ಮತ್ತೆ ಸುದ್ಧಿಯಲ್ಲಿ ತಿಪಟೂರು ಜಿಲ್ಲಾ ಕೇಂದ್ರವಾಗಿ ಹೊರಹೊಮ್ಮುತ್ತಾ ಕಲ್ಪತರು ನಾಡು

ತಿಪಟೂರು: ಕಲ್ಟತರು ನಾಡು ಜಿಲ್ಲಾ ಕೇಂದ್ರವಾಗಿ ಹೊರಹೊಮ್ಮುತ್ತಾ ಎಂಬ ಪ್ರಶ್ನೆ ಮತ್ತೆ ಮತ್ತೆ ಜನಸಾಮಾನ್ಯರಲ್ಲಿ ಕಾಡುತ್ತಿದೆ. ತುಮಕೂರು ಜಿಲ್ಲೆಯ ದೊಡ್ಡ ತಾಲ್ಲೂಕು ಕೇಂದ್ರವಾದ ತಿಪಟೂರನ್ನು ಜಿಲ್ಲಾ ಕೇಂದ್ರವಾಗಿಸಬೇಕು ಎಂಬ ಕೂಗಿನ ನಡುವೆ ಹುಳಿಯಾರು ತಾಲ್ಲೂಕು ಕೇಂದ್ರದ ಬಹು ವರ್ಷಗಳ ಒತ್ತಾಯಕ್ಕೆ ಮತ್ತೆ ಮರುಜೀವ ಬಂದಿದೆ.

ಜಿಲ್ಲಾ ಕೇಂದ್ರವನ್ನಾಗಿ ಮೇಲ್ದರ್ಜೆಗೇರಿಸಲು 5 ತಾಲ್ಲೂಕು ಕೇಂದ್ರಗಳ ಅವಶ್ಯಕವಾಗಿದೆ. ತಿಪಟೂರು ಜಿಲ್ಲಾ ಕೇಂದ್ರಕ್ಕೆ ತಿಪಟೂರು, ಚಿಕ್ಕನಾಯಕನಹಳ್ಳಿ, ತುರುವೇಕೆರೆ ಹಾಗೂ ಹಾಸನ ಜಿಲ್ಲೆಯ ಅರಸೀಕೆರೆ ಮತ್ತು ಸಂಭಾವ್ಯ ತಾಲ್ಲೂಕಾಗಿ ಹುಳಿಯಾರನ್ನು ಮಾರ್ಪಡಿಸಿ ಸೇರಿಸಬಹುದು ಎಂಬ ಚರ್ಚೆ ಬಿರುಸಾಗಿ ನಡೆಯುತ್ತಿದೆ.

ತಿಪಟೂರು ನಗರ ಚಿಕ್ಕನಾಯಕನಹಳ್ಳಿ, ತುರುವೇಕೆರೆ, ಅರಸೀಕೆರೆ ಮತ್ತು ಹುಳಿಯಾರು ಪಟ್ಟಣಗಳಿಗೆ ಕೇವಲ 40 ಕಿ.ಮೀ ಮಾತ್ರವೇ ದೂರವಿದೆ. ತುಮಕೂರು ಜಿಲ್ಲಾ ಕೇಂದ್ರ ಹುಳಿಯಾರು ಸೇರಿದಂತೆ ತಿಪಟೂರು ತಾಲ್ಲೂಕಿನ ಗಡಿಭಾಗಗಳಿಗೆ ಸುಮಾರು 100 ಕಿ.ಮೀ ಅಂತರವಿದೆ.

ತಿಪಟೂರು ಜಿಲ್ಲಾ ಕೇಂದ್ರವಾಗಿ ಹುಳಿಯಾರನ್ನು ತಾಲ್ಲೂಕು ಕೇಂದ್ರವಾಗಿ ಮೇಲ್ದರ್ಜೆಗೇರಿಸಿದರೆ ಅನುಕೂಲವಾಗುತ್ತದೆ ಎನ್ನುವುದು ಸಾರ್ವಜನಿಕರ ಅಭಿಪ್ರಾಯ.

ತಿಪಟೂರು, ಅರಸೀಕೆರೆ ಹಾಗೂ ಹುಳಿಯಾರು ರಾಜ್ಯದಲ್ಲಿಯೇ ಕೊಬ್ಬರಿ ಮಾರಾಟಕ್ಕೆ ಹೆಸರಾಗಿವೆ. ಮೂರು ಎಪಿಎಂಸಿಗಳಿಗೆ ನಿತ್ಯ ಕೊಬ್ಬರಿ ಬರುತ್ತದೆ. ತಿಪಟೂರಿನಲ್ಲಿ 2 ದಿನ, ಅರಸೀಕೆರೆ ಮತ್ತು ಹುಳಿಯಾರು ಎಪಿಎಂಸಿಗಳಲ್ಲಿ ಟೆಂಡರ್‌ ನಡೆಯುತ್ತದೆ. ಕೊಬ್ಬರಿಯ ಉತ್ತಮ ವಹಿವಾಟು ಇರುವುದರಿಂದ ಒಳ್ಳೆಯ ಆದಾಯ ಬಂದು ಜಿಲ್ಲೆಯನ್ನು ಮತ್ತಷ್ಟು ಅಭಿವೃದ್ಧಿ ಪಡಿಸಬಹುದು.

ತಿಪಟೂರು ಜಿಲ್ಲಾ ಕೇಂದ್ರವಾದರೇ ಹುಳಿಯಾರು ಕೂಗಳತೆ ದೂರವಿರುವುದರಿಂದ ಜನರಿಗೆ ತುರ್ತು ಅಗತ್ಯಗಳು ಲಭಿಸುತ್ತವೆ. ವಾಸುದೇವಚಾರ್‌, ಹುಂಡೇಕರ್‌, ಗದ್ದಿಗೌಡರ ಮತ್ತು ಎಂ.ಪಿ.ಪ್ರಕಾಶ್‌ ಅವರು ಆಯೋಗಗಳು ಅಂತಿಮ ವರದಿ ನೀಡಿದ್ದರೂ ಈವರೆಗೆ ಪ್ರಯೋಜನವಾಗಿಲ್ಲ.

Spread the love
  • Related Posts

    ಬೆಳ್ತಂಗಡಿ : ಮೊಗ್ರು ಗ್ರಾಮ ಮುಗೇರಡ್ಕ ನೇತ್ರಾವತಿ ನದಿಯಲ್ಲಿ ಮೊಸಳೆ ಪತ್ತೆ🐊

    ಬೆಳ್ತಂಗಡಿ : ಮೊಗ್ರು ಗ್ರಾಮದ ಮುಗೇರಡ್ಕ ನೇತ್ರಾವದಿಗೆ ಸೇತುವೆ ಕಾಮಗಾರಿ ಭರದಿಂದ ಸಾಗುತಿದ್ದು ಇದರ ಪಕ್ಕದ ಮರಳಿನ ದಿಬ್ಬದಲ್ಲಿ ವಿಶ್ರಾಂತಿ ಪಡೆದ ರೀತಿಯಲ್ಲಿ ಅಕ್ಟೋಬರ್ 30 ರಂದು ಸಂಜೆ ಮೊಸಳೆ ಕಂಡು ಬಂದಿರುವ ಬಗ್ಗೆ ವರದಿಯಾಗಿದೆ. ಸೇತುವೆ ಕಾಮಗಾರಿಯಲ್ಲಿ ತೊಡಗಿರುವ ಕಾರ್ಮಿಕರು…

    Spread the love

    ಬೆಳ್ತಂಗಡಿ ದೀಪಾವಳಿ ದೋಸೆ ಹಬ್ಬದಂದು ತಡೆಯಾದ ಜೈ ಭಜರಂಗಿ ಬಲಿ ತುಳು ನಾಟಕ ನವೆಂಬರ್ 01 ರಂದು ಮತ್ತೊಮ್ಮೆ ಪ್ರದರ್ಶನ

    ಬೆಳ್ತಂಗಡಿ :(ಅ.29) ಬೆಳ್ತಂಗಡಿ ಬಿಜೆಪಿ ಯುವಮೋರ್ಚಾ ವತಿಯಿಂದ ದೀಪಾವಳಿ ಹಬ್ಬದ ಪ್ರಯುಕ್ತ ನಡೆದ 6ನೇ ವರ್ಷದ ದೋಸೆಹಬ್ಬ ಕಾರ್ಯಕ್ರಮದಲ್ಲಿ ಪ್ರದರ್ಶನ ನಡೆಯುತ್ತಿದ್ದ ವೇಳೆ ಕಾಂಗ್ರೆಸ್ ಸರ್ಕಾರವು ತಡೆಗೊಳಿಸಿದ ತುಳು ಸಾಮಾಜಿಕ ನೀತಿಬೋಧಕ ನಾಟಕ ಜೈ ಭಜರಂಗ ಬಲಿ ನಾಟಕ ಮತ್ತೊಮ್ಮೆ ಪ್ರದರ್ಶನಗೊಳ್ಳಲಿದೆ.…

    Spread the love

    You Missed

    ಬೆಳ್ತಂಗಡಿ : ಮೊಗ್ರು ಗ್ರಾಮ ಮುಗೇರಡ್ಕ ನೇತ್ರಾವತಿ ನದಿಯಲ್ಲಿ ಮೊಸಳೆ ಪತ್ತೆ🐊

    • By admin
    • October 31, 2025
    • 39 views
    ಬೆಳ್ತಂಗಡಿ : ಮೊಗ್ರು ಗ್ರಾಮ ಮುಗೇರಡ್ಕ ನೇತ್ರಾವತಿ ನದಿಯಲ್ಲಿ ಮೊಸಳೆ ಪತ್ತೆ🐊

    ಬೆಳ್ತಂಗಡಿ ದೀಪಾವಳಿ ದೋಸೆ ಹಬ್ಬದಂದು ತಡೆಯಾದ ಜೈ ಭಜರಂಗಿ ಬಲಿ ತುಳು ನಾಟಕ ನವೆಂಬರ್ 01 ರಂದು ಮತ್ತೊಮ್ಮೆ ಪ್ರದರ್ಶನ

    • By admin
    • October 29, 2025
    • 54 views
    ಬೆಳ್ತಂಗಡಿ ದೀಪಾವಳಿ ದೋಸೆ ಹಬ್ಬದಂದು ತಡೆಯಾದ ಜೈ ಭಜರಂಗಿ ಬಲಿ ತುಳು ನಾಟಕ  ನವೆಂಬರ್ 01 ರಂದು ಮತ್ತೊಮ್ಮೆ ಪ್ರದರ್ಶನ

    ಎಕ್ಸೆಲ್ ಬೆಳಕು ಯೋಜನೆಯಡಿ ಉಚಿತ ಶಿಕ್ಷಣಕ್ಕಾಗಿ ಅರ್ಜಿ ಆಹ್ವಾನ

    • By admin
    • October 29, 2025
    • 81 views
    ಎಕ್ಸೆಲ್ ಬೆಳಕು ಯೋಜನೆಯಡಿ ಉಚಿತ ಶಿಕ್ಷಣಕ್ಕಾಗಿ ಅರ್ಜಿ ಆಹ್ವಾನ

    ಲಯನ್ಸ್ ಇಂಟರ್ ನ್ಯಾಶನಲ್, ಲಯನ್ಸ್ ಕ್ಲಬ್ ಮತ್ತು ಲಿಯೋಕ್ಲಬ್ ಸಕಲೇಶಪುರ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ (ರಿ) ಸಕಲೇಶಪುರ, ಕೆ.ಎಂ.ಸಿ ಆಸ್ಪತ್ರೆ ಮಂಗಳೂರು, ಸಂಸ್ಕೃತಿ ಕಾರ್ಡಿಯಾಕ್ ಸೆಂಟರ್ ಇದರ ವತಿಯಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರ

    • By admin
    • October 25, 2025
    • 29 views

    ಕನ್ಯಾಡಿ ಸೇವಾಭಾರತಿಯಿಂದ 7 ಮಂದಿ ಬೆನ್ನುಹುರಿ ಅಪಘಾತಕ್ಕೊಳಗಾದ ದಿವ್ಯಾಂಗರಿಗೆ ಗಾಲಿಕುರ್ಚಿ ವಿತರಣೆ:

    • By admin
    • October 25, 2025
    • 20 views
    ಕನ್ಯಾಡಿ ಸೇವಾಭಾರತಿಯಿಂದ 7 ಮಂದಿ ಬೆನ್ನುಹುರಿ ಅಪಘಾತಕ್ಕೊಳಗಾದ ದಿವ್ಯಾಂಗರಿಗೆ ಗಾಲಿಕುರ್ಚಿ ವಿತರಣೆ:

    ಕೆ. ವಿನಾಯಕ ರಾವ್ ರವರಿಗೆ ಉಡುಪಿ ಜಿಲ್ಲೆಯ ಹೋಂ ಡಾಕ್ಟರ್ ಫೌಂಡೇಶನ್ (ರಿ.), ವತಿಯಿಂದ ಸನ್ಮಾನ

    • By admin
    • October 25, 2025
    • 22 views
    ಕೆ. ವಿನಾಯಕ ರಾವ್ ರವರಿಗೆ ಉಡುಪಿ ಜಿಲ್ಲೆಯ ಹೋಂ ಡಾಕ್ಟರ್ ಫೌಂಡೇಶನ್ (ರಿ.), ವತಿಯಿಂದ ಸನ್ಮಾನ