
ಬಂದಾರು: ಬಂದಾರು ಗ್ರಾಮದ ಓಟೇಚ್ಚಾರು ಪರಿಸರದಲ್ಲಿ ಒಂಟಿ ಸಲಗ ದಾಳಿ ಮಾಡಿದ್ದು ಅಪಾರ ಕೃಷಿ ನಾಶ ಮಾಡಿದ ಬಗ್ಗೆ ವರದಿಯಾಗಿದೆ.
ಸ್ಥಳೀಯ ನಿವಾಸಿಗಳಾದ ಉಮರಬ್ಬ , ಅಬ್ದುಲ್ ಫಾರುಕ್ ರವರ ತೋಟಕ್ಕೆ ನುಗ್ಗಿದ ಒಂಟಿ ಸಲಗ ಅಡಿಕೆ ಗಿಡ, ಪೈಪ್ ಲೈನ್ ಹಾಗೂ ಇತರೇ ವಸ್ತುಗಳನ್ನು ಹಾನಿ ಮಾಡಿದ್ದು ರಸ್ತೆ ಬದಿಯಲ್ಲಿ ಇದ್ದ ಮರಗಳನ್ನು ಧರೆಗುರುಳಿಸಿದ್ದು ಅಪಾರ ಪ್ರಮಾಣದಲ್ಲಿ ನಷ್ಟ ಉಂಟಾಗಿದೆ ಎಂದು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
ನಿರಂತರವಾಗಿ ಆನೆ ದಾಳಿ ಆಗುತ್ತಿದ್ದು ಭಯದಿಂದ ಬದುಕಬೇಕಾದ ಅನಿವಾರ್ಯತೆ ಎದುರಾಗಿದೆ ಅರಣ್ಯ ಇಲಾಖೆ, ಸರ್ಕಾರ ಈ ಬಗ್ಗೆ ಗಮನಹರಿಸದೇ ಇದ್ದು ಸಮರ್ಪಕವಾಗಿ ಪರಿಹಾರವನ್ನು ನೀಡುತ್ತಿಲ್ಲವೆಂದು ಆನೆ ದಾಳಿಯಿಂದ ನೊಂದ ಕೃಷಿಕರ ಅಳಲಾಗಿದೆ.