ಮಂಗಳೂರು: ಕೊರೋನಾ ಮಹಾಮಾರಿಯ ಸಮಸ್ಯೆಯ ನಡುವೆಯೇ ಮಂಗಳೂರಿನಿಂದ ಕೇರಳದ ಕಾಸರಗೋಡಿನತ್ತ ತೆರಳುತ್ತಿದ್ದ ಪಿಕಪ್ ವಾಹನದಲ್ಲಿ ಭಾರೀ ಪ್ರಮಾಣದ ಗಾಂಜಾ ಸಾಗಾಟ ಪತ್ತೆಯಾಗಿದ್ದು ಮಂಜೇಶ್ವರ ಪೊಲೀಸರು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ತಲಪಾಡಿ ಗಡಿಭಾಗದ ಮುಖ್ಯ ರಸ್ತೆಯನ್ನು ತಪ್ಪಿಸಿಕೊಂಡು ರಹದಾರಿಯಿಂದ ಸಾಗಿದ್ದ ಪಿಕಪ್ ವಾಹನ ಕೇರಳದತ್ತ ಸಾಗುತ್ತಿದ್ದಾಗ ಪೊಲೀಸರ ಬಲೆಗೆ ಬಿದ್ದಿದೆ.
ಒಳದಾರಿಯಿಂದ ಪೊಲೀಸರ ಕಣ್ತಪ್ಪಿಸಿಕೊಂಡು ಸಾಗುತ್ತಿದ್ದ ವಾಹನವನ್ನು ಕುಂಜತ್ತೂರು ಬಳಿ ಸಾರ್ವಜನಿಕರು ಸೇರಿ ಅಡ್ಡ ಹಾಕಿದ್ದಾರೆ.
ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ತಪಾಸಣೆ ನಡೆಸಿದಾಗ, ವಾಹನದಲ್ಲಿ 50ಕ್ಕೂ ಹೆಚ್ಚು ಚೀಲಗಳಲ್ಲಿ ಗಾಂಜಾ ಪತ್ತೆಯಾಗಿದೆ. ಸುಮಾರು 15ಲಕ್ಷ ಮೌಲ್ಯದ 108 ಕೇಜಿ ಗಾಂಜಾಪತ್ತೆಯಾಗಿದ್ದು ಪಿಕಪ್ ಚಾಲಕನನ್ನು ಬಂಧಿಸಲಾಗಿದೆ.
ಇಷ್ಟೋಂದು ದೊಡ್ಡ ಪ್ರಮಾಣದಲ್ಲಿ ಗಾಂಜಾವನ್ನು ಎಲ್ಲಿಂದ ಮತ್ತು ಎಲ್ಲಿಗೆ ಸಾಗಾಟ ಮಾಡಲಾಗುತ್ತಿತ್ತು ಎನ್ನುವ ಬಗ್ಗೆ ಪೊಲೀಸರು ಮಾಹಿತಿ ಕಲೆಹಾಕುತಿದ್ದಾರೆ.