬದ್ಧತೆ, ರಕ್ತದೊತ್ತಡ, ಕೀಲುನೋವು, ಹೃದಯಸಂಬಂಧಿ ಕಾಯಿಲೆಗಳು, ಖಿನ್ನತೆಯಿಂದ ಬಳಲುತ್ತಿರುವವರು ಹಾಗೂ ಪಿತ್ತಜನಕಾಂಗ ಮೂತ್ರಜನಕಾಂಗದ ನಿರ್ವಹಣೆಗೆ ಸುಗಮವಾಗುವಂತೆ ನೋಡಿಕೊಳ್ಳಲು ನೋನಿ ಹಣ್ಣು ನೆರವಾಗುತ್ತದೆ.

ನೋನಿಯನ್ನು ಔಷಧಿಯಾಗಿ ಸೇವಿಸುವರು ಮೊದಲ ಮೂರು ದಿನ ಬೆಳಗಿನ ಉಪಹಾರಕ್ಕೆ ಮುಂಚಿತವಾಗಿ ಒಂದು ಟೀ ಸ್ಪೂನ್ ಸೇವಿಸಬೇಕು. ಒಂದು ತಿಂಗಳ ಸೇವನೆಯ ನಂತರ ಉಪಹಾರಕ್ಕೆ ಮುಂಚೆ ಎರಡು ಸ್ಪೂನ್, ಮಧ್ಯಾಹ್ನ ಊಟಕ್ಕಿಂತ ಮೊದಲು 2 ಸ್ಪೂನ್ ರಸವನ್ನು ಸೇವಿಸಬೇಕು. ಕೇವಲ ಹಣ್ಣು ಮಾತ್ರವಲ್ಲದೇ ನೋನಿಯ ಎಲೆಗಳು ಕೂಡ ಬಹಳಷ್ಟು ಉಪಯುಕ್ತವಾಗಿದ್ದು ಎಲೆಯಿಂದ ತೆಗೆದ ರಸ ಅನೇಕ ರೀತಿಯ ಚರ್ಮರೋಗಗಳನ್ನು ನಿವಾರಿಸುತ್ತದೆ. ಅದ್ರಲ್ಲೂ ನೋನಿ ಎಲೆಯ ಕಷಾಯವನ್ನು ಜ್ವರ ನಿವಾರಕವಾಗಿಯೂ ಬಳಸಬಹುದು.

Spread the love
  • Related Posts

    ದ.ಕ ಜಿಲ್ಲೆಯಲ್ಲಿ ಮುಂದುವರಿದ ಮಳೆ ಹಿನ್ನೆಲೆ ಆಗಸ್ಟ್ 30 ಪ್ರಾಥಮಿಕ ಪ್ರೌಢ ಶಾಲೆಗಳಿಗೆ ರಜೆ ಘೋಷಣೆ

    ಮಂಗಳೂರು: ಬಾರಿ ಮಳೆ ಹಿನ್ನೆಲೆಯಲ್ಲಿ 30/08/2025ನೇ ಶುಕ್ರವಾರ ದಕ್ಷಿಣಕನ್ನಡ ಜಿಲ್ಲೆಯಾದ್ಯಂತ ಅಂಗನವಾಡಿ, ಪ್ರಾಥಮಿಕ, ಪ್ರೌಢ ಶಾಲೆಗಳಿಗೆ ರಜೆ ಘೋಷಿಸಲಾಗಿದೆ ಎಂದು ಜಿಲ್ಲಾಡಳಿತ ಆದೇಶವನ್ನು ಹೊರಡಿಸಿದೆ. Spread the love

    Spread the love

    ಉಚಿತ ಟೈಲರಿಂಗ್ ತರಬೇತಿ ಉದ್ಘಾಟನೆ

    ಸಕಲೇಶಪುರ: ಹಾಸನ ಜಿಲ್ಲೆ ಸಕಲೇಶಪುರ ತಾಲೂಕಿನ ಹಾನುಬಾಳು ಗ್ರಾಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ ಸಕಲೇಶಪುರ ವತಿಯಿಂದ ಜ್ಞಾನ ವಿಕಾಸ ಕಾರ್ಯಕ್ರಮದಡಿಯಲ್ಲಿ ಉಚಿತ ಟೈಲರಿಂಗ್ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು. ಪರಮ ಪೂಜ್ಯ ಶ್ರೀ ಡಾ.ಡಿ ವಿರೇಂದ್ರ…

    Spread the love

    You Missed

    ದ.ಕ ಜಿಲ್ಲೆಯಲ್ಲಿ ಮುಂದುವರಿದ ಮಳೆ ಹಿನ್ನೆಲೆ ಆಗಸ್ಟ್ 30 ಪ್ರಾಥಮಿಕ ಪ್ರೌಢ ಶಾಲೆಗಳಿಗೆ ರಜೆ ಘೋಷಣೆ

    • By admin
    • August 29, 2025
    • 264 views
    ದ.ಕ ಜಿಲ್ಲೆಯಲ್ಲಿ ಮುಂದುವರಿದ ಮಳೆ ಹಿನ್ನೆಲೆ ಆಗಸ್ಟ್ 30 ಪ್ರಾಥಮಿಕ ಪ್ರೌಢ ಶಾಲೆಗಳಿಗೆ ರಜೆ ಘೋಷಣೆ

    ಉಚಿತ ಟೈಲರಿಂಗ್ ತರಬೇತಿ ಉದ್ಘಾಟನೆ

    • By admin
    • August 29, 2025
    • 43 views
    ಉಚಿತ ಟೈಲರಿಂಗ್ ತರಬೇತಿ ಉದ್ಘಾಟನೆ

    ಬಾರಿ ಮಳೆ ಹಿನ್ನೆಲೆಯಲ್ಲಿ ನಾಳೆ ದಕ್ಷಿಣಕನ್ನಡ ಜಿಲ್ಲೆಯಾದ್ಯಂತ ಅಂಗನವಾಡಿ, ಪ್ರಾಥಮಿಕ, ಪ್ರೌಢ ಶಾಲೆ,PUಕಾಲೇಜಿಗೆ ರಜೆ ಘೋಷಣೆ

    • By admin
    • August 28, 2025
    • 308 views
    ಬಾರಿ ಮಳೆ ಹಿನ್ನೆಲೆಯಲ್ಲಿ ನಾಳೆ ದಕ್ಷಿಣಕನ್ನಡ ಜಿಲ್ಲೆಯಾದ್ಯಂತ ಅಂಗನವಾಡಿ, ಪ್ರಾಥಮಿಕ, ಪ್ರೌಢ ಶಾಲೆ,PUಕಾಲೇಜಿಗೆ ರಜೆ ಘೋಷಣೆ

    ಬೆಳ್ತಂಗಡಿ ತಾಲೂಕಿನ ನಿರಂತರ ಮಳೆ ಹಿನ್ನೆಲೆಯಲ್ಲಿ ಪ್ರಾಥಮಿಕ, ಪ್ರೌಢ ಶಾಲೆಗೆ ರಜೆ ಘೋಷಣೆ

    • By admin
    • August 28, 2025
    • 52 views
    ಬೆಳ್ತಂಗಡಿ ತಾಲೂಕಿನ ನಿರಂತರ ಮಳೆ ಹಿನ್ನೆಲೆಯಲ್ಲಿ ಪ್ರಾಥಮಿಕ, ಪ್ರೌಢ ಶಾಲೆಗೆ ರಜೆ ಘೋಷಣೆ

    ನಾಡಿನ ವಿವಿಧೆಡೆ ಗಣೇಶೋತ್ಸವದ ಸಂಭ್ರಮ ಸಡಗರ ಒಂದೆಡೆ ವೀಕ್ಷಿಸಿ ಹಲವು ಗಣಪ

    • By admin
    • August 27, 2025
    • 110 views
    ನಾಡಿನ ವಿವಿಧೆಡೆ ಗಣೇಶೋತ್ಸವದ ಸಂಭ್ರಮ ಸಡಗರ ಒಂದೆಡೆ ವೀಕ್ಷಿಸಿ ಹಲವು ಗಣಪ

    ಶ್ರೀ ಮಹಾಗಣಪತಿ ದೇವಸ್ಥಾನ ಸುಂಕದ ಕಟ್ಟೆ ಅಳದಂಗಡಿ ಇದರ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾಗಿ ಶಶಿಧರ ಡೋಂಗ್ರೆ ಆಯ್ಕೆ

    • By admin
    • August 25, 2025
    • 52 views
    ಶ್ರೀ ಮಹಾಗಣಪತಿ ದೇವಸ್ಥಾನ ಸುಂಕದ ಕಟ್ಟೆ ಅಳದಂಗಡಿ ಇದರ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾಗಿ ಶಶಿಧರ ಡೋಂಗ್ರೆ  ಆಯ್ಕೆ