ಈ ದಿನದ ರಾಶಿಫಲ ಯಾರಿಗೆ ಶುಭ ಯಾರಿಗೆ ಆಶುಭಮ ಫಲ!

ಮೇಷ

ನಿಮ್ಮ ಪ್ರತಿಭೆಯ ತೀಕ್ಷ್ಣತೆಯು ಸಂಬಂಧಪಟ್ಟವರ ಗಮನ ಸೆಳೆಯಲಿದೆ. ತಾಂತ್ರಿಕ ಕ್ಷೇತ್ರಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವವರಿಗೆ ಹೆಚ್ಚಿನ ಬಡ್ತಿ. ಕಾರ್ಯಬಾಹುಳ್ಯದಿಂದಾಗಿ ಆಲಸ್ಯ ತಲೆದೋರಲಿದೆ. ಸಮಾಧಾನದ ನಡೆ ಅವಶ್ಯಕ.

ವೃಷಭ

ಹೊಸ ಅವಕಾಶಗಳ ಬಾಗಿಲು ತೆರೆಯುವುದರಿಂದ ನಿಯೋಜಿತ ಕೆಲಸಗಳನ್ನು ಆಸಕ್ತಿಯಿಂದ ಒಪ್ಪಿಕೊಳ್ಳುವಿರಿ. ಆತ್ಮವಿಶ್ವಾಸ ಮೂಡಿಬರಲಿದೆ. ಗುತ್ತಿಗೆ ವ್ಯವಹಾರ ನಡೆಸುತ್ತಿರುವವರಿಗೆ ಹೊಸ ಕೆಲಸ ಬರಲಿದೆ.

ಮಿಥುನ

ಮಹಿಳೆಯರಿಗೆ ವಿಶೇಷ ದಿನ. ಹಣಕಾಸಿನ ವಿಷಯಗಳಲ್ಲಿ ತೊಂದರೆ ಉಂಟಾಗದು. ಷೇರು ಮಾರುಕಟ್ಟೆಯಲ್ಲಿ ವಿಚಾರ ವಿಮರ್ಶೆ ಮಾಡಿ ಹಣ ತೊಡಗಿಸುವುದು ಉತ್ತಮ. ಅತಿ ಆಸೆಯಿಂದಾಗಿ ಮೋಸಹೋಗುವ ಸಾಧ್ಯತೆ.

ಕಟಕ

ಕಾರ್ಯಕ್ಷೇತ್ರದಲ್ಲಿನ ಕೆಲಸಗಳನ್ನು ಶೀಘ್ರ ಮುಗಿಸಲಿದ್ದೀರಿ. ಮದುವೆ ಮುಂಜಿ ಮುಂತಾದ ಮಂಗಳ ಕಾರ್ಯಗಳ ಜವಾಬ್ದಾರಿ ನಿಭಾಯಿಸುವ ಧಾವಂತ ಉಂಟಾಗಲಿದೆ. ಬಂಧುಗಳ ಆಗಮನ ಸಾಧ್ಯತೆ ಕಂಡುಬರುವುದು.

ಸಿಂಹ

ಕಾರ್ಯತಂತ್ರವನ್ನು ತಡಮಾಡದೇ ಕಾರ್ಯರೂಪಕ್ಕೆ ತರಲಿದ್ದೀರಿ. ಈ ದಿನ ನೀವು ವಿಚಾರ ಮಾಡಿ ತೆಗೆದುಕೊಳ್ಳುವ ಎಲ್ಲ ನಿರ್ಧಾರಗಳು ಸರಿಯಾಗಿದ್ದು ಶುಭಫಲಗಳನ್ನೇ ತರಲಿವೆ. ಹಿರಿಯರ ಆರೋಗ್ಯಕ್ಕಾಗಿ ವೆಚ್ಚ ಭರಿಸಬೇಕಾದೀತು.

ಕನ್ಯಾ

ಸ್ನೇಹ ಸಂಬಂಧಗಳು ಗಟ್ಟಿಯಾಗಿ ಹೊಸ ಚೈತನ್ಯ ಮೂಡುವುದರಿಂದ ಸಹಕಾರಗಳು ನಿರೀಕ್ಷೆಗೂ ಮೀರಿ ದೊರಕಲಿದೆ. ಪ್ರಿಯರಿಂದ ಉಡುಗೋರೆ ಲಭ್ಯವಾಗುವ ಸಾಧ್ಯತೆ. ಕಲಾವಿದರಿಗೆ ಹೆಚ್ಚಿನ ಅವಕಾಶಗಳು ಲಭ್ಯ.

ತುಲಾ

ವ್ಯವಹಾರದಲ್ಲಿ ಬದಲಾವಣೆಗಳನ್ನು ನಿರೀಕ್ಷಿಸಲಾಗದು. ಈ ದಿನದ ಕಷ್ಟದ ಕ್ಷಣಗಳು ನಾಳಿನ ಬದುಕಿನ ಸುಖಕ್ಕೆ ನಾಂದಿಯಾಗಲಿದೆ. ತಾಳ್ಮೆ ಹಾಗೂ ಸಹಿಷ್ಣುತೆಯೇ ಈ ದಿನದ ಶುಭ ಫಲಕ್ಕೆ ಹೇತುವಾಗಲಿದೆ.

ವೃಶ್ಚಿಕ

ಚಿನ್ನಾಭರಣ ಖರೀದಿಸುವ ಸಾಧ್ಯತೆ ಕಂಡುಬರುವುದು. ಆದಾಯದಲ್ಲಿ ಹೆಚ್ಚಳ ಉಂಟಾಗಲಿದೆ. ತಂದೆಯ ಆರೋಗ್ಯದಲ್ಲಿ ಸುಧಾರಣೆ. ಮಕ್ಕಳ ವಿವಾಹ ಸಂಬಂಧಗಳು ಕೂಡಿಬರುವ ಸಾಧ್ಯತೆ. ದೂರ ಪ್ರಯಾಣಕ್ಕೆ ಸಿದ್ಧತೆ.

ಧನು

ವಾಹನಗಳ ಬಿಡಿ ಭಾಗಗಳ ಮಾರಾಟಗಾರರಿಗೆ, ತಯಾರಕರಿಗೆ, ದುರಸ್ತಿ ಮಾಡುವವರಿಗೆ ಹೆಚ್ಚಿನ ಆದಾಯ . ಮನೆಯಲ್ಲಿ ನಡೆಯಬೇಕಾದ ಮಂಗಳ ಕಾರ್ಯಗಳಿಗೆ ತಯಾರಿ ನಡೆಸಲಿದ್ದೀರಿ. ಹಬ್ಬದ ವಾತಾವರಣ.

ಮಕರ

ಮೇಲಧಿಕಾರಿಗಳು ನಿಮ್ಮ ನಿರ್ಧಾರಕ್ಕೆ ನಿಮ್ಮೊಂದಿಗಿದ್ದಾರೆಂಬ ಭರವಸೆಯಿಂದ ಕೆಲಸ ನಿರ್ವಹಿಸಲಿದ್ದೀರಿ. ಯಾವುದೇ ನಿರ್ಧಾರ ತೆಗೆದುಕೊಳ್ಳುವ ಮೊದಲು ಸಮಾಲೋಚನೆ ನಡೆಸುವುದು ಉತ್ತಮ.

ಕುಂಭ

ಸಹೋದ್ಯೋಗಿಗಳೊಡನೆ ಹೊಂದಾಣಿಕೆಯ ಅಗತ್ಯ ಕಂಡುಬರುವುದು. ಕೆಲಸದ ಒತ್ತಡ ಕಡಿಮೆಯಾಗಿ ನೆಮ್ಮದಿಯನ್ನು ತರಲಿದೆ. ಉದ್ಯೋಗದಲ್ಲಿ ಲಾಭ ಕಾಣಲಿದ್ದೀರಿ.

ಮೀನ

ಪೀಠೋಪಕರಣಗಳು ಮತ್ತು ಆಲಂಕಾರಿಕ ವಸ್ತುಗಳ ಖರೀದಿ ಸಾಧ್ಯತೆ. ಆಯುಧಗಳ ವಿಷಯದಲ್ಲಿ ಜಾಗರೂಕರಾಗಿರುವುದು ಒಳಿತು. ಮಕ್ಕಳ ಆರೋಗ್ಯದ ಕಡೆ ಗಮನ ಅಗತ್ಯ. ಸಂಗಾತಿಯೊಂದಿಗೆ ಸಂತಸದ ಕ್ಷಣಗಳು.

Spread the love
  • Related Posts

    ಸರ್ವಧರ್ಮ ಸಮನ್ವಯ ಕೇಂದ್ರವಾದ ಧರ್ಮಸ್ಥಳವು ನಾಡಿನ ಪವಿತ್ರ ಹಾಗೂ ಪುಣ್ಯಕ್ಷೇತ್ರ, ಹೆಗ್ಗಡೆಯವರು ಮಾತೃಹೃದಯದಿಂದ ಮಾಡುವ ಸಮಾಜ ಸೇವೆ ಅನನ್ಯ ಮತ್ತು ಅನುಪಮವಾಗಿದೆ

    ಧರ್ಮಸ್ಥಳ: ಸರ್ವಧರ್ಮ ಸಮನ್ವಯ ಕೇಂದ್ರವಾದ ಧರ್ಮಸ್ಥಳವು ನಾಡಿನ ಪವಿತ್ರ ಹಾಗೂ ಪುಣ್ಯಕ್ಷೇತ್ರವಾಗಿದ್ದು, ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಮಾತೃಹೃದಯದಿಂದ ಮಾಡುವ ಸಮಾಜ ಸೇವೆ ಅನನ್ಯ ಮತ್ತು ಅನುಪಮವಾಗಿದೆ ಎಂದು ತುಮಕೂರು ಸಿದ್ಧಗಂಗಾ ಮಠದ ಪೂಜ್ಯ ಸಿದ್ಧಲಿಂಗ ಸ್ವಾಮೀಜಿ ಹೇಳಿದರು. ಅವರು ಶುಕ್ರವಾರ…

    Spread the love

    ಧರ್ಮಸ್ಥಳದಲ್ಲಿ ಸಂಭ್ರಮ: ಅ.24ರಂದು ಡಾ.ಡಿ ವೀರೇಂದ್ರ ಹೆಗ್ಗಡೆಯವರ ಪಟ್ಟಾಭಿಷೇಕದ 58ನೇ ವರ್ಧಂತ್ಯುತ್ಸವ

    ಧರ್ಮಸ್ಥಳ: ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆಯವರ ಪಟ್ಟಾಭಿಷೇಕದ 58 ನೇ ವರ್ಧಂತ್ಯುತ್ಸವ ಅಕ್ಟೋಬರ್ 24 ಶುಕ್ರವಾರದಂದು ಧರ್ಮಸ್ಥಳದಲ್ಲಿ ನೌಕರವೃಂದದವರು, ಊರಿನ ನಾಗರೀಕರು, ಭಕ್ತರು ಹಾಗೂ ಅಭಿಮಾನಿಗಳ ಉಪಸ್ಥಿತಿಯಲ್ಲಿ ನಡೆಯಲಿದೆ. ಭಗವಾನ್ ಚಂದ್ರನಾಥಸ್ವಾಮಿ ಬಸದಿ ಹಾಗೂ ಶ್ರೀ ಮಂಜುನಾಥಸ್ವಾಮಿ…

    Spread the love

    You Missed

    ಸರ್ವಧರ್ಮ ಸಮನ್ವಯ ಕೇಂದ್ರವಾದ ಧರ್ಮಸ್ಥಳವು ನಾಡಿನ ಪವಿತ್ರ ಹಾಗೂ ಪುಣ್ಯಕ್ಷೇತ್ರ, ಹೆಗ್ಗಡೆಯವರು ಮಾತೃಹೃದಯದಿಂದ ಮಾಡುವ ಸಮಾಜ ಸೇವೆ ಅನನ್ಯ ಮತ್ತು ಅನುಪಮವಾಗಿದೆ

    • By admin
    • October 24, 2025
    • 16 views
    ಸರ್ವಧರ್ಮ ಸಮನ್ವಯ ಕೇಂದ್ರವಾದ ಧರ್ಮಸ್ಥಳವು ನಾಡಿನ ಪವಿತ್ರ ಹಾಗೂ ಪುಣ್ಯಕ್ಷೇತ್ರ, ಹೆಗ್ಗಡೆಯವರು ಮಾತೃಹೃದಯದಿಂದ ಮಾಡುವ ಸಮಾಜ ಸೇವೆ ಅನನ್ಯ ಮತ್ತು ಅನುಪಮವಾಗಿದೆ

    ಧರ್ಮಸ್ಥಳದಲ್ಲಿ ಸಂಭ್ರಮ: ಅ.24ರಂದು ಡಾ.ಡಿ ವೀರೇಂದ್ರ ಹೆಗ್ಗಡೆಯವರ ಪಟ್ಟಾಭಿಷೇಕದ 58ನೇ ವರ್ಧಂತ್ಯುತ್ಸವ

    • By admin
    • October 23, 2025
    • 26 views
    ಧರ್ಮಸ್ಥಳದಲ್ಲಿ ಸಂಭ್ರಮ: ಅ.24ರಂದು ಡಾ.ಡಿ ವೀರೇಂದ್ರ ಹೆಗ್ಗಡೆಯವರ ಪಟ್ಟಾಭಿಷೇಕದ 58ನೇ ವರ್ಧಂತ್ಯುತ್ಸವ

    ನಾಳೆ ಎಸ್.ಡಿ.ಎಂ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಉಜಿರೆಯಲ್ಲಿ ಉಚಿತ ಮೂಳೆ ಮತ್ತು ಮೂಳೆ ಸಾಂದ್ರತೆ ತಪಾಸಣಾ ಶಿಬಿರ

    • By admin
    • October 23, 2025
    • 25 views
    ನಾಳೆ  ಎಸ್.ಡಿ.ಎಂ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಉಜಿರೆಯಲ್ಲಿ ಉಚಿತ ಮೂಳೆ ಮತ್ತು ಮೂಳೆ ಸಾಂದ್ರತೆ ತಪಾಸಣಾ ಶಿಬಿರ

    ಸೇವಾಧಾಮದಲ್ಲಿ ದೀಪಾವಳಿ ಹಬ್ಬದ ಆಚರಣೆ

    • By admin
    • October 23, 2025
    • 44 views
    ಸೇವಾಧಾಮದಲ್ಲಿ ದೀಪಾವಳಿ ಹಬ್ಬದ ಆಚರಣೆ

    ಮಂಗಳೂರಿನಲ್ಲಿ ಹೈ ಕೋರ್ಟ್ ಪೀಠ ಸ್ಥಾಪನೆಗಾಗಿ ಬಂಟ್ವಾಳದಲ್ಲಿ ಪೋಸ್ಟ್ ಕಾರ್ಡ್ ಚಳವಳಿ

    • By admin
    • October 23, 2025
    • 220 views
    ಮಂಗಳೂರಿನಲ್ಲಿ ಹೈ ಕೋರ್ಟ್ ಪೀಠ ಸ್ಥಾಪನೆಗಾಗಿ ಬಂಟ್ವಾಳದಲ್ಲಿ ಪೋಸ್ಟ್ ಕಾರ್ಡ್ ಚಳವಳಿ

    17ವಯೋಮಾನದ ಬಾಲಕಿಯರ ರಾಜ್ಯಮಟ್ಟದ ವಾಲಿಬಾಲ್ ಪಂದ್ಯಾಟದಲ್ಲಿ ಮುಂಡಾಜೆ ಪ್ರೌಢಶಾಲೆಯ ಕು. ಯಕ್ಷಿತಾ.ಜೆ ರಾಷ್ಟ್ರ ಮಟ್ಟಕ್ಕೆ ಆಯ್ಕೆ

    • By admin
    • October 19, 2025
    • 88 views
    17ವಯೋಮಾನದ  ಬಾಲಕಿಯರ ರಾಜ್ಯಮಟ್ಟದ ವಾಲಿಬಾಲ್ ಪಂದ್ಯಾಟದಲ್ಲಿ ಮುಂಡಾಜೆ ಪ್ರೌಢಶಾಲೆಯ ಕು. ಯಕ್ಷಿತಾ.ಜೆ ರಾಷ್ಟ್ರ ಮಟ್ಟಕ್ಕೆ ಆಯ್ಕೆ