ನದಿಯ ವೇದನೆಯ ಹಿಂದಿನ ರೋಧನೆಯಾ ಕೇಳುವವರ್ಯಾರು! ಪಶ್ಚಿಮಘಟ್ಟಗಳ ರಕ್ಷಣೆಗೆ ಬೇಕಿದೆ ಸೂಕ್ತ ಕ್ರಮ

🖊️ ದಿನೇಶ್ ಹೊಳ್ಳ ಸಹ್ಯಾದ್ರಿ ಸಂಚಯ(ರಿ)

ಕುದುರೆಮುಖದ ಎಳನೀರು ಘಾಟಿಯ ಬಂಗ್ರ ಬಲಿಕೆ ಎಂಬ ನೇತ್ರಾವತಿ ನದಿಯ ಉಗಮ ಸ್ಥಾನದ ಸೂಕ್ಷ್ಮ ಜೀವ ವೈವಿದ್ಯತಾ ಪ್ರದೇಶದಲ್ಲಿ ಮೊನ್ನೆ ಭೂಕುಸಿತ ಆಯಿತು ಎಂದರೆ ಇದು ತಳ್ಳಿ ಹಾಕುವಂತಹ ಸಿಲ್ಲಿ ವಿಚಾರವಲ್ಲ. ಇದು ಮುಂದಿನ ಅಪಾಯದ ಮುನ್ಸೂಚನೆ ಅಂತೂ ಖಂಡಿತಾ ಹೌದು. ಮಳೆಗಾಲದ ಭೂಕುಸಿತವೇ ಅಪಾಯಕಾರಿ, ಅದಕ್ಕೇ ಇನ್ನೂ ನಮ್ಮ ಸರಕಾರದ ಯಾವ ಕ್ರಮಗಳೂ ಆಗಿಲ್ಲ, ಅದರ ಬಗ್ಗೆ ಅಧ್ಯಯನ ವರದಿಯೂ ಆಗಲಿಲ್ಲ, ಅದು ಇನ್ನು ಮುಂದೆ ಆಗದಂತೆ ಯೋಚನಾ ಕ್ರಮಗಳೂ, ಕ್ರಿಯೆಗಳೂ ಆಗಿಲ್ಲ. ಇದು ಈ ಸಮಯದಲ್ಲಿ ಏಕಾಏಕಿ ಭೂಕುಸಿತ ಆಗುತ್ತಿದೆ ಎಂದರೆ ಬಹಳಷ್ಟು ಯೋಚಿಸಬೇಕಾದ ಮತ್ತು ಯೋಚನೆಗಳಿಗೆ ಪೂರಕ ಕ್ರಮಗಳನ್ನು ಕೈ ಗೊಳ್ಳಬೇಕಾದ ಪ್ರಮುಖ ವಿಚಾರವಿದು.

ನೇತ್ರಾವತಿ ನದಿಯು ಪಶ್ಚಿಮ ಘಟ್ಟದ ಹಲವಾರು ಗಿರಿ, ಕಾನನ, ಕಣಿವೆಗಳಿಂದ ಹರಿದು ಬರುವ ಕರಾವಳಿಯ ಜೀವನದಿ ಯಾಗಿದ್ದು ಇದರ ಮಹತ್ವ ಮತ್ತು ಅಗತ್ಯವು ರಾಜಕಾರಣಿಗಳಿಗೆ ಬಿಡಿ ದಕ್ಷಿಣ ಕನ್ನಡದ ಕೆಲವು ಪಕ್ಷ, ರಾಜಕೀಯ ಕೃಪಾ ಪೋಷಿತ ಜನತೆಗೆ ಇನ್ನೂ ಅರ್ಥವಾಗಿಲ್ಲ. ಕಡ್ತಕಲ್, ಎಳನೀರು, ಚಾರ್ಮಾಡಿ, ಶಿರಾಡಿ, ಬಿಸಿಲೆ, ಬೈರಾಪುರ ಘಾಟಿ ಪ್ರದೇಶಗಳಿಂದ ಬರುವ 9 ಉಪ ನದಿಗಳಲ್ಲಿ ಎಳನೀರು ಘಾಟಿಯ ಬಂಗ್ರ ಬಲಿಕೆ ಕಣಿವೆಯ ಮೂಲ ಸ್ಥಾನದ ನೀರಿನ ಹರಿವೇ ಪ್ರಮುಖವಾಗಿರುತ್ತದೆ. ಕುದುರೆ ಮುಖದ ಹಿರಿಮರಿ, ತಿರಿಮರಿ ಗುಪ್ಪೆ, ಕೃಷ್ಣ ಗಿರಿಯ ನಡುವಿನ ಶೋಲಾ ಅಡವಿಯಲ್ಲಿ ಉಗಮವಾಗಿ ಅಲ್ಲಿ ಇನ್ನಿತರ ಕಣಿವೆಗಳಲ್ಲಿ ಹರಿದು ಬರುವ ಎಳನೀರು ಹೊಳೆ, ಮಾವಿನಸಸಿ ಹೊಳೆ, ಬಡಮನೆ ಹೊಳೆ, ಶಿರ್ಲಾಲು, ಶಿವನಾಳ ಹೊಳೆ ನೇತ್ರಾವತಿಯ ಪ್ರಮುಖ ಭಾಗವೇ ಆಗಿರುವ ಎಳನೀರು ಹೊಳೆಯ ಹೃದಯ ಭಾಗವೇ ಆಗಿರುತ್ತದೆ. ಬಹುಶಃ ಎಳನೀರು ಹೊಳೆಯ ಮಳೆಗಾಲದ ನೀರಿನ ಇಳುವರಿ ( ವಾಟರ್ ಕ್ಯಾಚ್ ಮೆಂಟ್ ಏರಿಯಾ ) ಕಡಿಮೆ ಆಗುತ್ತಿದ್ದು ನೀರನ್ನು ಹಿಡಿದಿಟ್ಟು ಕೊಳ್ಳುವಂತಹ ಬೆಟ್ಟದ ಮೇಲ್ನೈ ಪದರವು ಗಡಸುತನ ಕಳೆದುಕೊಂಡು ಮೆದುವಾಗುತ್ತಾ ವರ್ಷದಿಂದ ವರ್ಷಕ್ಕೆ ನೀರಿನ ಹಿಡಿತದ ವ್ಯಾಪ್ತಿ ಕಡಿಮೆಯಾಗುತ್ತಾ ಒರತೆಯ ಕೊರತೆ ಆಗುತ್ತಾ ಇರುವುದರಿಂದ 65 ಡಿಗ್ರೀಯಿಂದ 85 ಡಿಗ್ರಿ ವರೆವಿನ ಕಣಿವೆ, ಕಂದರದಲ್ಲಿ ಈ ರೀತಿಯ ಭೂಕುಸಿತ ಆಗುವ ಸಾಧ್ಯತೆಗಳು ಇವೆ. ಈ ಸಂದರ್ಭದಲ್ಲೇ ಭೂಕುಸಿತ ಆದರೆ ಇನ್ನು ಮುಂದಿನ ಮಳೆಗಾಲದಲ್ಲಿ ಇನ್ನಷ್ಟು ಕುಸಿತ ಆಗುವದಂತೂ ಖಂಡಿತ. ಚಾರ್ಮಾಡಿಯಲ್ಲಿ ಕಳೆದ 2 ವರ್ಷಗಳಲ್ಲಿ ಭೂಕುಸಿತ ಆಗಿ ನೇತ್ರಾವತಿಯ ಉಪನದಿ ಮೃತ್ಯುಂಜಯ ನದಿ ಬಡಕಲಾಗುತ್ತ ಬಂದಿದೆ. ಶಿರಾಡಿ ಘಾಟಿಯಲ್ಲಿ ಎತ್ತಿನ ಹೊಳೆ ಯೋಜನೆ ಕಾಮಗಾರಿಯಿಂದ ನೇತ್ರಾವತಿಯ ಇನ್ನೊಂದು ಉಪನದಿ ಕೆಂಪು ಹೊಳೆ ಈಗಾಗಲೇ ಅರ್ಧ ಜೀವವನ್ನು ಕಳೆದು ಕೊಂಡಿದೆ. ಈಗಾಗಲೇ 4 ವರ್ಷಗಳಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನೀರಿನ ಸಮಸ್ಯೆ ಆಗುತ್ತಿದ್ದು ಬರಗಾಲದ ತೀರ್ವತೆ ಹೆಚ್ಚಾಗುತ್ತಾ ಇದೆ. ರಾಜಕೀಯದ ಅ0ಡೇ ಪಿರ್ಕಿಗಳಿಗಂತೂ ನದಿ ಎಂದರೆ ದುಡ್ಡು ಲೂಟಿ ಮಾಡುವ ಬಿಗ್ ಪ್ರಾಜೆಕ್ಟ್ ಆಗಿ ಬಿಟ್ಟಿದೆ, ಆದರೆ ನದಿಯನ್ನೇ ಆಶ್ರಯಿಸಿಕೊಂಡು ಬದುಕುವ ಜನರಿಗೆ ಅರ್ಥ ಆಗುತ್ತಿಲ್ಲಾ ಎಂದರೆ ಇದು ಮುಂದೆ ಆಗಲಿರುವ ಪ್ರಾಕೃತಿಕ ದುರಂತ ಕ್ಕಿಂತಲೂ ದೊಡ್ಡ ದುರಂತ…
“ಜೈ ನೇತ್ರಾವತಿ

Spread the love
  • Related Posts

    ಕಟ್ಟಡ ಟೆಂಡರ್ ನಲ್ಲಿ ಆಗುತ್ತಿರುವ ಭ್ರಷ್ಟಾಚಾರ ಹಾಗೂ ಕಟ್ಟಡ ನಿರ್ಮಾಣ ಕಾರ್ಮಿಕರಿಗೆ ಮರಳು, ಕೆಂಪುಕಲ್ಲು ಪೂರೈಕೆಯಲ್ಲಿ ಉಂಟಾದ ತೊಡಕುಗಳ ಕುರಿತು ಭಾರತೀಯ ಮಜ್ದೂರ್ ಸಂಘದ ವತಿಯಿಂದ ಸಮಾಲೋಚನಾ ಸಭೆ ಹಾಗೂ ಮನವಿ ಸಲ್ಲಿಕೆ

    ಬೆಳ್ತಂಗಡಿ: ಭಾರತೀಯ ಮಜ್ದೂರ್ ಸಂಘ ತಾಲೂಕು ಸಮಿತಿ ಬೆಳ್ತಂಗಡಿ ವತಿಯಿಂದ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರಿಗೆ ಮರಳು ಹಾಗೂ ಕೆಂಪು ಕಲ್ಲು ಪೂರೈಕೆಯಲ್ಲಿ ಆಗಿರುವ ತೊಂದರೆಯ ಕುರಿತು ಹಾಗೂ ಕಾರ್ಮಿಕ ಇಲಾಖೆಯ ಕಟ್ಟಡ ಮಂಡಳಿಯ ಟೆಂಡರ್ ಕೂಪದ ಭ್ರಷ್ಟಾಚಾರವನ್ನು ಖಂಡಿಸಲು…

    Spread the love

    ಚಿರಂಜೀವಿ ಯುವಕ ಮಂಡಲ ಕಾನರ್ಪ ಇದರ 34ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣಾ ಸಮಿತಿಗೆ ಪದಾಧಿಕಾರಿಗಳ ಆಯ್ಕೆ

    ಬೆಳ್ತಂಗಡಿ: ಚಿರಂಜೀವಿ ಯುವಕ ಮಂಡಲ ಕಾನರ್ಪ ಕಡಿರುದ್ಯಾವರ ಇದರ 34ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮದ ನಿಮಿತ್ತ ಪೂರ್ವಭಾವಿ ಸಭೆಯನ್ನು ಯುವಕ ಮಂಡಲದ ವಠಾರದಲ್ಲಿ ನಡೆಸಲಾಯಿತು. ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆ ಸಮಿತಿಯ ಅಧ್ಯಕ್ಷರಾಗಿ ರಾಘವೇಂದ್ರ ಭಟ್ ಪಣಿಕಲ್ ಹಾಗೂ…

    Spread the love

    You Missed

    ಕಟ್ಟಡ ಟೆಂಡರ್ ನಲ್ಲಿ ಆಗುತ್ತಿರುವ ಭ್ರಷ್ಟಾಚಾರ ಹಾಗೂ ಕಟ್ಟಡ ನಿರ್ಮಾಣ ಕಾರ್ಮಿಕರಿಗೆ ಮರಳು, ಕೆಂಪುಕಲ್ಲು ಪೂರೈಕೆಯಲ್ಲಿ ಉಂಟಾದ ತೊಡಕುಗಳ ಕುರಿತು ಭಾರತೀಯ ಮಜ್ದೂರ್ ಸಂಘದ ವತಿಯಿಂದ ಸಮಾಲೋಚನಾ ಸಭೆ ಹಾಗೂ ಮನವಿ ಸಲ್ಲಿಕೆ

    • By admin
    • June 30, 2025
    • 309 views
    ಕಟ್ಟಡ  ಟೆಂಡರ್ ನಲ್ಲಿ ಆಗುತ್ತಿರುವ ಭ್ರಷ್ಟಾಚಾರ ಹಾಗೂ ಕಟ್ಟಡ ನಿರ್ಮಾಣ ಕಾರ್ಮಿಕರಿಗೆ ಮರಳು, ಕೆಂಪುಕಲ್ಲು ಪೂರೈಕೆಯಲ್ಲಿ ಉಂಟಾದ ತೊಡಕುಗಳ ಕುರಿತು ಭಾರತೀಯ ಮಜ್ದೂರ್ ಸಂಘದ ವತಿಯಿಂದ ಸಮಾಲೋಚನಾ ಸಭೆ ಹಾಗೂ ಮನವಿ ಸಲ್ಲಿಕೆ

    ಚಿರಂಜೀವಿ ಯುವಕ ಮಂಡಲ ಕಾನರ್ಪ ಇದರ 34ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣಾ ಸಮಿತಿಗೆ ಪದಾಧಿಕಾರಿಗಳ ಆಯ್ಕೆ

    • By admin
    • June 28, 2025
    • 300 views
    ಚಿರಂಜೀವಿ ಯುವಕ ಮಂಡಲ ಕಾನರ್ಪ ಇದರ 34ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣಾ ಸಮಿತಿಗೆ ಪದಾಧಿಕಾರಿಗಳ ಆಯ್ಕೆ

    ವಕೀಲರ ಸಂಘ (ರಿ ) ಬಂಟ್ವಾಳ ಇದರ ನೂತನ ಪದಾಧಿಕಾರಿಗಳ ಪದಗ್ರಹಣ

    • By admin
    • June 26, 2025
    • 201 views
    ವಕೀಲರ ಸಂಘ (ರಿ ) ಬಂಟ್ವಾಳ ಇದರ ನೂತನ ಪದಾಧಿಕಾರಿಗಳ ಪದಗ್ರಹಣ

    ಭಾರಿಮಳೆಗೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಗುಡ್ಡ ಕುಸಿತ, ಶಿರಾಡಿ ಘಾಟ್ ನಲ್ಲಿ ವಾಹನ ಸಂಚಾರ ಬಂದ್

    • By admin
    • June 26, 2025
    • 299 views
    ಭಾರಿಮಳೆಗೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಗುಡ್ಡ  ಕುಸಿತ, ಶಿರಾಡಿ ಘಾಟ್ ನಲ್ಲಿ ವಾಹನ ಸಂಚಾರ ಬಂದ್

    ಮುಂದುವರಿದ ವರುಣಾರ್ಭಟ ಬೆಳ್ತಂಗಡಿ ತಾಲೂಕಿನ ಶಾಲೆಗಳಿಗೆ ಜೂನ್ 26 ಗುರುವಾರ ರಜೆ: ತಹಶಿಲ್ದಾರ್ ಫೋಷಣೆ

    • By admin
    • June 25, 2025
    • 156 views
    ಮುಂದುವರಿದ ವರುಣಾರ್ಭಟ ಬೆಳ್ತಂಗಡಿ ತಾಲೂಕಿನ  ಶಾಲೆಗಳಿಗೆ ಜೂನ್ 26 ಗುರುವಾರ ರಜೆ: ತಹಶಿಲ್ದಾರ್ ಫೋಷಣೆ

    ಹಾಸನದ ಸಕಲೇಶಪುರ ಎಡಕುಮೇರಿ ಎಂಬಲ್ಲಿ ರೈಲು ಹಳಿಗಳ ಮೇಲೆ ಬಿದ್ದ ಬಂಡೆ ಕಲ್ಲುಗಳು ರೈಲು ಸಂಚಾರದಲ್ಲಿ ವ್ಯತ್ಯಯ

    • By admin
    • June 21, 2025
    • 90 views
    ಹಾಸನದ ಸಕಲೇಶಪುರ ಎಡಕುಮೇರಿ ಎಂಬಲ್ಲಿ ರೈಲು ಹಳಿಗಳ ಮೇಲೆ ಬಿದ್ದ ಬಂಡೆ ಕಲ್ಲುಗಳು ರೈಲು ಸಂಚಾರದಲ್ಲಿ ವ್ಯತ್ಯಯ