ಪಿತೃಋಣ ತೀರಿಸಲು ಶ್ರದ್ಧೆಯಿಂದ ‘ಶ್ರಾದ್ಧವಿಧಿ’ ಮಾಡಿ ಪೂರ್ವಜರ ಬಗ್ಗೆ ಕೃತಜ್ಞತೆಯನ್ನು ವ್ಯಕ್ತಪಡಿಸಿ ! – ಸದ್ಗುರು ನಂದಕುಮಾರ ಜಾಧವ, ಧರ್ಮಪ್ರಚಾರಕರು, ಸನಾತನ ಸಂಸ್ಥೆ
ದೇವಋಣ, ಋಷಿಋಣ, ಸಮಾಜಋಣ ಹಾಗೂ ಪಿತೃಋಣ ಈ ಋಣಗಳನ್ನು ತೀರಿಸುವುದು, ಪ್ರತಿಯೊಬ್ಬ ವ್ಯಕ್ತಿಯ ಕರ್ತವ್ಯವಾಗಿದೆ, ಎಂದು ಧರ್ಮವು ಹೇಳುತ್ತದೆ. ಪಿತೃಪಕ್ಷದಲ್ಲಿ ‘ಪಿತೃಋಣ’ವನ್ನು ತೀರಿಸಲು ಶ್ರಾದ್ಧವಿಧಿಯನ್ನು ಮಾಡುವುದು ಆವಶ್ಯಕವಾಗಿರುತ್ತದೆ; ಆದರೆ ಪ್ರಸ್ತುತ ಅನೇಕ ಹಿಂದೂಗಳಲ್ಲಿರುವ ಧರ್ಮಶಿಕ್ಷಣದ ಅಭಾವ, ತಥಾಕಥಿತ ಬುದ್ಧಿಜೀವಿಗಳ ಅಪಪ್ರಚಾರ ಹಾಗೂ ಹಿಂದೂ ಧರ್ಮವನ್ನು ಕೀಳಾಗಿ ಕಾಣುವ ವೃತ್ತಿಯಿಂದಾಗಿ ಶ್ರಾದ್ಧವಿಧಿಯತ್ತ ದುರ್ಲಕ್ಷ ಮಾಡುವ ಪ್ರಮಾಣ ಹೆಚ್ಚಾಗುತ್ತಿದೆ. ‘ಭಗೀರಥ ರಾಜ’ನು ಪೂರ್ವಜರ ಮುಕ್ತಿಗಾಗಿ ಮಾಡಿದ ಕಠೋರ ತಪಸ್ಸಿನಿಂದ ಹಿಡಿದು, ತ್ರೇತಾಯುಗದಲ್ಲಿ ಪ್ರಭು ಶ್ರೀರಾಮಚಂದ್ರನ ಕಾಲದಿಂದ ಛತ್ರಪತಿ ಶಿವಾಜಿ ಮಹಾರಾಜರ ಕಾಲದಲ್ಲಿಯೂ ಶ್ರಾದ್ಧವಿಧಿ ಮಾಡಿರುವ ಉಲ್ಲೇಖಗಳು ಸಿಕ್ಕಿವೆ. ಇಂದಿಗೂ ಅನೇಕ ಪಾಶ್ಚಾತ್ಯ ದೇಶಗಳಲ್ಲಿ ಸಾವಿರಾರು ಜನರು ಭಾರತದ ತೀರ್ಥಕ್ಷೇತ್ರಕ್ಕೆ ಬಂದು ತಮ್ಮ ಪೂರ್ವಜರಿಗೆ ಮುಂದಿನ ಗತಿ ಸಿಗಲಿ, ಎಂದು ಶ್ರದ್ಧೆಯಿಂದ ಶ್ರಾದ್ಧವಿಧಿ ಮಾಡುತ್ತಾರೆ. ಹಿಂದೂಗಳೂ ಸಹ ತಥಾಕಥಿತ ಪ್ರಗತಿಪರರ ಶ್ರಾದ್ಧದ ಬಗೆಗಿನ ಯಾವುದೇ ಅಪಪ್ರಚಾರಕ್ಕೆ ಬಲಿಯಾಗದೇ ಕೊರೋನಾ ಮಹಾಮಾರಿಯ ಕಾಲದಲ್ಲಿಯೂ ಸರಕಾರದ ಎಲ್ಲ ನಿಯಮಗಳನ್ನು ಪಾಲಿಸುತ್ತಾ ತಮ್ಮ ಕ್ಷಮತೆಗನುಸಾರ ಪಿತೃಋಣ ತೀರಿಸಲು ಶ್ರದ್ಧೆಯಿಂದ ‘ಶ್ರಾದ್ಧವಿಧಿ’ಯನ್ನು ಮಾಡಬೇಕು ಹಾಗೂ ತಮ್ಮ ಪೂರ್ವಜರ ಬಗ್ಗೆ ಕೃತಜ್ಞತೆಯನ್ನು ವ್ಯಕ್ತಪಡಿಸಬೇಕು, ಎಂದು ಸನಾತನ ಸಂಸ್ಥೆಯ ಧರ್ಮಪ್ರಚಾರಕರಾದ ಸದ್ಗುರು ನಂದಕುಮಾರ ಜಾಧವ ಇವರು ಕರೆ ನೀಡಿದ್ದಾರೆ. ಅವರು ಗಣೇಶೋತ್ಸವದ ನಂತರ ಆರಂಭವಾಗಲಿರುವ ಪಿತೃಪಕ್ಷದ ನಿಮಿತ್ತ ವಿಶೇಷ ‘ಆನ್‌ಲೈನ್’ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.
ಹಿಂದೂ ಜನಜಾಗೃತಿ ಸಮಿತಿಯ ಶ್ರೀ. ಪ್ರಶಾಂತ ಜುವೇಕರ ಈ ಕಾರ್ಯಕ್ರಮದ ನಿರೂಪಣೆಯನ್ನು ಮಾಡಿದರು. ಈ ಕಾರ್ಯಕ್ರಮವು ಫೇಸ್‌ಬುಕ್ ಹಾಗೂ ಯುಟ್ಯೂಬ್ ಮಾಧ್ಯಮಗಳಿಂದ 15275 ಜನರು ಪ್ರತ್ಯಕ್ಷವಾಗಿ ನೋಡಿದರೆ, 22300 ಜನರ ತನಕ ಈ ಕಾರ್ಯಕ್ರಮ ತಲುಪಿದೆ.
ಈ ಕಾರ್ಯಕ್ರಮದಲ್ಲಿ ಜಿಜ್ಞಾಸುಗಳಿಗೆ ಮಾರ್ಗದರ್ಶನ ಮಾಡಿದ ಸದ್ಗುರು ಜಾಧವ ಇವರು, ಯಾರಿಗೆ ಸಾಧ್ಯವಿದೆಯೋ ಅವರು ಪುರೋಹಿತರನ್ನು ಕರೆದು ಶ್ರಾದ್ಧವಿಧಿಯನ್ನು ಮಾಡಬೇಕು; ಆದರೆ ಎಲ್ಲಿ ಕೊರೋನಾದಿಂದಾಗಿ ಪುರೋಹಿತರು ಅಥವಾ ಶ್ರಾದ್ಧದ ಸಾಮಗ್ರಿಗಳ ಅಭಾವದಿಂದಾಗಿ ಶ್ರಾದ್ಧ ಮಾಡುವುದು ಸಾಧ್ಯವಿಲ್ಲ ಅಲ್ಲಿ ಆಪದ್ಧರ್ಮವೆಂದು ಸಂಕಲ್ಪದೊಂದಿಗೆ ‘ಆಮಶ್ರಾದ್ಧ’, ‘ಹಿರಣ್ಯಶ್ರಾದ್ಧ’ ಅಥವಾ ‘ಗೋಗ್ರಾಸ ಅರ್ಪಣೆ’ಯನ್ನು ಮಾಡಬಹುದು. ಆಮಶ್ರಾದ್ಧದಲ್ಲಿ ತಮ್ಮ ಕ್ಷಮತೆಗನುಸಾರ ಧಾನ್ಯ, ಅಕ್ಕಿ, ಎಣ್ಣೆ, ತುಪ್ಪ, ಸಕ್ಕರೆ, ಆಲುಗಡ್ಡೆ, ತೆಂಗಿನಕಾಯಿ, 1 ಅಡಿಕೆ, 2 ವಿಳ್ಯೆದೆಲೆ, 1 ನಾಣ್ಯ ಇತ್ಯಾದಿ ಸಾಹಿತ್ಯಗಳನ್ನು ಹರಿವಾಣದಲ್ಲಿ ಇಡಬೇಕು. ‘ಆಮಾನ್ನಸ್ಥಿತ ಶ್ರೀ ಮಹಾವಿಷ್ಣವೇ ನಮಃ’ ಈ ನಾಮಮಂತ್ರವನ್ನು ಹೇಳುತ್ತಾ ಅದರ ಮೇಲೆ ಗಂಧ, ಅಕ್ಷತೆ, ಹೂವು ಹಾಗೂ ತುಳಸಿಯ ಎಲೆಗಳನ್ನು ಒಟ್ಟಿಗೆ ಅರ್ಪಿಸಬೇಕು. ಆ ವಸ್ತುಗಳನ್ನು ಪುರೋಹಿತರು, ವೇದಪಾಠಶಾಲೆ, ಗೋಶಾಲೆ ಅಥವಾ ದೇವಸ್ಥಾನಗಳಿಗೆ ದಾನ ಮಾಡಬೇಕು. ಅದು ಸಾಧ್ಯವಾಗದಿದ್ದರೆ ಹಿರಣ್ಯಶ್ರಾದ್ಧದಂತೆ ತಮ್ಮ ಕ್ಷಮತೆಗನುಸಾರ ವ್ಯಾವಹಾರಿಕ ದ್ರವ್ಯ(ಹಣ)ವನ್ನು ಒಂದು ಹರಿವಾಣದಲ್ಲಿಡಬೇಕು. ‘ಹಿರಣ್ಯಸ್ಥಿತ ಶ್ರೀ ಮಹಾವಿಷ್ಣವೇ ನಮಃ’ ಎಂದು ಹೇಳಿ ಅದನ್ನು ಅರ್ಪಣೆ ಮಾಡಬೇಕು. ಯಾರಿಗೆ ಇವೆರಡೂ ಮಾಡಲು ಸಾಧ್ಯವಿಲ್ಲ ಅವರು ಗೋಗ್ರಾಸ ನೀಡಬೇಕು ಅಥವಾ ಗೋಶಾಲೆಯನ್ನು ಸಂಪರ್ಕಿಸಿ ಗ್ರೊಗ್ರಾಸಕ್ಕಾಗಿ ಸ್ವಲ್ಪ ಹಣವನ್ನು ಅರ್ಪಣೆ ಮಾಡಬೇಕು. ಆಮಶ್ರಾದ್ಧ, ಹಿರಣ್ಯಶ್ರಾದ್ಧ ಅಥವಾ ಗೋಗ್ರಾಸ ಸಮರ್ಪಣೆ ಮಾಡಿದ ನಂತರ ಎಳ್ಳನ್ನು ಅರ್ಪಿಸಬೇಕು. ಯಾರಿಗೆ ಈ ಮೇಲಿನ ಪೈಕಿ ಯಾವುದೂ ಮಾಡಲು ಸಾಧ್ಯವಿಲ್ಲವೋ, ಅವರು ಧರ್ಮಕಾರ್ಯಕ್ಕಾಗಿ ಸಮರ್ಪಿತವಾಗಿರುವ ಒಂದು ಆಧ್ಯಾತ್ಮಿಕ ಸಂಸ್ಥೆಗೆ ಅರ್ಪಣೆಯನ್ನು ನೀಡಬೇಕು. ಅದೇರೀತಿ ಅತೃಪ್ತ ಪೂರ್ವಜರ ತೊಂದರೆಯಿಂದ ರಕ್ಷಣೆಯಾಗಲು ಪಿತೃಪಕ್ಷದಲ್ಲಿ ಮಾತ್ರವಲ್ಲದೇ, ನಿತ್ಯವೂ ಕಡಿಮೆ ಪಕ್ಷ 1 ರಿಂದ 2 ಗಂಟೆ ‘ಶ್ರೀ ಗುರುದೇವ ದತ್ತ’ ಈ ನಾಮಜಪ ಮಾಡಬೇಕು’ ಎಂದು ಹೇಳಿದರು.