ನವರಾತ್ರಿಯ 9ನೇ ದಿನ ಸಿದ್ಧಿದಾತ್ರಿ ದೇವಿಯನ್ನು ಆರಾಧಿಸುವ ಪದ್ಧತಿ ಹಾಗೂ ಮಹತ್ವ

ನವರಾತ್ರಿ 9ನೇ ದಿನ: ಸಿದ್ಧಿದಾತ್ರಿ ದೇವಿಯನ್ನು ಈ ಮಂತ್ರಗಳನ್ನು ಹೇಳುತ್ತಾ ಪೂಜಿಸಿದರೆ ಒಳ್ಳೆಯದು ನವರಾತ್ರಿಯ 9ನೇ ಹಾಗೂ ಕೊನೆಯ ದಿನದಂದು ತಾಯಿ ಸಿದ್ಧಿದಾತ್ರಿ ಯ ಪೂಜೆ ಮಾಡಲಾಗುವುದು.

ಈ ದಿನವನ್ನು ತುಂಬಾ ಸಂಭ್ರಮ ಹಾಗೂ ಸಡಗರಿಂದ ಆಚರಣೆ ಮಾಡಲಾಗುತ್ತದೆ.ದುರ್ಗಾದೇವಿಯು ಈಶ್ವರ ದೇವರ ದೇಹವನ್ನು ಪ್ರವೇಶಿಸಿ ಅರ್ಧ ಭಾಗದಲ್ಲಿ ನೆಲೆನಿಂತರು ಎನ್ನಲಾಗುತ್ತದೆ.ತಾಯಿ ಸಿದ್ಧಿದಾರ್ಥಿಯು ಕೆಂಪು ತಾವರೆ ಮೇಲೆ ವಿರಾಜಮಾನರಾಗಿರುವರು. ಅವರು ಸಿಂಹವಾಹಿನಿಯಾಗುವರು. ಅವರ ಕೈಯಲ್ಲಿ ಶಂಖ, ರಾಜದಂಡ ಮತ್ತು ತಾವರೆಯಿರುವುದು ಸಿದ್ಧಿಧಾತ್ರಿ ತಾಯಿಯ ಕಥೆ ಸಿದ್ಧಿಧಾತ್ರಿ ದೇವಿಯು ತ್ರಿಮೂರ್ತಿಗಳಾಗಿರುವ ಬ್ರಹ್ಮ, ವಿಷ್ಣು, ಮಹೇಶ್ವರರಿಗೆ ಆಧ್ಯಾತ್ಮಿಕ ವೈಭವ ಹಾಗೂ ಪರಿಪೂರ್ಣತೆ ನೀಡುವರು.

ಆಕೆ ಅಷ್ಟ ಮಹಾಸಿದ್ಧಿಯನ್ನು ನಿರ್ಮಿಸಿ ಅದನ್ನು ತ್ರಿಮೂರ್ತಿಗಳಿಗೆ ನೀಡುವರು. ಇದಕ್ಕೆ ಮೊದಲು ಅವರು ತುಂಬಾ ಆಧ್ಯಾತ್ಮಿಕ ಸಾಧನೆ ಮಾಡಬೇಕಾಯಿತು. ತಾಯಿ ಸಿದ್ಧಿಧಾತ್ರಿಯು ಪರಿಪೂರ್ಣತೆ, ಎಲ್ಲಾ ರೀತಿಯ ಶಕ್ತಿ, ವೈಭವ ಮತ್ತು ಮಹಿಮೆಯ ಮೂಲ.ತಾಯಿ ಸಿದ್ಧಿಧಾತ್ರಿಯ ಪ್ರಾಮುಖ್ಯತೆ ತಾಯಿ ಸಿದ್ಧಿಧಾತ್ರಿಯು ಕೇತುವಿನ ಅಧಿಪತಿಯಾಗಿರುವರು. ಆಕೆ ಜನರ ಮನಸ್ಸಿನ ಮೇಲೆ ಆಡಳಿತ ನಡೆಸುವರು ಮತ್ತು ಅವರು ಶಿಸ್ತುಬದ್ಧ ಹಾಗೂ ಆಧ್ಯಾತ್ಮಿಕ ಜೀವನದಲ್ಲಿ ಮುಂದುವರಿಯಲು ಪ್ರೇರೇಪಿಸುವರು. ಸಿದ್ಧಿಧಾತ್ರಿ ದೇವಿಯ ಪೂಜೆ ಮಾಡುವುದರಿಂದ ಹೆಚ್ಚಿನ ಆಧ್ಯಾತ್ಮಿಕ ಜ್ಞಾನ ಮತ್ತು ಸ್ವಯಂ ಪರಿಶೋಧನೆ ಸಿಗುವುದು.

ಜನ್ಮಕುಂಡಲಿಯಲ್ಲಿ ಕೇತುವಿನಿಂದ ಆಗಿರುವಂತಹ ಯಾವುದೇ ಕೆಡುಕನ್ನು ಸಿದ್ಧಿಧಾತ್ರಿ ದೇವಿಯು ನಿವಾರಿಸುವರು.9ನೇ ದಿನ ಸಿದ್ಧಿಧಾತ್ರಿ ದೇವಿಯ ಪೂಜೆ ತಾಯಿ ಸಿದ್ಧಿಧಾತ್ರಿ ಪೂಜೆಗೆ ಮಲ್ಲಿಗೆ ಹೂವನ್ನು ಬಳಸಬೇಕು. ಸುಗಂಧ ಭರಿತವಾಗಿರುವ ಮಲ್ಲಿಗೆ ಹೂವನ್ನು ದೇವಿಗೆ ಅರ್ಪಿಸಿದ ಬಳಿಕ ಏಕಾಗ್ರತೆ ಹಾಗೂ ಭಕ್ತಿಯಿಂದ ಪೂಜೆ ಮಾಡಬೇಕು. ಷೋಡಸೋಪಚಾರ ಪೂಜೆ ಮಾಡಿದ ಬಳಿಕ ಆರತಿಯೊಂದಿಗೆ ಪೂಜೆ ಕೊನೆಗೊಳಿಸಿ, ಕುಟುಂಬದ ಸಮೃದ್ಧಿ ಹಾಗೂ ಯಶಸ್ಸಿಗೆ ಪ್ರಾರ್ಥಿಸಬೇಕು. ಇದು ನವರಾತ್ರಿಯ ಅಂತಿಮ ದಿನವಾಗಿರುವ ಕಾರಣದಿಂದಾಗಿ ದೈವಿಕ ಶಕ್ತಿಯು ಕಂಡುಬರುವುದು ಮಾತ್ರವಲ್ಲದೆ, ಸಂಭ್ರಮ ಹಾಗೂ ತೃಪ್ತಿ ಇರುವುದು.

ನವರಾತ್ರಿಯ 9ನೇ ದಿನ ತಾಯಿ ಸಿದ್ಧಿಧಾತ್ರಿಯ ಮಂತ್ರಗಳು

ಓಂ ದೇವಿ ಸಿದ್ಧಿಧಾತ್ರಿಯೈ ನಮಃ ಓಂ ದೇವಿ ಸಿದ್ಧಿಧಾತ್ರಿಯೈ ನಮಃ ಸಿದ್ಧ ಗಂಧರ್ವ ಯಕ್ಷದ್ಯರಸುರೈರಮಾರೈರಪಿ ಸೆವ್ಯಾಮಾನಾ ಸದಾಭುಯಾತ್ ಸಿದ್ಧಿದಾ ಸಿದ್ದಿದಾಯಿನಿ9ನೇ ದಿನ ತಾಯಿ ಸಿದ್ಧಧಾತ್ರಿ ದೇವಿಯ ಪ್ರಾರ್ಥನೆ ಸಿದ್ಧ ಗಂಧರ್ವ ಯಕ್ಷದ್ಯರಸುರೈರಮಾರೈರಪಿ ಸೆವ್ಯಾಮಾನಾ ಸದಾಭುಯಾತ್ ಸಿದ್ಧಿದಾ ಸಿದ್ದಿದಾಯಿನಿಸಿದ್ಧಿಧಾತ್ರಿ ದೇವಿಯ ಸ್ತುತಿ ಯಾ ದೇವಿ ಸರ್ವಭುತೇಶ್ವರ ಸಿದ್ಧಿಧಾತ್ರಿ ರೂಪನೇ ಸಂಹಿತಾ ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃನವರಾತ್ರಿ 9ನೇ ದಿನ ಸಿದ್ಧಿಧಾತ್ರಿ ದೇವಿಯ ಧಾನ್ಯ ವಂದೇ ವಂಚಿತ ಮನೋರಥಾರ್ಥ ಚಂದ್ರಧಕ್ರತ್ವಶೇಖರಂ ಕಮಲಸ್ತಿತ್ ಚತುರ್ಭುಜಾ ಸಿದ್ದಿದಾತ್ರಿ ಯಾಶಸ್ವಿನೀಂ ಸ್ವರ್ಣವರ್ಣ ನಿರ್ವಾಚಕ್ರ ಸ್ತರಂ ನವಂ ದುರ್ಗಾ ತ್ರಿನೇತ್ರಂ ಶಂಖ, ಚಕ್ರ, ಗಧ, ಪದ್ಮಧರಂ ಸಿದ್ದಿದಾತ್ರಿ ಭಜೆಂ ಪತಂಬರಾ ಪರಿಧಿಂ ಮೃದುಹಾಸ ನಾನಾಲಂಕರಾ ಭೂಷಿತಂ ಮಂಜೀರಾ, ಹರಾ, ಕೀರುರಾ, ಕಿಂಕಿನಿ, ರತ್ನಾಕುಂಡಲ ಮಂಡಿತಂ ಪ್ರಫುಲ್ಲಾ ವಂದನಾ ಪಲ್ಲವಧರಂ ಕಾಂತಾ ಕಪೋಲಮ್ ಪಿನ್ ಪಯೋಧರಂ ಕಾಮನಿಯಮ್ ಲವಣಂ ಶ್ರೀನಾಕತಿ ನಿಮ್ನಾನಾಭಿ ನಿತಂಬನಿಂ9ನೇ ದಿನ ದೇವಿ ಸಿದ್ಧಿಧಾತ್ರಿ ಸ್ತೋತ್ರ ಕಂಚನಾಭ ಶಂಖಚಕ್ರಗಧಪದ್ಮಾಧರ ಮುಕುಟೊಜ್ವಲೋ ಶೆರ್ಮಮುಖಿ ಶಿವಪತ್ನಿ ಸಿದ್ಧಿಧಾತ್ರಿ ನಮೋಸ್ತುತೆ ಪತಂಬರ ಪರಿಧನಂ ನಾನಾಲಂಕಾರ ಭೂಷಿತಂ ನಲಿಸ್ಥಿತಂ ನಳನಾರಕ್ಷಿ ಸಿದ್ದಿಧಾತ್ರಿ ನಮೋಸ್ತುತೆ ಪರಮಾನಂದಮಯಿ ದೇವಿ ಪರಬ್ರಹ್ಮಾ ಪರಮಾತ್ಮ ಪರಮಾಶಕ್ತಿ, ಪರಮಾಭಕ್ತಿ, ಸಿದ್ದಿಧಾತ್ರಿ ನಮೋಸ್ತುತೆ ವಿಶ್ವಕಾರ್ತಿ, ವಿಶ್ವಭಾರತಿ, ವಿಶ್ವಹಾರ್ತಿ, ವಿಶ್ವಾಪ್ರಿತ ವಿಶ್ವ ವರ್ಚಿತಾ, ವಿಶ್ವವಿತಾ ಸಿದ್ದಿಧಾತ್ರಿ ನಮೋಸ್ತುತೆ ಭುಕ್ತಿಮುಕ್ತಿಕರಿಣಿ ಭಕ್ತಕಾಷ್ಟಾನಿವಾರಿಣಿ ಭವಸಾಗರ ತರಿಣಿ ಸಿದ್ದಿಧಾತ್ರಿ ನಮೋಸ್ತುತೆ ಧರ್ಮಾರ್ಥಕಮಾ ಪ್ರದಾಯಿಣಿ ಮಹಾಮೋಹ ವಿನಾಶಿನಿಂ ಮೋಕ್ಷದಾಯಿನಿ ಸಿದ್ಧಿದಾಯಿನಿ ಸಿದ್ದಿದಾತ್ರಿ ನಮೋಸ್ತುತೆ.

ನವರಾತ್ರಿ 9ನೇ ದಿನದ ಪೂಜೆಯ ಪ್ರಾಮುಖ್ಯತೆ ತಾಯಿ ಸಿದ್ಧಿಧಾತ್ರಿಯ ಎಲ್ಲಾ ದೇವರು, ರಾಕ್ಷಸರು, ಗಂಧರ್ವರು, ಯಕ್ಷರು ಮತ್ತು ಸಿದ್ಧಿಗಳಿಗೆ ಸಿದ್ಧಿಯನ್ನು ದಯಪಾಲಿಸುವರು. ಆಕೆ ಈಶ್ವರ ದೇವರಿಗಿಂತ ಭಿನ್ನವಾಗಿಲ್ಲ. ಯಾಕೆಂದರೆ ಈಶ್ವರದೇವರ ಅರ್ಧಭಾಗದಲ್ಲಿ ದೇವಿಯಿರುವರು. ಇದರಿಂದ ಈಶ್ವರ ದೇವರನ್ನು ಅರ್ಧನಾರೀಶ್ವರ ಎಂದು ಕರೆಯುವರು. ನವರಾತ್ರಿಯ 9ನೇ ದಿನದಂದು ತಾಯಿ ಸಿದ್ಧಿಧಾತ್ರಿಯನ್ನು ಪೂಜಿಸುವುದರಿಂದ ಎಲ್ಲಾ ರೀತಿಯ ಶಕ್ತಿ, ಕೌಶಲ್ಯ ಮತ್ತು ಸಾಮರ್ಥ್ಯವು ಭಕ್ತರಿಗೆ ಸಿಗುವುದು. ಇದರಿಂದ ವೃತ್ತಿ, ಶಿಕ್ಷಣ ಹಾಗೂ ಬೇರೆ ವಿಭಾಗದಲ್ಲಿ ಯಶಸ್ಸು ಪಡೆಯಬಹುದು.9ನೇ ದಿನ ನವರಾತ್ರಿಯ ಕೊನೆಯ ದಿನವಾಗಿದೆ. ಈ ದಿನವನ್ನು ಮಹಾನವಮಿ ಎಂದು ಕರೆಯಲಾಗುವುದು. ಸಪ್ತಮಿಯಂದು ದೇವಿ ಸರಸ್ವತಿಯ ಪೂಜೆಯು ಆರಂಭವಾಗಿ ನವಮಿಯಂದು ಕೊನೆಯಾಗುವುದು.

Spread the love
  • Related Posts

    ದ.ಕ ಜಿಲ್ಲೆಯಲ್ಲಿ ಮುಂದುವರಿದ ಮಳೆ ಹಿನ್ನೆಲೆ ಆಗಸ್ಟ್ 30 ಪ್ರಾಥಮಿಕ ಪ್ರೌಢ ಶಾಲೆಗಳಿಗೆ ರಜೆ ಘೋಷಣೆ

    ಮಂಗಳೂರು: ಬಾರಿ ಮಳೆ ಹಿನ್ನೆಲೆಯಲ್ಲಿ 30/08/2025ನೇ ಶುಕ್ರವಾರ ದಕ್ಷಿಣಕನ್ನಡ ಜಿಲ್ಲೆಯಾದ್ಯಂತ ಅಂಗನವಾಡಿ, ಪ್ರಾಥಮಿಕ, ಪ್ರೌಢ ಶಾಲೆಗಳಿಗೆ ರಜೆ ಘೋಷಿಸಲಾಗಿದೆ ಎಂದು ಜಿಲ್ಲಾಡಳಿತ ಆದೇಶವನ್ನು ಹೊರಡಿಸಿದೆ. Spread the love

    Spread the love

    ಉಚಿತ ಟೈಲರಿಂಗ್ ತರಬೇತಿ ಉದ್ಘಾಟನೆ

    ಸಕಲೇಶಪುರ: ಹಾಸನ ಜಿಲ್ಲೆ ಸಕಲೇಶಪುರ ತಾಲೂಕಿನ ಹಾನುಬಾಳು ಗ್ರಾಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ ಸಕಲೇಶಪುರ ವತಿಯಿಂದ ಜ್ಞಾನ ವಿಕಾಸ ಕಾರ್ಯಕ್ರಮದಡಿಯಲ್ಲಿ ಉಚಿತ ಟೈಲರಿಂಗ್ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು. ಪರಮ ಪೂಜ್ಯ ಶ್ರೀ ಡಾ.ಡಿ ವಿರೇಂದ್ರ…

    Spread the love

    You Missed

    ದ.ಕ ಜಿಲ್ಲೆಯಲ್ಲಿ ಮುಂದುವರಿದ ಮಳೆ ಹಿನ್ನೆಲೆ ಆಗಸ್ಟ್ 30 ಪ್ರಾಥಮಿಕ ಪ್ರೌಢ ಶಾಲೆಗಳಿಗೆ ರಜೆ ಘೋಷಣೆ

    • By admin
    • August 29, 2025
    • 260 views
    ದ.ಕ ಜಿಲ್ಲೆಯಲ್ಲಿ ಮುಂದುವರಿದ ಮಳೆ ಹಿನ್ನೆಲೆ ಆಗಸ್ಟ್ 30 ಪ್ರಾಥಮಿಕ ಪ್ರೌಢ ಶಾಲೆಗಳಿಗೆ ರಜೆ ಘೋಷಣೆ

    ಉಚಿತ ಟೈಲರಿಂಗ್ ತರಬೇತಿ ಉದ್ಘಾಟನೆ

    • By admin
    • August 29, 2025
    • 43 views
    ಉಚಿತ ಟೈಲರಿಂಗ್ ತರಬೇತಿ ಉದ್ಘಾಟನೆ

    ಬಾರಿ ಮಳೆ ಹಿನ್ನೆಲೆಯಲ್ಲಿ ನಾಳೆ ದಕ್ಷಿಣಕನ್ನಡ ಜಿಲ್ಲೆಯಾದ್ಯಂತ ಅಂಗನವಾಡಿ, ಪ್ರಾಥಮಿಕ, ಪ್ರೌಢ ಶಾಲೆ,PUಕಾಲೇಜಿಗೆ ರಜೆ ಘೋಷಣೆ

    • By admin
    • August 28, 2025
    • 308 views
    ಬಾರಿ ಮಳೆ ಹಿನ್ನೆಲೆಯಲ್ಲಿ ನಾಳೆ ದಕ್ಷಿಣಕನ್ನಡ ಜಿಲ್ಲೆಯಾದ್ಯಂತ ಅಂಗನವಾಡಿ, ಪ್ರಾಥಮಿಕ, ಪ್ರೌಢ ಶಾಲೆ,PUಕಾಲೇಜಿಗೆ ರಜೆ ಘೋಷಣೆ

    ಬೆಳ್ತಂಗಡಿ ತಾಲೂಕಿನ ನಿರಂತರ ಮಳೆ ಹಿನ್ನೆಲೆಯಲ್ಲಿ ಪ್ರಾಥಮಿಕ, ಪ್ರೌಢ ಶಾಲೆಗೆ ರಜೆ ಘೋಷಣೆ

    • By admin
    • August 28, 2025
    • 51 views
    ಬೆಳ್ತಂಗಡಿ ತಾಲೂಕಿನ ನಿರಂತರ ಮಳೆ ಹಿನ್ನೆಲೆಯಲ್ಲಿ ಪ್ರಾಥಮಿಕ, ಪ್ರೌಢ ಶಾಲೆಗೆ ರಜೆ ಘೋಷಣೆ

    ನಾಡಿನ ವಿವಿಧೆಡೆ ಗಣೇಶೋತ್ಸವದ ಸಂಭ್ರಮ ಸಡಗರ ಒಂದೆಡೆ ವೀಕ್ಷಿಸಿ ಹಲವು ಗಣಪ

    • By admin
    • August 27, 2025
    • 110 views
    ನಾಡಿನ ವಿವಿಧೆಡೆ ಗಣೇಶೋತ್ಸವದ ಸಂಭ್ರಮ ಸಡಗರ ಒಂದೆಡೆ ವೀಕ್ಷಿಸಿ ಹಲವು ಗಣಪ

    ಶ್ರೀ ಮಹಾಗಣಪತಿ ದೇವಸ್ಥಾನ ಸುಂಕದ ಕಟ್ಟೆ ಅಳದಂಗಡಿ ಇದರ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾಗಿ ಶಶಿಧರ ಡೋಂಗ್ರೆ ಆಯ್ಕೆ

    • By admin
    • August 25, 2025
    • 51 views
    ಶ್ರೀ ಮಹಾಗಣಪತಿ ದೇವಸ್ಥಾನ ಸುಂಕದ ಕಟ್ಟೆ ಅಳದಂಗಡಿ ಇದರ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾಗಿ ಶಶಿಧರ ಡೋಂಗ್ರೆ  ಆಯ್ಕೆ