ಶ್ರೀ ಧರ್ಮಸ್ಥಳ ಸಿರಿ ಗ್ರಾಮೋದ್ಯೋಗ ಸಂಸ್ಥೆಯ ನೂತನ 11 ಉತ್ಪನ್ನಗಳು ಲೋಕಾರ್ಪಣೆ

ಬೆಂಗಳೂರು:‌ ಧರ್ಮಸ್ಥಳ ಸಿರಿ ಗ್ರಾಮೋದ್ಯೋಗ ಸಂಸ್ಥೆಯ ನೂತನ 11 ಉತ್ಪನ್ನಗಳ ಲೋಕಾರ್ಪಣೆ ಕಾರ್ಯಕ್ರಮವು ಬೆಂಗಳೂರಿನ ಭಾರತೀಯ ವಿದ್ಯಾ ಭವನದಲ್ಲಿ ನಡೆಯಿತು.

ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ.ವೀರೇಂದ್ರ ಹೆಗ್ಗಡೆ, ನಟ ರಮೇಶ್ ಅರವಿಂದ್, ನಟಿ ತಾರಾ ಅನುರಾಧ, ಶಾಸಕ ಹರೀಶ್ ಪೂಂಜಾ ಶ್ರೀಧರ್ಮಸ್ಥಳ ಸಿರಿ ಗ್ರಾಮೋದ್ಯೋಗ ಸಂಸ್ಥೆಯು ಹೊರ ತಂದಿರುವ 11 ಬಗೆಯ ಸಿರಿ ಉತ್ಪನ್ನಗಳನ್ನು ಬಿಡುಗಡೆ ಮಾಡಿದರು.

ಸಿರಿ ಸಂಸ್ಥೆ 13 ಸ್ವಂತ ಮಳಿಗೆ ಹಾಗೂ 300 ಕ್ಕೂ ಹೆಚ್ಚು ಮಾರಾಟ ಮಳಿಗೆಗಳನ್ನು ಹೊಂದಿದೆ. 2 ಸಾವಿರ ಹಳ್ಳಿಯ ಮಹಿಳೆಯರು ತಯಾರಿಸಿದ ಉತ್ಪನ್ನಗಳನ್ನು ಧರ್ಮಸ್ಥಳದ ಸಿರಿ ಸಂಸ್ಥೆ ಪ್ಯಾಕೇಟ್ ಮಾಡಿ, ಮಾರುಕಟ್ಟೆಗೆ ಒದಗಿಸುತ್ತಿದೆ. ರಾಜ್ಯದ ಯಾವುದೇ ಹಳ್ಳಿಯ ಮಹಿಳೆಯರು ಉತ್ಪನ್ನಗಳನ್ನು ತಯಾರಿಸಿ ನೀಡಿದರೆ ಸಿರಿ ಸಂಸ್ಥೆ ಮಾರುಕಟ್ಟೆ ಒದಗಿಸಲಿದೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ ವೀರೇಂದ್ರ ಹೆಗ್ಗಡೆ ತಿಳಿಸಿದರು.

ನಟ ರಮೇಶ್ ಅರವಿಂದ್ ಮಾತನಾಡಿ, ಬ್ರಾಂಡ್, ಬ್ರಾಂಡ್ ವಾಲ್ಯೂ ಹಾಗೂ ಅದರ ಉದ್ದೇಶ, ತಿಳಿದು ಸಿರಿಯ ಉತ್ಪನ್ನವನ್ನು ಕೊಳ್ಳಬೇಕು. ಇದರಿಂದ ಹಳ್ಳಿಯ ಕುಟುಂಬ ಅಭಿವೃದ್ಧಿಯಾಗುತ್ತದೆ ಎಂದು ತಿಳಿಸಿದರು.

ವಿಧಾನ ಪರಿಷತ್ ಸದಸ್ಯೆ ಹಾಗೂ ಹಿರಿಯ ‌ನಟಿ ತಾರಾ ಅನುರಾಧ ಮಾತನಾಡಿ, ಸಿರಿ ಸಂಸ್ಥೆ ಸ್ತ್ರೀ ಕಲ್ಯಾಣಕ್ಕಾಗಿ ಇದೆ. ಮಹಿಳೆಯರಿಗೆ ಆರ್ಥಿಕವಾಗಿ, ಸ್ವಾಭಿಮಾನಕ್ಕಾಗಿ ಇರುವ ಸಂಸ್ಥೆ. ಗ್ರಾಮೋದ್ಯೋಗ, ಕರಕುಶಲ ಗಾಂಧೀಜಿಯವರ ಕನಸು, ಪ್ರಧಾನಿಯವರ ಆತ್ಮ ನಿರ್ಭರ ಭಾರತ ಇವೆಲ್ಲವನ್ನು ರಾಜ್ಯದಲ್ಲಿ ಜಾರಿಗೆ ತಂದವರು ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಎಂದರು.

ಸಿರಿ‌ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ಜನಾರ್ಧನ್ ಪ್ರಾಸ್ತಾವಿಕವಾಗಿ ಮಾತನಾಡಿ, ಸಿರಿ ಉತ್ಪನ್ನಗಳು ಉತ್ಕೃಷ್ಟ ಗುಣಮಟ್ಟ, ಕಡಿಮೆ ಬೆಲೆಯಲ್ಲಿ ರಾಜ್ಯಾದ್ಯಂತ ಲಭ್ಯವಿದೆ‌. ಗ್ರಾಮೀಣ ಮಹಿಳೆಯರ ಸಬಲೀಕರಣಕ್ಕಾಗಿ 2004 ರಲ್ಲಿ 20 ಲಕ್ಷ ರೂ. ಬಂಡವಾಳದೊಂದಿಗೆ, ಎರಡು ಸಾವಿರ ಮಹಿಳೆಯರು ಆರಂಭಿಸಿದ ಈ ಸಂಸ್ಥೆ ಈಗ ಕೋಟ್ಯಂತರ ರೂಪಾಯಿ ವ್ಯವಹಾರ ನಡೆಸುತ್ತಿದೆ. ಸಿರಿ ಸಂಸ್ಥೆ 295 ಹಳ್ಳಿ ಕೇಂದ್ರಗಳಲ್ಲಿ ಉತ್ಪಾದನಾ ಕೇಂದ್ರ ಆರಂಭಿಸಿದೆ ಎಂದರು.

ಲೋಕಾರ್ಪಣೆಯಾದ ಸಿರಿ‌ ಉತ್ಪನ್ನಗಳು:
ಸಿರಿಯ ನೂತನ ಉತ್ಪನ್ನಗಳಾದ ಮೆಣಸಿನ ಪುಡಿ, ಗರಂ ಮಸಾಲ, ರಸಂ ಪುಡಿ, ಸಾಂಬಾರು ಪುಡಿ, ಪುಳಿಯೋಗರೆ, ಬಿಸಿಬೆಳೆಬಾತ್ ಪುಡಿ, ಉಪ್ಮಾ ರೆಡಿ ಮಿಕ್ಸ್, ರವಾ ಇಡ್ಲಿ ಮಿಕ್ಸ್, ಬಾದಾಮ್ ಮಿಕ್ಸ್, ಪುಲಾವ್ ಮಸಾಲ ಬಿಡುಗಡೆ ಮಾಡಲಾಯಿತು.

ಬೆಳ್ತಂಗಡಿ ಶಾಸಕ ಹರೀಶ್ ಪೂಂಜ, ಧರ್ಮಸ್ಥಳದ ಡಿ. ಸುರೇಂದ್ರ ಕುಮಾರ್, ಸಿರಿ ಗ್ರಾಮೋದ್ಯೋಗ ಸಂಸ್ಥೆ ಟ್ರಸ್ಟಿಗಳಾದ ಶ್ರದ್ಧಾ ಅಮಿತ್, ರಾಮಸ್ವಾಮಿ, ಅರೇಕಾ ಟೀ ಸಂಸ್ಥೆಯ ಸ್ಥಾಪಕ ನಿವೇದನ್ ನೆಂಪೆ, ಕುಸುಮ ದೇವಾಡಿಗ ಸೇರಿದಂತೆ ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಸಿರಿ ಯೋಜನಾಧಿಕಾರಿಗಳಾದ ತಿಮ್ಮಯ್ಯ ನಾಯ್ಕ್, ವಿನ್ಸೆಂಟ್ ಲೋಬೋ ಹಾಗೂ ಸುಧಾಕರ್ ಸಹಕರಿಸಿದರು.

Spread the love
  • Related Posts

    ಕಟ್ಟಡ ಟೆಂಡರ್ ನಲ್ಲಿ ಆಗುತ್ತಿರುವ ಭ್ರಷ್ಟಾಚಾರ ಹಾಗೂ ಕಟ್ಟಡ ನಿರ್ಮಾಣ ಕಾರ್ಮಿಕರಿಗೆ ಮರಳು, ಕೆಂಪುಕಲ್ಲು ಪೂರೈಕೆಯಲ್ಲಿ ಉಂಟಾದ ತೊಡಕುಗಳ ಕುರಿತು ಭಾರತೀಯ ಮಜ್ದೂರ್ ಸಂಘದ ವತಿಯಿಂದ ಸಮಾಲೋಚನಾ ಸಭೆ ಹಾಗೂ ಮನವಿ ಸಲ್ಲಿಕೆ

    ಬೆಳ್ತಂಗಡಿ: ಭಾರತೀಯ ಮಜ್ದೂರ್ ಸಂಘ ತಾಲೂಕು ಸಮಿತಿ ಬೆಳ್ತಂಗಡಿ ವತಿಯಿಂದ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರಿಗೆ ಮರಳು ಹಾಗೂ ಕೆಂಪು ಕಲ್ಲು ಪೂರೈಕೆಯಲ್ಲಿ ಆಗಿರುವ ತೊಂದರೆಯ ಕುರಿತು ಹಾಗೂ ಕಾರ್ಮಿಕ ಇಲಾಖೆಯ ಕಟ್ಟಡ ಮಂಡಳಿಯ ಟೆಂಡರ್ ಕೂಪದ ಭ್ರಷ್ಟಾಚಾರವನ್ನು ಖಂಡಿಸಲು…

    Spread the love

    ಚಿರಂಜೀವಿ ಯುವಕ ಮಂಡಲ ಕಾನರ್ಪ ಇದರ 34ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣಾ ಸಮಿತಿಗೆ ಪದಾಧಿಕಾರಿಗಳ ಆಯ್ಕೆ

    ಬೆಳ್ತಂಗಡಿ: ಚಿರಂಜೀವಿ ಯುವಕ ಮಂಡಲ ಕಾನರ್ಪ ಕಡಿರುದ್ಯಾವರ ಇದರ 34ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮದ ನಿಮಿತ್ತ ಪೂರ್ವಭಾವಿ ಸಭೆಯನ್ನು ಯುವಕ ಮಂಡಲದ ವಠಾರದಲ್ಲಿ ನಡೆಸಲಾಯಿತು. ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆ ಸಮಿತಿಯ ಅಧ್ಯಕ್ಷರಾಗಿ ರಾಘವೇಂದ್ರ ಭಟ್ ಪಣಿಕಲ್ ಹಾಗೂ…

    Spread the love

    You Missed

    ಕಟ್ಟಡ ಟೆಂಡರ್ ನಲ್ಲಿ ಆಗುತ್ತಿರುವ ಭ್ರಷ್ಟಾಚಾರ ಹಾಗೂ ಕಟ್ಟಡ ನಿರ್ಮಾಣ ಕಾರ್ಮಿಕರಿಗೆ ಮರಳು, ಕೆಂಪುಕಲ್ಲು ಪೂರೈಕೆಯಲ್ಲಿ ಉಂಟಾದ ತೊಡಕುಗಳ ಕುರಿತು ಭಾರತೀಯ ಮಜ್ದೂರ್ ಸಂಘದ ವತಿಯಿಂದ ಸಮಾಲೋಚನಾ ಸಭೆ ಹಾಗೂ ಮನವಿ ಸಲ್ಲಿಕೆ

    • By admin
    • June 30, 2025
    • 344 views
    ಕಟ್ಟಡ  ಟೆಂಡರ್ ನಲ್ಲಿ ಆಗುತ್ತಿರುವ ಭ್ರಷ್ಟಾಚಾರ ಹಾಗೂ ಕಟ್ಟಡ ನಿರ್ಮಾಣ ಕಾರ್ಮಿಕರಿಗೆ ಮರಳು, ಕೆಂಪುಕಲ್ಲು ಪೂರೈಕೆಯಲ್ಲಿ ಉಂಟಾದ ತೊಡಕುಗಳ ಕುರಿತು ಭಾರತೀಯ ಮಜ್ದೂರ್ ಸಂಘದ ವತಿಯಿಂದ ಸಮಾಲೋಚನಾ ಸಭೆ ಹಾಗೂ ಮನವಿ ಸಲ್ಲಿಕೆ

    ಚಿರಂಜೀವಿ ಯುವಕ ಮಂಡಲ ಕಾನರ್ಪ ಇದರ 34ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣಾ ಸಮಿತಿಗೆ ಪದಾಧಿಕಾರಿಗಳ ಆಯ್ಕೆ

    • By admin
    • June 28, 2025
    • 303 views
    ಚಿರಂಜೀವಿ ಯುವಕ ಮಂಡಲ ಕಾನರ್ಪ ಇದರ 34ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣಾ ಸಮಿತಿಗೆ ಪದಾಧಿಕಾರಿಗಳ ಆಯ್ಕೆ

    ವಕೀಲರ ಸಂಘ (ರಿ ) ಬಂಟ್ವಾಳ ಇದರ ನೂತನ ಪದಾಧಿಕಾರಿಗಳ ಪದಗ್ರಹಣ

    • By admin
    • June 26, 2025
    • 202 views
    ವಕೀಲರ ಸಂಘ (ರಿ ) ಬಂಟ್ವಾಳ ಇದರ ನೂತನ ಪದಾಧಿಕಾರಿಗಳ ಪದಗ್ರಹಣ

    ಭಾರಿಮಳೆಗೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಗುಡ್ಡ ಕುಸಿತ, ಶಿರಾಡಿ ಘಾಟ್ ನಲ್ಲಿ ವಾಹನ ಸಂಚಾರ ಬಂದ್

    • By admin
    • June 26, 2025
    • 302 views
    ಭಾರಿಮಳೆಗೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಗುಡ್ಡ  ಕುಸಿತ, ಶಿರಾಡಿ ಘಾಟ್ ನಲ್ಲಿ ವಾಹನ ಸಂಚಾರ ಬಂದ್

    ಮುಂದುವರಿದ ವರುಣಾರ್ಭಟ ಬೆಳ್ತಂಗಡಿ ತಾಲೂಕಿನ ಶಾಲೆಗಳಿಗೆ ಜೂನ್ 26 ಗುರುವಾರ ರಜೆ: ತಹಶಿಲ್ದಾರ್ ಫೋಷಣೆ

    • By admin
    • June 25, 2025
    • 160 views
    ಮುಂದುವರಿದ ವರುಣಾರ್ಭಟ ಬೆಳ್ತಂಗಡಿ ತಾಲೂಕಿನ  ಶಾಲೆಗಳಿಗೆ ಜೂನ್ 26 ಗುರುವಾರ ರಜೆ: ತಹಶಿಲ್ದಾರ್ ಫೋಷಣೆ

    ಹಾಸನದ ಸಕಲೇಶಪುರ ಎಡಕುಮೇರಿ ಎಂಬಲ್ಲಿ ರೈಲು ಹಳಿಗಳ ಮೇಲೆ ಬಿದ್ದ ಬಂಡೆ ಕಲ್ಲುಗಳು ರೈಲು ಸಂಚಾರದಲ್ಲಿ ವ್ಯತ್ಯಯ

    • By admin
    • June 21, 2025
    • 90 views
    ಹಾಸನದ ಸಕಲೇಶಪುರ ಎಡಕುಮೇರಿ ಎಂಬಲ್ಲಿ ರೈಲು ಹಳಿಗಳ ಮೇಲೆ ಬಿದ್ದ ಬಂಡೆ ಕಲ್ಲುಗಳು ರೈಲು ಸಂಚಾರದಲ್ಲಿ ವ್ಯತ್ಯಯ