
ಮಂಗಳೂರು: ಹಣ ದುಪ್ಪಟ್ಟು ಆಗುವ ಆಸೆಯಿಂದ ಆನ್ಲೈನ್ ಆಫ್ ಮೂಲಕ ಹೂಡಿಕೆ ಮಾಡಿ ಹಣ ಕಳೆದುಕೊಂಡ ಪರಿಣಾಮ ಯುವಕನೋರ್ವ ಆತ್ಮಹತ್ಯೆ ಮಾಡಿಕೊಂಡ ಬಗ್ಗೆ ವರದಿಯಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇತ್ತೀಚೆಗೆ ಆರ್ ಪಿ ಸಿ ಎಂಬ ಆಪ್ ಮೂಲಕ ಹಣ ಹೂಡಿಕೆಯ ಜಾಲ ಜಿಲ್ಲೆಯಾದ್ಯಂತ ಪಸರಿಸಿದ್ದು 6000/-, 18,000/- 56,000/-ಹೀಗೆ ಹಣ ಹೂಡಿಕೆ ಮಾಡಿ ದುಪ್ಪಟ್ಟು ಹಣ ಪಡೆಯುವ ಆಸೆಯಿಂದ ಹಣ ಹೂಡಿಕೆ ಮಾಡಲು ದುಂಬಾಲು ಬಿದ್ದು ಲಕ್ಷಾಂತರ ಮೊತ್ತ ಹೂಡಿಕೆ ಮಾಡಿದ ಬೆನ್ನಲ್ಲೇ ದಿಡೀರ್ ಆಗಿ ಡಿ.24 ರಂದು ಆಪ್ ಸ್ಥಗಿತಗೊಂಡಿತ್ತು. ಅದೇ ದಿನ ಮೂಡುಶೆಡ್ಡೆ ನಿವಾಸಿ ಸೂರ್ಯ (24) ನಾಪತ್ತೆಯಾಗಿದ್ದರು. ಗುರುವಾರ ಅವರ ಮೃತದೇಹ ಮರವೂರು ನದಿಯಲ್ಲಿ ಪತ್ತೆಯಾಗಿದೆ.ಅವರು ಆರ್ ಪಿ ಸಿ ಆಪ್ ನಲ್ಲಿ ಸುಮಾರು 70,000 ರೂಪಾಯಿ ಹೂಡಿಕೆ ಮಾಡಿದ್ದು ಕಂಪನಿ ಮುಚ್ಚಲ್ಪಟ್ಟ ಪರಿಣಾಮ ಸಾಲದ ಹೊರೆಯಲ್ಲಿ ಬಿದ್ದಿದ್ದರು ಎಂದು ಮಾಹಿತಿ ಲಭ್ಯವಾಗಿದೆ.
ಸದ್ಯ ಕಾವೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.