ಪ್ರಜಾಪ್ರಭುತ್ವವನ್ನು ವೈಭವೀಕರಿಸುವ ಡಾ. ದಾಭೊಲಕರರ ಕುಟುಂಬದವರಿಗೆ ಪ್ರಜಾಪ್ರಭುತ್ವದ ಪ್ರಕ್ರಿಯೆಯ ಮೇಲೆಯೇ ನಂಬಿಕೆ ಇಲ್ಲ !

‘ಸಿಬಿಐ’ನ ವೈಫಲ್ಯವೋ ಅಥವಾ ರಾಷ್ಟ್ರವಾದಿಯ ತಪ್ಪಾದ ತನಿಖೆಯ ಪರಿಣಾಮವೋ ! – ಸನಾತನ ಸಂಸ್ಥೆ

ಸರ್ವೋಚ್ಚ ನ್ಯಾಯಾಲಯವು ಸುಶಾಂತಸಿಂಹ ರಾಜಪೂತ್ ಇವರ ಮೃತ್ಯು ಪ್ರಕರಣದ ತನಿಖೆಯನ್ನು ಮುಂಬಯಿ ಪೊಲೀಸರಿಂದ ‘ಸಿಬಿಐ’ಗೆ ಒಪ್ಪಿಸಿದ್ದರಿಂದ ಸಿಡಿಮಿಡಿಗೊಂಡಿದ್ದರಿಂದ ‘ಸಿಬಿಐ’ಗೆ ಗುರಿ ಮಾಡಿ ರಾಷ್ಟ್ರವಾದಿ ಕಾಂಗ್ರೆಸ್ಸಿನ ನಾಯಕರು ಹೇಳಿಕೆಯನ್ನು ನೀಡುತ್ತಿದ್ದಾರೆ; ಆದರೆ ದಾಭೊಲಕರ ಪ್ರಕರಣದಲ್ಲಿ ಅವರದ್ದೇ ಗೃಹ ಇಲಾಖೆಯು ಮಾಡಿದ ತಪ್ಪಾದ ತನಿಖೆಯ ಪರಿಣಾಮವನ್ನು ಸನಾತನ ಸಂಸ್ಥೆಯು ಅನುಭವಿಸಬೇಕಾಗುತ್ತಿದೆ.

2013 ರಲ್ಲಿ ಡಾ. ಧಾಭೊಲಕರರ ಹತ್ಯೆಯಾಯಿತು, ಅದೇ ಸಮಯದಲ್ಲಿ ರಾಷ್ಟ್ರವಾದಿ ಕಾಂಗ್ರೆಸ್ಸಿನ ನಾಯಕ ಹಾಗೂ ರಾಜ್ಯದ ಅಂದಿನ ಗೃಹಸಚಿವರಾದ ಆರ್.ಆರ್. ಪಾಟಿಲ್ ಇವರ ಮಾರ್ಗದರ್ಶನದಲ್ಲಿ ಪೊಲೀಸರು ತಕ್ಷಣವೇ ತನಿಖೆಯನ್ನು ಮಾಡುತ್ತಾ ಮನೀಷ ನಾಗೋರಿ ಹಾಗೂ ವಿಕಾಸ ಖಂಡೆಲವಾಲ ಎಂಬ ಅಕ್ರಮ ಶಸ್ತ್ರಾಸ್ತ್ರ ವ್ಯಾಪಾರಿಗಳನ್ನು ಬಂಧಿಸಿದರು. ಅವರಲ್ಲಿ ಪತ್ತೆಯಾದ ಪಿಸ್ತೂಲಿನಿಂದ ದಾಭೋಲಕರ ಇವರ ಹತ್ಯೆಯಾಯಿತು, ಅದಕ್ಕಾಗಿ ಸಾಕ್ಷಿಯೆಂದು ‘ಫಾರೆನ್ಸೀಕ್ ವರದಿ’ಯನ್ನೂ ನ್ಯಾಯಾಲದಲ್ಲಿ ಸಲ್ಲಿಸಿದ್ದರು. ನಂತರ ಈ ತನಿಖೆಯಿಂದ ಅಸಮಾಧಾನಗೊಂಡಿರುವ ದಾಭೋಲಕರ ಕುಟುಂಬದವರು ಉಚ್ಚ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿ ತನಿಖೆಯನ್ನು ‘ಸಿಬಿಐ’ಗೆ ನೀಡುವಂತೆ ಆಗ್ರಹಿಸಿದರು. ಅದಕ್ಕನುಸಾರ ‘ಸಿಬಿಐ’ ತನಿಖೆಯನ್ನು ಆರಂಭಿಸಿತು ಹಾಗೂ ಅದು ಮಾನ್ಯ ನ್ಯಾಯಾಲಯದ ಮೇಲ್ವಿಚಾರಣೆಯಲ್ಲಿ ನಡೆಯುತ್ತಿದೆ.

ಹೀಗಿರುವಾಗ ಒಂದು ವೇಳೆ ರಾಷ್ಟ್ರವಾದಿ ನಾಯಕರು ಹಾಗೂ ದಾಭೊಲಕರ ಕುಟುಂಬ ಇಂದು ‘ಸಿಬಿಐ’ ವಿಫಲಗೊಂಡಿದೆ ಎಂದು ನಿರ್ಧರಿಸುತ್ತಿದ್ದರೆ, ಅದು ಅವರದ್ದೇ ವೈಫಲ್ಯವಾಗಿದೆ. ‘ಸಿಬಿಐ’ನ ವೈಫಲ್ಯದ ಬಗ್ಗೆ ಮಾತನಾಡುವುದಿದ್ದರೆ, ಆರ್.ಆರ್.ಪಾಟಿಲ್ ಇವರ ಕಾಲದಲ್ಲಿ ನಡೆದ ತನಿಖೆಯ ಮೇಲೆಯೂ ಪ್ರಶ್ನೆಚಿಹ್ನೆ ನಿರ್ಮಾಣವಾಗುತ್ತದೆ. ಈ ಎರಡು ಅಕ್ರಮ ಶಸ್ತ್ರಾಸ್ತ್ರ ವ್ಯಾಪಾರಿಗ ಅಪರಾಧ ‘ಫಾರೆನ್ಸಿಕ್ ವರದಿ’ಯಲ್ಲಿ ಸಿದ್ಧವಾಗಿರುವಾಗ ಈ ಇಬ್ಬರಿಗೆ ‘ಕ್ಲೀನ್‌ಚೀಟ್’ ಹೇಗೆ ಸಿಕ್ಕಿತು? ಇದರ ಬಗ್ಗೆ ದಾಭೊಲಕರ ಕುಟುಂಬದವರಾಗಲಿ, ಆಗಿನ ರಾಜ್ಯ ಸರಕಾರವಾಗಲಿ ಏನೂ ಮಾತನಾಡುವುದಿಲ್ಲ, ಎಂದು ಸನಾತನ ಸಂಸ್ಥೆಯ ರಾಷ್ಟ್ರೀಯ ವಕ್ತಾರರಾದ ಶ್ರೀ. ಚೇತನ ರಾಜಹಂಸ ಇವರು ಪ್ರಶ್ನಿಸಿದ್ದಾರೆ.

ಕಾಂಗ್ರೆಸ್-ಎನ್‌ಸಿಪಿ ಸರ್ಕಾರದ ಅವಧಿಯಲ್ಲಿ 2013 ರಲ್ಲಿ ದಾಭೋಲ್ಕರರ ಹತ್ಯೆಯಾದಾಗ, ದಾಭೋಲ್ಕರ್ ಅವರ ಕುಟುಂಬವು ತನಿಖೆಯನ್ನು ತಪ್ಪುದಾರಿಗೆಳೆಯುವ ಹೇಳಿಕೆಗಳನ್ನು ನೀಡಿತು. ಕಾಲಕ್ರಮೇಣ ತನಿಖೆಯು ಸಿಬಿಐಗೆ ಹೋಯಿತು, ಅನಂತರ ರಾಜ್ಯದಲ್ಲಿ ಅಧಿಕಾರ ಹಸ್ತಾಂತರವಾಯಿತು. ಈ ಪ್ರಕರಣದಲ್ಲಿ ವಿನಾಕಾರಣ ಕೆಲವು ಹಿಂದುತ್ವನಿಷ್ಠ ಕಾರ್ಯಕರ್ತರ ಬಂಧನವಾಯಿತು. ಇನ್ನೂ ಏನೂ ಆಗಲಿಲ್ಲ ಎಂದು ದಾಭೋಲ್ಕರ್ ಕುಟುಂಬ ಕೂಗುತ್ತಲೇ ಇತ್ತು. ಈಗ ಶಿವಸೇನೆ-ಎನ್‌ಸಿಪಿ-ಕಾಂಗ್ರೆಸ್ ಈ ಮೂರು ಪಕ್ಷಗಳ ‘ಮಹಾವಿಕಾಸ್ ಮೈತ್ರಿಕೂಟ’ ಅಧಿಕಾರಕ್ಕೆ ಬಂದಿರುವುದರಿಂದ, ತನಿಖೆ ಮತ್ತು ಸರ್ಕಾರದ ಬಗ್ಗೆ ಇನ್ನೂ ಪ್ರಶ್ನೆಗಳು ಎದ್ದಿವೆ. ಈ ಘಟನೆಯಿಂದ ಎದ್ದು ಕಾಣುವ ಒಂದು ವಿಷಯವೇನೆಂದರೆ, ಯಾವುದೇ ಪಕ್ಷದ ಸರ್ಕಾರವಿದ್ದರೂ ತನಿಖಾದಳ ಯಾವುದೇ ಇರಲಿ; ‘ದಾಭೋಲ್ಕರರ ನಿಜವಾದ ಕೊಲೆಗಾರರು ಯಾರು’ ಎಂಬುದಕ್ಕಿಂತ ದಾಭೋಲ್ಕರ್ ಕುಟುಂಬದವರು ಯಾರನ್ನು ‘ಕೊಲೆಗಾರ’ ಎಂದು ನಿರ್ಧರಿಸಿದೆಯೋ ಆ ‘ಕೊಲೆಗಾರ’ರ ಬಂಧನ ಇನ್ನೂ ಆಗಿಲ್ಲ, ಆದುದರಿಂದ ಈ ಕೋಲಾಹಲ ನಡೆಯುತ್ತಿದೆ. ಇದರಿಂದ ಪ್ರಜಾಪ್ರಭುತ್ವ ತತ್ವಗಳ ಹೆಸರಿನಲ್ಲಿ ಕೋಲಾಹಲವುಂಟು ಮಾಡುವ ದಾಬೋಲ್ಕರ್ ಕುಟುಂಬವು ನಿಜವಾಗಿಯೂ ಪ್ರಜಾಪ್ರಭುತ್ವ ಪ್ರಕ್ರಿಯೆಯನ್ನು ನಂಬುತ್ತದೆಯೇ ? ಈಗ ‘ಭಾರತದ ಎಲ್ಲ ತನಿಖಾ ದಳಗಳು ತನಿಖೆ ಮಾಡಿಯೂ ಏನೂ ಸಿಗುತ್ತಿಲ್ಲ’, ಎಂದು ಹೇಳುತ್ತಾ, ಇನ್ನು ವಿದೇಶದ ‘ಎಫ್‌ಬಿಐ’ ಅಥವಾ ‘ಸ್ಕಾಟ್‌ಲ್ಯಾಂಡ್ ಯಾರ್ಡ್’ಗೆ ತನಿಖೆಯನ್ನು ಹಸ್ತಾಂತರಿಸಬೇಕೆಂದು ದಾಭೋಲ್ಕರ್ ಕುಟುಂಬ ಒತ್ತಾಯಿಸಲಿದೆಯೇ ?

Spread the love
  • Related Posts

    ರುಡ್ ಸೆಟ್ ಸಂಸ್ಥೆ, ಉಜಿರೆಯಲ್ಲಿ ಉಚಿತ ಮಹಿಳೆಯರ ವಸ್ತ್ರ ವಿನ್ಯಾಸ ತರಬೇತಿ

    ಉಜಿರೆ: ಶ್ರೀ ಕ್ಷೇತ್ರ ಧರ್ಮಸ್ಥಳ ಸಮೀಪದಲ್ಲಿರುವ ರುಡ್ ಸೆಟ್ ಸಂಸ್ಥೆ, ಉಜಿರೆಯಲ್ಲಿ ಮಹಿಳೆಯರ ವಸ್ತ್ರ ವಿನ್ಯಾಸ ತರಬೇತಿ / Dress Designing (ಚೂಡಿದಾರ್, ಬ್ಲೌಸ್, ಗೌನ್‌, ಸಾರಿ ಸ್ಕರ್ಟ್, ನೈಟಿ, ಫ್ರಾಕ್ , ಸ್ಯಾರಿ ಫಾಲ್, ಸಾರಿ ಕುಚ್ಚು ಇತ್ಯಾದಿ) ತರಬೇತಿಯನ್ನು…

    Spread the love

    ಮೋಸ ಮೋಸ ಮಹಾಮೋಸ ಆನೆ ಮೇಲೆ ಕ್ಲಿಕ್ ಮಾಡಿ ಹಣ ಗೆಲ್ಲಿ ಸಂದೇಶ ರವಾನೆ, ಪಾವತಿಗೂ ಮುನ್ನಾ ಜಾಗೃತರಾಗಿ

    ಮೋಸ ಹೋಗುವವರು ಇರುವವರೆಗೂ ಮೋಸಮಾಡುವವರು ಜೀವಂತ ಇರುತ್ತಾರೆ ಹಾಗಂತಾ ನಾವು ನಮ್ಮ ಎಚ್ಚರಿಕೆಯಲ್ಲಿ ಇರಬೇಕು ಸ್ವಲ್ಪ ಯಮಾರಿದ್ರು ಖಾತೆಯಿಂದ ಮಾಯವಾಗಬಹುದು. ಹಣ ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಬೇರೆಬೇರೆ ರೀತಿಯಲ್ಲಿ ಹಣ ಕಳೆದುಕೊಂಡವರನ್ನು ಕಾಣಬಹುದು ಹಾಗೆ ಮೋಸ ಮಾಡುವವರು ಬೇರೆ ಬೇರೆ…

    Spread the love

    You Missed

    ಬೆಳ್ತಂಗಡಿ ವಕೀಲರ ಸಂಘದಿಂದ ಕ್ರಿಸ್ಮಸ್ ಹಬ್ಬದ ಆಚರಣೆ

    • By admin
    • December 17, 2024
    • 88 views
    ಬೆಳ್ತಂಗಡಿ ವಕೀಲರ ಸಂಘದಿಂದ ಕ್ರಿಸ್ಮಸ್ ಹಬ್ಬದ ಆಚರಣೆ

    ರುಡ್ ಸೆಟ್ ಸಂಸ್ಥೆ, ಉಜಿರೆಯಲ್ಲಿ ಉಚಿತ ಮಹಿಳೆಯರ ವಸ್ತ್ರ ವಿನ್ಯಾಸ ತರಬೇತಿ

    • By admin
    • December 15, 2024
    • 51 views
    ರುಡ್ ಸೆಟ್ ಸಂಸ್ಥೆ,  ಉಜಿರೆಯಲ್ಲಿ  ಉಚಿತ ಮಹಿಳೆಯರ ವಸ್ತ್ರ ವಿನ್ಯಾಸ ತರಬೇತಿ

    ಮೋಸ ಮೋಸ ಮಹಾಮೋಸ ಆನೆ ಮೇಲೆ ಕ್ಲಿಕ್ ಮಾಡಿ ಹಣ ಗೆಲ್ಲಿ ಸಂದೇಶ ರವಾನೆ, ಪಾವತಿಗೂ ಮುನ್ನಾ ಜಾಗೃತರಾಗಿ

    • By admin
    • December 14, 2024
    • 54 views
    ಮೋಸ ಮೋಸ ಮಹಾಮೋಸ ಆನೆ ಮೇಲೆ ಕ್ಲಿಕ್ ಮಾಡಿ ಹಣ ಗೆಲ್ಲಿ ಸಂದೇಶ ರವಾನೆ,  ಪಾವತಿಗೂ ಮುನ್ನಾ ಜಾಗೃತರಾಗಿ

    ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ ವೀರೇಂದ್ರ ಹೆಗ್ಗಡೆಯವರಿಂದ  ರಾಷ್ಟ್ರಪತಿಗಳ  ಭೇಟಿ

    • By admin
    • December 12, 2024
    • 137 views
    ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ ವೀರೇಂದ್ರ ಹೆಗ್ಗಡೆಯವರಿಂದ  ರಾಷ್ಟ್ರಪತಿಗಳ  ಭೇಟಿ

    ಜಮ್ಮು ಮತ್ತು ಕಾಶ್ಮೀರದ ಪೂಂಚ್‌ನಲ್ಲಿ ನೆಲಬಾಂಬ್ ಸ್ಫೋಟದಲ್ಲಿ ಯೋಧ ಹುತಾತ್ಮ

    • By admin
    • December 10, 2024
    • 77 views
    ಜಮ್ಮು ಮತ್ತು ಕಾಶ್ಮೀರದ ಪೂಂಚ್‌ನಲ್ಲಿ ನೆಲಬಾಂಬ್ ಸ್ಫೋಟದಲ್ಲಿ ಯೋಧ ಹುತಾತ್ಮ

    ಮುರುಡೇಶ್ವರ ಪ್ರವಾಸಕ್ಕೆ ಬಂದ ವಿದ್ಯಾರ್ಥಿನಿಯರು ಸಮುದ್ರದ ನೀರಿನಲ್ಲಿ ಮುಳುಗಿ ನಾಪತ್ತೆ

    • By admin
    • December 10, 2024
    • 87 views
    ಮುರುಡೇಶ್ವರ ಪ್ರವಾಸಕ್ಕೆ ಬಂದ ವಿದ್ಯಾರ್ಥಿನಿಯರು ಸಮುದ್ರದ ನೀರಿನಲ್ಲಿ ಮುಳುಗಿ ನಾಪತ್ತೆ