ಮುಂಡಾಜೆ: ಬೆಂಗಳೂರಿನ ಅಶೋಕ್ ಇಂಟರ್ ನ್ಯಾಶನಲ್ ಶಾಲೆಯಲ್ಲಿ ಸೆ.3 ರಂದು ನಡೆದ ರಾಜ್ಯಮಟ್ಟದ ಸ್ಪೆಲ್ ಬೀ ಸ್ಪರ್ಧೆಯಲ್ಲಿ ಭಾಗವಹಿಸಿ 13ನೇ ರಾಂಕ್ ನೊಂದಿಗೆ ಚಾರ್ವಿ ಇವರು ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಉದಯವಾಣಿಯ ಗುರು ಮುಂಡಾಜೆ ಮತ್ತು ವಾಣಿ ದಂಪತಿಯ ಪುತ್ರಿಯಾಗಿರುವ ಇವರು ಉಜಿರೆ ಅನುಗ್ರಹ ಆಂಗ್ಲ ಮಾಧ್ಯಮ ಶಾಲೆಯ 2ನೇ ತರಗತಿ ವಿದ್ಯಾರ್ಥಿನಿ ಯಾಗಿರುತ್ತಾರೆ. ಡಿ. 30 ರಂದು ರಾಷ್ಟ್ರ ಮಟ್ಟದ ಸ್ಪರ್ಧೆ ಕೊಯಂಬತ್ತೂರಿನಲ್ಲಿ ನಡೆಯಲಿದೆ.