ಲಾಕ್ ಡೌನ್ ಸಮಯದಲ್ಲಿ ಶ್ರಾವಣ ಸೋಮವಾರದ ವೃತವನ್ನು ಹೇಗೆ ಆಚರಿಸಬಹುದು.

‘ಕೊರೋನಾ ಸಾಂಕ್ರಾಮಿಕ ರೋಗದ ಕಾರಣದಿಂದ ಮನೆಯಿಂದ ಹೊರಗೆ ಬರಲು ಮಿತಿ ಇರುವುದರಿಂದ ‘ಶ್ರಾವಣ ಸೋಮವಾರದ ವ್ರತವನ್ನು ಹೇಗೆ ಆಚರಿಸಬಹುದು ?

೨೭ ಜುಲೈ ಹಾಗೂ ೩, ೧೦ ಮತ್ತು ೧೭ ಆಗಸ್ಟ್ ಈ ದಿನಗಳಂದು ಶ್ರಾವಣ ಸೋಮವಾರದ ವ್ರತವನ್ನು ಆಚರಿಸಲಾಗುತ್ತದೆ.

ಸದ್ಯ ಜಗತ್ತಿನಾದ್ಯಂತ ಕೊರೋನಾ ಮಹಾಮಾರಿಯಿಂದ ಎಲ್ಲೆಡೆ ಜನರ ಸಂಚಾರಕ್ಕೆ ಅನೇಕ ನಿರ್ಬಂಧಗಳನ್ನು ವಿಧಿಸಲಾಗಿದೆ. ಭಾರತದಲ್ಲಿಯೂ ವಿವಿಧ ರಾಜ್ಯಗಳಲ್ಲಿ ಸಂಚಾರ ನಿರ್ಬಂಧವನ್ನು (ಲಾಕ್‌ಡೌನ್) ವಿಧಿಸಲಾಗಿದೆ. ಕೆಲವು ಸ್ಥಳಗಳಲ್ಲಿ ಕೊರೋನಾ ಸೋಂಕು ಕಡಿಮೆಯಿದ್ದರೂ, ಜನರು ಮನೆಯಿಂದ ಹೊರಗೆ ಬರಲು ಅನೇಕ ನಿರ್ಬಂಧಗಳು ಇದ್ದೇ ಇವೆ. ಇದರಿಂದ ಹಿಂದೂಗಳ ವಿವಿಧ ಹಬ್ಬ, ಉತ್ಸವ, ವ್ರತಗಳನ್ನು ಎಂದಿನಂತೆ ಸಾಮೂಹಿಕ ರೀತಿಯಲ್ಲಿ ಆಚರಿಸಲು ನಿರ್ಬಂಧಗಳಿವೆ. ಕೊರೋನಾದಂತಹ ಆಪತ್ಕಾಲದ ಹಿನ್ನೆಲೆಯಲ್ಲಿ ಹಿಂದೂ ಧರ್ಮವು ಧರ್ಮಾಚರಣೆಯಲ್ಲಿ ಕೆಲವೊಂದು ಪರ್ಯಾಯಗಳನ್ನು ತಿಳಿಸಿದೆ. ಇದನ್ನು ‘ಆಪದ್ಧರ್ಮ ಎಂದು ಹೇಳುತ್ತಾರೆ. ಆಪದ್ಧರ್ಮವೆಂದರೆ ‘ಆಪದಿ ಕರ್ತವ್ಯೋ ಧರ್ಮಃ| ಎಂದರೆ ಆಪತ್ತಿನ ಸಮಯದಲ್ಲಿ ಆಚರಿಸುವ ಧರ್ಮ.
ಇಂತಹ ಸಂದರ್ಭದಲ್ಲಿ ಶ್ರಾವಣ ತಿಂಗಳು ಬರುತ್ತಿರುವುದರಿಂದ ಸಂಪತ್ಕಾಲದಲ್ಲಿ ತಿಳಿಸಿರುವ ಪದ್ಧತಿಯಿಂದ ಈ ಕಾಲಾವಧಿಯಲ್ಲಿ ಸಾಮೂಹಿಕ ರೂಪದಲ್ಲಿ ಆಚರಿಸುವ ಪರಂಪರೆಯಿರುವ ವಿವಿಧ ಹಬ್ಬಗಳು ಮತ್ತು ವ್ರತಗಳನ್ನು ಎಂದಿನಂತೆ ಆಚರಿಸಲು ಆಗುವುದಿಲ್ಲ. ಈ ದೃಷ್ಟಿಯಿಂದ ಪ್ರಸ್ತುತ ಲೇಖನದಲ್ಲಿ ಸದ್ಯದ ದೃಷ್ಟಿಯಿಂದ ಧರ್ಮಾಚರಣೆಯೆಂದು ಶ್ರಾವಣ ಸೋಮವಾರದಂದು ಮಾಡುವ ‘ಶ್ರಾವಣ ಸೋಮವಾರ ವ್ರತವನ್ನು ಹೇಗೆ ಆಚರಿಸುವುದು, ಎನ್ನುವ ವಿಚಾರವನ್ನು ಮಾಡಲಾಗಿದೆ. ಇಲ್ಲಿ ಮಹತ್ವದ ವಿಷಯವೆಂದರೆ, ಹಿಂದೂ ಧರ್ಮವು ಯಾವ ಮಟ್ಟದ ವರೆಗೆ ಮಾನವನ ವಿಚಾರವನ್ನು ಮಾಡಿದೆ ಎಂಬುದು ಇದರಿಂದ ಕಲಿಯಬಹುದಾಗಿದೆ. ಅದರಂತೆ ಹಿಂದೂ ಧರ್ಮದ ಶ್ರೇಷ್ಠತೆ ಗಮನಕ್ಕೆ ಬರುತ್ತದೆ.
ಶ್ರಾವಣ ಸೋಮವಾರದಂದು ಶಿವನ ದೇವಸ್ಥಾನಕ್ಕೆ ಹೋಗಿ ಶಿವಲಿಂಗಕ್ಕೆ ಅಭಿಷೇಕ ಮಾಡುವ ಪದ್ಧತಿಯಿದೆ. ‘ಲಾಕ್‌ಡೌನ್’ ಕಾರಣದಿಂದ ಮನೆಯಿಂದ ಹೊರಗೆ ಶಿವಾಲಯಕ್ಕೆ ಹೋಗಲು ಸಾಧ್ಯವಿಲ್ಲದವರು ‘ಆಪದ್ಧರ್ಮದ ಭಾಗವೆಂದು ಮನೆಯಲ್ಲಿಯೇ ಇದ್ದು, ಈ ವ್ರತವನ್ನು ಯಾವ ರೀತಿ ಆಚರಿಸಬೇಕು ಎನ್ನುವ ವಿಷಯದ ಲೇಖನದಲ್ಲಿ ಧರ್ಮಶಾಸ್ತ್ರಾಧಾರಿತ ವಿಶ್ಲೇಷಣೆಯನ್ನು ಮಾಡಲಾಗಿದೆ.

೧. ಶ್ರಾವಣ ಸೋಮವಾರದಂದು ಉಪವಾಸವನ್ನು ಮಾಡಿ ಶಿವನನ್ನು ವಿಧಿವತ್ತಾಗಿ ಪೂಜಿಸುವುದು.
‘ಉಪೋಷಿತಃ ಶುಚಿರ್ಭೂತ್ವಾ ಸೋಮವಾರೇ ಜಿತೇನ್ದ್ರಿಯಃ|
ವೈದಿಕೈರ್ಲೌಕಿಕೈರ್ಮನ್ತ್ರೈರ್ವಿಧಿವತ್ಪೂಜಯೇಚ್ಛಿವಮ್ ||’

ಸ್ಕಂದಪುರಾಣ, ಬ್ರಹ್ಮಖಂಡ, ಅಧ್ಯಾಯ ೮, ಶ್ಲೋಕ ೧೦
ಅರ್ಥ: ಸಂಯಮ ಮತ್ತು ಶುಚಿರ್ಭೂತ ಮುಂತಾದ ನಿಯಮಗಳ ಪಾಲನೆಯನ್ನು ಮಾಡುತ್ತ ಸೋಮವಾರದಂದು ಉಪವಾಸ ಮಾಡಿ ವೈದಿಕ ಅಥವಾ ಲೌಕಿಕ ಮಂತ್ರಗಳಿಂದ ಶಿವನನ್ನು ವಿಧಿವತ್ತಾಗಿ ಪೂಜಿಸಬೇಕು.
ಶಾಸ್ತ್ರಕಾರರು ಮನಸ್ಸಿನ ಮೇಲೆ ಸಂಯಮವನ್ನು ಇಟ್ಟು, ಶುಚಿರ್ಭೂತರಾಗಿ ನಿಯಮಗಳನ್ನು ಪಾಲಿಸುವ ವಿಷಯದಲ್ಲಿ ಮತ್ತು ಉಪವಾಸ ಮಾಡುವ ವಿಷಯದಲ್ಲಿ ತಿಳಿಸಿದ್ದಾರೆ. ಅದರಂತೆ ತಮ್ಮ ತಮ್ಮ ಜ್ಞಾನದ ಆಧಾರದಲ್ಲಿ ಸಾಧ್ಯವಿದ್ದರೆ, ಆ ವೈದಿಕ ಅಥವಾ ಲೌಕಿಕ ಮಂತ್ರಗಳ ಮೂಲಕ ಶಿವನ ಪೂಜೆಯನ್ನು ಮಾಡಲು ತಿಳಿಸಿದ್ದಾರೆ.

೨. ಶಿವನ ಪೂಜೆಯನ್ನು ಹೇಗೆ ಮಾಡಬೇಕು?

ಅ. ತಮ್ಮ ಮನೆಯಲ್ಲಿರುವ ಶಿವಲಿಂಗದ ಪೂಜೆಯನ್ನು ಮಾಡಬೇಕು.

ಆ. ಒಂದು ವೇಳೆ ಶಿವಲಿಂಗ ಉಪಲಬ್ಧವಿಲ್ಲದಿದ್ದರೆ, ಶಿವನ ಚಿತ್ರದ ಪೂಜೆಯನ್ನು ಮಾಡಬೇಕು.

. ಶಿವನ ಚಿತ್ರ ಕೂಡ ಉಪಲಬ್ಧವಿಲ್ಲದಿದ್ದರೆ, ಮಣೆಯ ಮೇಲೆ ಶಿವಲಿಂಗದ ಅಥವಾ ಶಿವನ ಚಿತ್ರವನ್ನು ಬಿಡಿಸಿ ಅದರ ಪೂಜೆಯನ್ನು ಮಾಡಬೇಕು.

ಈ. ಮೇಲಿನವುಗಳನ್ನು ಯಾವುದೂ ಸಾಧ್ಯವಿಲ್ಲದಿದ್ದರೆ, ಶಿವನ ‘ಓಂ ನಮಃ ಶಿವಾಯ ಈ ನಾಮಮಂತ್ರವನ್ನು ಬರೆದು ಅದರ ಪೂಜೆಯನ್ನು ಕೂಡ ಮಾಡಬಹುದಾಗಿದೆ.

ಆಧಾರ: ಸನಾತನ ಸಂಸ್ಥೆ
🖊️ಬರಹ: ಶ್ರೀ. ವಿನೋದ ಕಾಮತ,
ರಾಜ್ಯ ವಕ್ತಾರರು, ಸನಾತನ ಸಂಸ್ಥೆ, ಕರ್ನಾಟಕ
(ಸಂಪರ್ಕ : 9342599299 )

ಕಾಲನಿರ್ಣಯನ್ಯೂಸ್ ವಾಟ್ಸಾಪ್ ಗ್ರೂಫ್ ಸೇರಲು ಇಲ್ಲಿ ಕ್ಲಿಕ್ ಮಾಡಿ https://chat.whatsapp.com/CTDH16qVW5RL023JwWgknA

Spread the love
  • Related Posts

    ಬೆನಕ ಹೆಲ್ತ್ ಸೆಂಟರ್ ನಲ್ಲಿ ಉಚಿತ ನರ್ಸಿಂಗ್ ತರಬೇತಿಗೆ ಅರ್ಜಿ ಆಹ್ವಾನ

    ಉಜಿರೆ: ಬೆಳ್ತಂಗಡಿ ತಾಲೂಕಿನ ಉಜಿರೆಯ ಬೆನಕ ಹೆಲ್ತ್ ಸೆಂಟರ್ ಮಲ್ಟಿ ಸ್ಪೆಷಾಲಿಟಿ ಹಾಸ್ಪಿಟಲ್ ನಲ್ಲಿ ಪಿಯುಸಿ ವಿದ್ಯಾಭ್ಯಾಸ ಮುಗಿಸಿದ ಯುವತಿಯರಿಗೆ ಉಚಿತವಾಗಿ ತರಬೇತಿಯೊಂದಿಗೆ ಉದ್ಯೋಗಾವಕಾಶ ಪಡೆಯುವ ಸುವರ್ಣಾವಕಾಶವನ್ನು ಕಲ್ಪಿಸಲಾಗಿದೆ. NABH ಪುರಸ್ಕೃತ ಬೆನಕ ಹೆಲ್ತ್ ಸೆಂಟರ್ ನಲ್ಲಿ 2ವರ್ಷದ ANM ತರಬೇತಿಯನ್ನು…

    Spread the love

    ವಾಹನ ಸವಾರರೇ ಗಮನಿಸಿ HSRP ನಂಬರ್ ಪ್ಲೇಟ್ ಆಳವಡಿಸದೇ ಇದ್ದಲ್ಲಿ ಸೆ.16ರಿಂದ ದಂಡ ಫಿಕ್ಸ್

    Bangalore: ರಾಜ್ಯದಲ್ಲಿ ಎಚ್ಎಸ್ಆರ್ಪಿ ಅಳವಡಿಸಲು ಸೆಪ್ಟೆಂಬರ್ 15ರವರೆಗೆ ಅವಕಾಶ ನೀಡಲಾಗಿದೆ. HSRP ಗಳನ್ನು ಪಡೆಯದ ವಾಹನ ಮಾಲೀಕರು ಸೆ.16 ರಿಂದ ದಂಡವನ್ನು ಪಾವತಿಸಬೇಕಾಗಬಹುದು ಅಥವಾ ಇತರ ದಂಡದ ಕ್ರಮವನ್ನು ಎದುರಿಸಬೇಕಾಗುತ್ತದೆ. 2019ರ ಏಪ್ರಿಲ್ 1ರ ಮೊದಲು ರಾಜ್ಯದಲ್ಲಿ ನೋಂದಣಿಯಾಗಿರುವ ಎಲ್ಲ ವಾಹನಗಳಿಗೆ…

    Spread the love

    You Missed

    ನಿಫಾ ವೈರಸ್ ಸೋಂಕಿಗೆ ಕೇರಳ ಮೂಲದ ವಿದ್ಯಾರ್ಥಿ ಬಲಿ, ಮೃತನ ಸಂಪರ್ಕದಲ್ಲಿದ್ದ ಬೆಂಗಳೂರಿನ 15ವಿದ್ಯಾರ್ಥಿಗಳಿಗೆ ಐಸೋಲೇಷನ್

    • By admin
    • September 16, 2024
    • 17 views
    ನಿಫಾ ವೈರಸ್ ಸೋಂಕಿಗೆ ಕೇರಳ ಮೂಲದ ವಿದ್ಯಾರ್ಥಿ ಬಲಿ, ಮೃತನ ಸಂಪರ್ಕದಲ್ಲಿದ್ದ ಬೆಂಗಳೂರಿನ 15ವಿದ್ಯಾರ್ಥಿಗಳಿಗೆ ಐಸೋಲೇಷನ್

    ಡೊನಾಲ್ಡ್ ಟ್ರಂಪ್ ಮೇಲೆ ಗುಂಡಿನ ದಾಳಿಗೆ ಯತ್ನ

    • By admin
    • September 16, 2024
    • 30 views
    ಡೊನಾಲ್ಡ್ ಟ್ರಂಪ್ ಮೇಲೆ ಗುಂಡಿನ ದಾಳಿಗೆ ಯತ್ನ

    CM ಕಾರ್ಯಕ್ರಮದಲ್ಲಿ ಭದ್ರತಾ ವೈಫಲ್ಯ ವೇದಿಕೆ ಮೇಲೇರಿ ಯುವಕನಿಂದ ಹೈಡ್ರಾಮಾ

    • By admin
    • September 15, 2024
    • 52 views
    CM ಕಾರ್ಯಕ್ರಮದಲ್ಲಿ ಭದ್ರತಾ ವೈಫಲ್ಯ ವೇದಿಕೆ ಮೇಲೇರಿ ಯುವಕನಿಂದ ಹೈಡ್ರಾಮಾ

    2024ರಲ್ಲಿ ಪೂಜಿಸಲ್ಪಟ್ಟ ಗಣಪ

    • By admin
    • September 10, 2024
    • 44 views
    2024ರಲ್ಲಿ  ಪೂಜಿಸಲ್ಪಟ್ಟ ಗಣಪ

    ಗಣಪನಿಗೆ 20 ಕೆಜಿ ಚಿನ್ನದ ಕಿರೀಟ ಕಾಣಿಕೆಯಾಗಿ ನೀಡಿದ ಅನಂತ್ ಅಂಬಾನಿ

    • By admin
    • September 7, 2024
    • 99 views
    ಗಣಪನಿಗೆ 20 ಕೆಜಿ ಚಿನ್ನದ ಕಿರೀಟ ಕಾಣಿಕೆಯಾಗಿ ನೀಡಿದ ಅನಂತ್ ಅಂಬಾನಿ

    ಬೆನಕ ಹೆಲ್ತ್ ಸೆಂಟರ್ ನಲ್ಲಿ ಉಚಿತ ನರ್ಸಿಂಗ್ ತರಬೇತಿಗೆ ಅರ್ಜಿ ಆಹ್ವಾನ

    • By admin
    • September 4, 2024
    • 230 views
    ಬೆನಕ ಹೆಲ್ತ್ ಸೆಂಟರ್ ನಲ್ಲಿ ಉಚಿತ ನರ್ಸಿಂಗ್ ತರಬೇತಿಗೆ ಅರ್ಜಿ ಆಹ್ವಾನ