ತಾಲೂಕು ಪತ್ರಕರ್ತರ ಸಂಘದಿಂದ ಉಜಿರೆ ಸ.ಹಿ.ಪ್ರಾ ಶಾಲೆ ಹಳೇಪೇಟೆಗೆ ಗ್ರೀನ್ ಬೋರ್ಡ್ ಹಸ್ತಾಂತರ

ಬೆಳ್ತಂಗಡಿ: ತಾಲೂಕು ಪತ್ರಕರ್ತರ ಸಂಘದ ವತಿಯಿಂದ ಉಜಿರೆ ಹಳೆಪೇಟೆ ಸಹಿಪ್ರಾ ಶಾಲೆಗೆ ಗ್ರೀನ್ ಬೋರ್ಡ್ ಗಳನ್ನು ಸೋಮವಾರ ಹಸ್ತಾಂತರಿಸಲಾಯಿತು.
ಗ್ರೀನ್ ಬೋರ್ಡ್ ಹಸ್ತಾಂತರಿಸಿ ಮಾತನಾಡಿದ ಬೆಳ್ತಂಗಡಿ ರೋಟರಿ ಕ್ಲಬ್ ಅಧ್ಯಕ್ಷ ಪೂರನ್ ವರ್ಮ “ಉತ್ತಮ ವಾತಾವರಣ ಇರುವ ಶಾಲೆಗಳಲ್ಲಿ ಮಕ್ಕಳ ಕಲಿಕೆಯ ಉತ್ಸಾಹ ಹೆಚ್ಚಿರುತ್ತದೆ. ಇಂದಿನ ದಿನಗಳಲ್ಲಿ ಅಂಕಗಳೇ ಮಾನದಂಡವಲ್ಲ. ಮಕ್ಕಳಲ್ಲಿರುವ ಪ್ರತಿಭೆಯನ್ನು ಗುರುತಿಸಿ ತಕ್ಕ ಶಿಕ್ಷಣ ನೀಡಿ ಅವರ ಭವಿಷ್ಯವನ್ನು ನಿರ್ಮಿಸಲು ಸಾಧ್ಯವಿದೆ” ಎಂದರು.
ಶಾಲೆಯ ಅಭಿವೃದ್ಧಿಗೆ ಮುತುವರ್ಜಿ ವಹಿಸಿದ ಬದುಕು ಕಟ್ಟೋಣ ಬನ್ನಿ ತಂಡದ ಸಂಚಾಲಕ ಮೋಹನ ಕುಮಾರ್ ಮಾತನಾಡಿ “ಸರಕಾರಿ ಶಾಲೆಗಳನ್ನು ಉಳಿಸಿ ಬೆಳೆಸುವಲ್ಲಿ ಪೋಷಕರ ಪಾತ್ರವು ಮಹತ್ವದ್ದು. ಪೋಷಕರು ಶಾಲೆಗಳಿಗೆ ಆಗಾಗ ಭೇಟಿ ನೀಡಿ ಅಲ್ಲಿನ ಕುಂದು ಕೊರತೆಗಳಿಗೆ ಸ್ಪಂದಿಸಬೇಕು. ಅಭಿವೃದ್ಧಿ ಕೆಲಸಗಳಿಗೆ ಹೆಚ್ಚಿನ ಕೈಗಳು ಒಟ್ಟಾದರೆ ತ್ವರಿತ ಪ್ರಗತಿ ಸಾಧ್ಯ.ಮುಂದಿನ ದಿನಗಳಲ್ಲಿ ಇನ್ನಷ್ಟು ಶಾಲೆಗಳನ್ನು ಅಭಿವೃದ್ಧಿಪಡಿಸುವ ಕುರಿತು ಯೋಜನೆ ರೂಪಿಸಲಾಗಿದೆ” ಎಂದರು.
ಇಲಾಖೆಯ ವತಿಯಿಂದ ಮಕ್ಕಳಿಗೆ ಶೂ-ಸಾಕ್ಸ್ ವಿತರಿಸಿ ಮಾತನಾಡಿದ ಬೆಳ್ತಂಗಡಿ ಬಿಇಒ ತಾರಕೇಸರಿ “ಶಾಲಾ ಚಟುವಟಿಕೆಗಳಿಗೆ ಗ್ರೀನ್ ಬೋರ್ಡ್ ಗಳು ಅತ್ಯಗತ್ಯವಾಗಿದ್ದು ತಾಲೂಕಿನ 179 ಸರಕಾರಿ ಶಾಲೆಗಳ ಪೈಕಿ ಬೆರಳೆಣಿಕೆಯ ಶಾಲೆಗಳಲ್ಲಿ ಮಾತ್ರ ಈ ಸೌಲಭ್ಯವಿದೆ. ಮಕ್ಕಳಿಗೆ ಸಂಸ್ಕೃತಿಯೊಂದಿಗೆ ವಿದ್ಯೆ ನೀಡಬೇಕು. ಉತ್ತಮ ಮಟ್ಟದ ಪ್ರಾಥಮಿಕ ಶಾಲಾ ಶಿಕ್ಷಣ ಮಕ್ಕಳ ಶಿಕ್ಷಣಕ್ಕೆ ಅಡಿಪಾಯ ಹಾಕುವುದರ ಜತೆ ಪ್ರೌಢಶಾಲೆಗಳಲ್ಲಿ ಹೆಚ್ಚಿನ ಫಲಿತಾಂಶಕ್ಕೆ ಕಾರಣವಾಗುತ್ತದೆ” ಎಂದರು.
ಪತ್ರಕರ್ತರ ಸಂಘದ ಅಧ್ಯಕ್ಷ ಚೈತ್ರೇಶ್ ಇಳಂತಿಲ ಅಧ್ಯಕ್ಷತೆ ವಹಿಸಿದರು.
ಉಜಿರೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಉಷಾಕಿರಣ ಕಾರಂತ ಶುಭ ಹಾರೈಸಿದರು.
ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ಆರತಿ, ಮುಖ್ಯ ಶಿಕ್ಷಕಿ ಸಾವಿತ್ರಿ ರೋಟರಿ ಕ್ಲಬ್ ಕಾರ್ಯದರ್ಶಿ ಸಂದೇಶ ರಾವ್, ಮಾಜಿ ಕಾರ್ಯದರ್ಶಿ ವಿದ್ಯಾ ಕುಮಾರ್ ಕಾಂಚೋಡು ಉಪಸ್ಥಿತರಿದ್ದರು.
ಪತ್ರಕರ್ತರ ಸಂಘದ ಜತೆ ಕಾರ್ಯದರ್ಶಿ ಮನೋಹರ ಬಳಂಜ ಕಾರ್ಯಕ್ರಮ ನಿರೂಪಿಸಿದರು.
ಪತ್ರಕರ್ತರ ಸಂಘದ ಉಪಾಧ್ಯಕ್ಷ ಶಿಬಿ ಧರ್ಮಸ್ಥಳ, ಖಜಾಂಚಿ ಪುಷ್ಪರಾಜ ಶೆಟ್ಟಿ, ಸದಸ್ಯರಾದ ಬಿ.ಎಸ್. ಕುಲಾಲ್, ಅರವಿಂದ ಹೆಬ್ಬಾರ್, ಸಂತೋಷ್ ಕೋಟ್ಯಾನ್,ಅಚುಶ್ರೀ ಬಾಂಗೇರು,ತುಕಾರಾಂ ಬಿ. ಭಾಗವಹಿಸಿದ್ದರು.

Spread the love
  • Related Posts

    ಬಿಎಂಎಸ್ ರಿಕ್ಷಾ ಚಾಲಕರ ಸಂಘ ಬೆಳ್ತಂಗಡಿ ಇದರ ವಾರ್ಷಿಕ ಸಭೆ ಹಾಗೂ ರಾಷ್ಟ್ರೀಯ ಕಾರ್ಮಿಕರ ದಿನಾಚರಣೆ

    ಬೆಳ್ತಂಗಡಿ: ಬಿಎಂಎಸ್ ರಿಕ್ಷಾ ಚಾಲಕರ ಸಂಘ ಬೆಳ್ತಂಗಡಿ ತಾಲೂಕು ಇದರ ವಾರ್ಷಿಕ ಸಭೆ ಹಾಗೂ ರಾಷ್ಟ್ರೀಯ ಕಾರ್ಮಿಕ ದಿನಾಚರಣೆಯನ್ನು ಬೆಳ್ತಂಗಡಿಯ ಅಂಬೇಡ್ಕರ್ ಭವನದಲ್ಲಿ ನಡೆಸಲಾಯಿತು ಈ ಕಾರ್ಯಕ್ರಮದ ಉದ್ಘಾಟನೆಯನ್ನು ಬೆಳ್ತಂಗಡಿ ಸಂಚಾರಿ ಆರಕ್ಷಕ ಸಹಾಯಕ ಉಪನೀರಿಕ್ಷಕರಾದ ಹರಿಪ್ರಸಾದ್ ಅವರು ಉದ್ಘಾಟಿಸಿದರು. ಈ…

    Spread the love

    ನಿಫಾ ವೈರಸ್ ಸೋಂಕಿಗೆ ಕೇರಳ ಮೂಲದ ವಿದ್ಯಾರ್ಥಿ ಬಲಿ, ಮೃತನ ಸಂಪರ್ಕದಲ್ಲಿದ್ದ ಬೆಂಗಳೂರಿನ 15ವಿದ್ಯಾರ್ಥಿಗಳಿಗೆ ಐಸೋಲೇಷನ್

    ಬೆಂಗಳೂರು: ಮಾರಣಾಂತಿಕ ನಿಫಾ ವೈರಸ್ ಸೋಂಕಿಗೆ ಕೇರಳ ಮೂಲದ ವಿದ್ಯಾರ್ಥಿಯೊಬ್ಬ ಬಲಿಯಾಗಿರುವ ಘಟನೆ ನಡೆದಿದೆ. ಮೃತ ಯುವಕನ ಟ್ರಾವೆಲ್ ಹಿಸ್ಟ್ರಿ ಬೆಚ್ಚಿ ಬೀಳಿಸುವಂತಿದ್ದು, ಸಿಲಿಕಾನ್ ಸಿಟಿ ಬೆಂಗಳೂರಿಗೂ ಆತಂಕ ಎದುರಾಗಿದೆ.ಕೇರಳದ ಮಲಪ್ಪುರಂ ಮೂಲದ 23 ವರ್ಷದ ವಿದ್ಯಾರ್ಥಿ ನಿಫಾ ಸೋಂಕಿನಿಂದ ಮೃತಪಟ್ಟಿರುವುದು…

    Spread the love

    You Missed

    ಬೆಳ್ತಂಗಡಿ ತಾಲೂಕು ಒಕ್ಕಲಿಗ ಗೌಡರ ಸೇವಾ ಟ್ರಸ್ಟ್ (ರಿ) ಇದರ ಲೋಗೋ ಅನಾವರಣ

    • By admin
    • September 18, 2024
    • 33 views
    ಬೆಳ್ತಂಗಡಿ ತಾಲೂಕು ಒಕ್ಕಲಿಗ ಗೌಡರ ಸೇವಾ ಟ್ರಸ್ಟ್ (ರಿ) ಇದರ ಲೋಗೋ ಅನಾವರಣ

    ಬಿಎಂಎಸ್ ರಿಕ್ಷಾ ಚಾಲಕರ ಸಂಘ ಬೆಳ್ತಂಗಡಿ ಇದರ ವಾರ್ಷಿಕ ಸಭೆ ಹಾಗೂ ರಾಷ್ಟ್ರೀಯ ಕಾರ್ಮಿಕರ ದಿನಾಚರಣೆ

    • By admin
    • September 18, 2024
    • 18 views
    ಬಿಎಂಎಸ್  ರಿಕ್ಷಾ  ಚಾಲಕರ ಸಂಘ ಬೆಳ್ತಂಗಡಿ ಇದರ ವಾರ್ಷಿಕ ಸಭೆ ಹಾಗೂ ರಾಷ್ಟ್ರೀಯ ಕಾರ್ಮಿಕರ ದಿನಾಚರಣೆ

    ನಿಫಾ ವೈರಸ್ ಸೋಂಕಿಗೆ ಕೇರಳ ಮೂಲದ ವಿದ್ಯಾರ್ಥಿ ಬಲಿ, ಮೃತನ ಸಂಪರ್ಕದಲ್ಲಿದ್ದ ಬೆಂಗಳೂರಿನ 15ವಿದ್ಯಾರ್ಥಿಗಳಿಗೆ ಐಸೋಲೇಷನ್

    • By admin
    • September 16, 2024
    • 24 views
    ನಿಫಾ ವೈರಸ್ ಸೋಂಕಿಗೆ ಕೇರಳ ಮೂಲದ ವಿದ್ಯಾರ್ಥಿ ಬಲಿ, ಮೃತನ ಸಂಪರ್ಕದಲ್ಲಿದ್ದ ಬೆಂಗಳೂರಿನ 15ವಿದ್ಯಾರ್ಥಿಗಳಿಗೆ ಐಸೋಲೇಷನ್

    ಡೊನಾಲ್ಡ್ ಟ್ರಂಪ್ ಮೇಲೆ ಗುಂಡಿನ ದಾಳಿಗೆ ಯತ್ನ

    • By admin
    • September 16, 2024
    • 36 views
    ಡೊನಾಲ್ಡ್ ಟ್ರಂಪ್ ಮೇಲೆ ಗುಂಡಿನ ದಾಳಿಗೆ ಯತ್ನ

    CM ಕಾರ್ಯಕ್ರಮದಲ್ಲಿ ಭದ್ರತಾ ವೈಫಲ್ಯ ವೇದಿಕೆ ಮೇಲೇರಿ ಯುವಕನಿಂದ ಹೈಡ್ರಾಮಾ

    • By admin
    • September 15, 2024
    • 57 views
    CM ಕಾರ್ಯಕ್ರಮದಲ್ಲಿ ಭದ್ರತಾ ವೈಫಲ್ಯ ವೇದಿಕೆ ಮೇಲೇರಿ ಯುವಕನಿಂದ ಹೈಡ್ರಾಮಾ

    2024ರಲ್ಲಿ ಪೂಜಿಸಲ್ಪಟ್ಟ ಗಣಪ

    • By admin
    • September 10, 2024
    • 48 views
    2024ರಲ್ಲಿ  ಪೂಜಿಸಲ್ಪಟ್ಟ ಗಣಪ