ಭಾರಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಈ ಪ್ರವಾಸಿ ತಾಣಗಳಿಗೆ ಪ್ರವಾಸಿಗರ ಪ್ರವೇಶಕ್ಕೆ ನಿಷೇಧ

ಬೆಳ್ತಂಗಡಿ : ನರಸಿಂಹಗಡ ಕೋಟೆ (ಗಡಾಯಿಕಲ್ಲು), ಕಡಮಗುಂಡಿ, ಬೊಳ್ಳೆ, ಮತ್ತು ಬಂಡಾಜೆ ಜಲಪಾತ ಪ್ರವಾಸಿ ತಾಣಗಳಲ್ಲಿ ಪ್ರವಾಸಿಗರಿಗೆ ಮುಂದಿನ ಆದೇಶದ ವರೆಗೆ ಪ್ರವೇಶವನ್ನು ನಿಷೇದಿಸಿದ ಬೆಳ್ತಂಗಡಿ ವನ್ಯಜೀವಿ ವಿಭಾಗದಿಂದ ಆದೇಶ ಮಾಡಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವ್ಯಾಪಕ ಮಳೆಯಾಗುತ್ತಿದ್ದು ಹವಮಾನ ಇಲಾಖೆಯ ಮುನ್ಸೂಚನೆಯಂತೆ ರೆಡ್ ಅಲರ್ಟ್ ಘೋಷಣೆಯಾಗಿರುತ್ತದೆ. ಜಲಪಾತ ಪ್ರದೇಶದ ಸುತ್ತಮುತ್ತ ತೀರಾ ಕಡಿದಾದ ಕಲ್ಲು ಬಂಡೆಗಳಿದ್ದು, ಘಾಟಿ ಪ್ರದೇಶದಲ್ಲಿ ವಿಪರೀತ ಮಳೆಯಾಗುತ್ತಿದು, ಎಲ್ಲಾ ನದಿ ಹಳ್ಳಗಳು ಉಕ್ಕಿ ಹರಿಯುತ್ತಿದ್ದು ಒಳ ಹರಿವು ಜಾಸ್ತಿ ಇರುವುದರಿಂದ ಪ್ರವಾಸಿಗರ ಚಾರಣಕ್ಕೆ ಅನಾನುಕೂಲ ಪರಿಸ್ಥಿತಿ ಉಂಟಾಗುತ್ತದೆ. ಈ ನಿಟ್ಟಿನಲ್ಲಿ ಬೆಳ್ತಂಗಡಿ ವನ್ಯಜೀವಿ ವಲಯದ ಕುದುರೆಮುಖ ರಾಷ್ಟ್ರೀಯ ಉದ್ಯಾನದ ವ್ಯಾಪ್ತಿಯಲ್ಲಿರುವ ನರಸಿಂಹಗಡ ಕೋಟೆ (ಗಡಾಯಿಕಲ್ಲು), ಕಡಮಗುಂಡಿ, ಬೊಳ್ಳೆ ಮತ್ತು ಬಂಡಾಜೆ ಜಲಪಾತಗಳಿಗೆ ಭೇಟಿ ನೀಡುವ ಪ್ರವಾಸಿಗರ ಸಂದರ್ಶನವನ್ನು ನಿಷೇಧಿಸುವುದು ಅವಶ್ಯವಾಗಿರುತ್ತದೆ.ಆದುದರಿಂದ ಮುಂಜಾಗ್ರತಾ ಕ್ರಮವಾಗಿ ಈ ಪ್ರದೇಶಗಳಿಗೆ ಭೇಟಿ ನೀಡುವ ಪ್ರವಾಸಿಗರ ಭದ್ರತಾ ಹಿತದೃಷ್ಟಿಯಿಂದ ಪ್ರವಾಸಿಗರ ಸಂದರ್ಶನವನ್ನು ಮುಂದಿನ ಆದೇಶದವರೆಗೆ ತಕ್ಷಣದಿಂದ ಜಾರಿಗೆ ಬರುವಂತೆ ನಿಷೇಧಿಸಿ ಮೇ.31 ರಂದು ಬೆಳ್ತಂಗಡಿ ವನ್ಯಜೀವಿ ವಿಭಾಗದ ವಲಯ ಅರಣ್ಯಾಧಿಕಾರಿ ಶರ್ಮಿಷ್ಠಾ ಆದೇಶ ಹೊರಡಿಸಿದ್ದಾರೆ.

Spread the love
  • Related Posts

    ಯುವಜನತೆ ದುಶ್ಚಟಗಳಿಂದ ದೂರವಿದ್ದು ಸ್ವಾಸ್ಥ್ಯ ಸಮಾಜ ನಿರ್ಮಾಣಕ್ಕೆ ಕೈಜೋಡಿಸಿ: ಡಾ.ನವೀನ್ ಚಂದ್ರ ಶೆಟ್ಟಿ

    ಸಕಲೇಶಪುರ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್, ಹಾಗೂ ಅಖಿಲ ಕರ್ನಾಟಕ ಜಿಲ್ಲಾ ಜನಜಾಗೃತಿ ವೇದಿಕೆ ಹಾಸನ ಜಿಲ್ಲೆ ಇದರ ವತಿಯಿಂದ, ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮವನ್ನು ತಾಲೂಕಿನ JSS ಕಾಲೇಜನಲ್ಲಿ ಹಮ್ಮಿಕೊಳ್ಳಲಾಯಿತು. ಜಿಲ್ಲಾ ಜನಜಾಗೃತಿ ವೇದಿಕೆ ಜಿಲ್ಲಾಧ್ಯಕ್ಷರಾದ…

    Spread the love

    ಉಜಿರೆ ರಬ್ಬರ್ ಟ್ಯಾಪರ್ ಮತ್ತು ಕೃಷಿ ಮಜ್ದೂರ್ ಸಂಘದಿಂದ ಸಂಸದರಾದ ಬ್ರಿಜೇಶ್ ಚೌಟ ಅವರಿಗೆ ಮನವಿ ಸಲ್ಲಿಕೆ

    Ujire: ರಬ್ಬರ್ ಮತ್ತು ಇತರ ಕೃಷಿ ಕಾರ್ಮಿಕರಿಗೆ ಹಾಗೂ ಸ್ವಂತ ತೋಟದ ಸ್ವಂತ ಬೆಳೆಗಾರ ಟ್ಯಾಪರ್ ಗಳಿಗೆ ರಬ್ಬರ್ ಮಂಡಳಿಯಿಂದ ಕೆಲವೊಂದು ಸೌಲಭ್ಯಗಳಿದ್ದು ಈ ಸೌಲಭ್ಯಗಳು ಅಲ್ಪ ಮಟ್ಟದ್ದಾಗಿದ್ದು ಇದನ್ನು ಹೆಚ್ಚು ಗೊಳಿಸುವಂತೆ ಹಾಗೂ ಕಾರ್ಮಿಕರಿಗೆ ಇನ್ನಿತರ ಸೌಲಭ್ಯಗಳನ್ನು ನೀಡುವಂತೆ ಮಾನ್ಯ…

    Spread the love

    You Missed

    ಯುವಜನತೆ ದುಶ್ಚಟಗಳಿಂದ ದೂರವಿದ್ದು ಸ್ವಾಸ್ಥ್ಯ ಸಮಾಜ ನಿರ್ಮಾಣಕ್ಕೆ ಕೈಜೋಡಿಸಿ: ಡಾ.ನವೀನ್ ಚಂದ್ರ ಶೆಟ್ಟಿ

    • By admin
    • December 2, 2025
    • 52 views
    ಯುವಜನತೆ ದುಶ್ಚಟಗಳಿಂದ ದೂರವಿದ್ದು ಸ್ವಾಸ್ಥ್ಯ ಸಮಾಜ ನಿರ್ಮಾಣಕ್ಕೆ ಕೈಜೋಡಿಸಿ: ಡಾ.ನವೀನ್ ಚಂದ್ರ ಶೆಟ್ಟಿ

    ಉಜಿರೆ ರಬ್ಬರ್ ಟ್ಯಾಪರ್ ಮತ್ತು ಕೃಷಿ ಮಜ್ದೂರ್ ಸಂಘದಿಂದ ಸಂಸದರಾದ ಬ್ರಿಜೇಶ್ ಚೌಟ ಅವರಿಗೆ ಮನವಿ ಸಲ್ಲಿಕೆ

    • By admin
    • December 1, 2025
    • 38 views
    ಉಜಿರೆ ರಬ್ಬರ್ ಟ್ಯಾಪರ್ ಮತ್ತು ಕೃಷಿ ಮಜ್ದೂರ್ ಸಂಘದಿಂದ ಸಂಸದರಾದ  ಬ್ರಿಜೇಶ್ ಚೌಟ ಅವರಿಗೆ ಮನವಿ ಸಲ್ಲಿಕೆ

    ಅಳದಂಗಡಿ ಶ್ರೀ ಸತ್ಯ ದೇವತೆ ದೇವಸ್ಥಾನಕ್ಕೆ ಬಿಜೆಪಿ ರಾಜ್ಯಾಧ್ಯಕ್ಷರಾದ ಬಿ. ವೈ. ವಿಜಯೇಂದ್ರ ಭೇಟಿ

    • By admin
    • November 28, 2025
    • 36 views
    ಅಳದಂಗಡಿ ಶ್ರೀ ಸತ್ಯ ದೇವತೆ ದೇವಸ್ಥಾನಕ್ಕೆ ಬಿಜೆಪಿ ರಾಜ್ಯಾಧ್ಯಕ್ಷರಾದ ಬಿ. ವೈ. ವಿಜಯೇಂದ್ರ ಭೇಟಿ

    ಉಜಿರೆ ಶ್ರೀ ಜನಾರ್ಧನ ಸ್ವಾಮಿ ದೇವಸ್ಥಾನಕ್ಕೆ ಬಿಜೆಪಿ ರಾಜ್ಯಾಧ್ಯಕ್ಷರಾದ ಬಿ. ವೈ. ವಿಜಯೇಂದ್ರರವರು ಭೇಟಿ

    • By admin
    • November 28, 2025
    • 32 views
    ಉಜಿರೆ ಶ್ರೀ ಜನಾರ್ಧನ ಸ್ವಾಮಿ ದೇವಸ್ಥಾನಕ್ಕೆ ಬಿಜೆಪಿ ರಾಜ್ಯಾಧ್ಯಕ್ಷರಾದ ಬಿ. ವೈ. ವಿಜಯೇಂದ್ರರವರು ಭೇಟಿ

    ರಾಷ್ಟ್ರ ಮಟ್ಟದ ವ್ಯಂಗ್ಯ ಭಾವಚಿತ್ರ ಸ್ಪರ್ಧೆಯಲ್ಲಿ ಉಜಿರೆ ಶೈಲೇಶ್‌ ಕುಮಾ‌ರ್ ರವರಿಗೆ ರಾಷ್ಟ್ರ ಮಟ್ಟದ ಪುರಸ್ಕಾರ

    • By admin
    • November 28, 2025
    • 41 views
    ರಾಷ್ಟ್ರ ಮಟ್ಟದ ವ್ಯಂಗ್ಯ ಭಾವಚಿತ್ರ ಸ್ಪರ್ಧೆಯಲ್ಲಿ ಉಜಿರೆ ಶೈಲೇಶ್‌ ಕುಮಾ‌ರ್ ರವರಿಗೆ ರಾಷ್ಟ್ರ ಮಟ್ಟದ ಪುರಸ್ಕಾರ

    ಕಡಲತಡಿ ಕೃಷ್ಣನಗರಿಗೆ ಪ್ರಧಾನಿ ಮೋದಿ ಆಗಮನ

    • By admin
    • November 28, 2025
    • 36 views
    ಕಡಲತಡಿ ಕೃಷ್ಣನಗರಿಗೆ ಪ್ರಧಾನಿ ಮೋದಿ ಆಗಮನ