ಉಡುಪಿ: ಹಂದಿ ಹಿಡಿಯಲು ಹಾಕಿದ್ದ ಉರುಳಿಗೆ ಚಿರತೆಯೊಂದು ಬಿದ್ದು ಸಾವನಪ್ಪಿರುವ ಘಟನೆ ಉಡುಪಿಯ ಹಿರೇಬೆಟ್ಟು ಗ್ರಾಮದ ಕಂಚಿನಬೈಲು ಎಂಬಲ್ಲಿ ನಡೆದಿದೆ.
ಸರಕಾರಿ ಜಾಗದಲ್ಲಿ ಹಂದಿ ಹಿಡಿಯಲು ತಂತಿ ಉರುಳನ್ನು ಮರಕ್ಕೆ ಕಟ್ಟಲಾಗಿತ್ತು, ಆ ದಾರಿಯಲ್ಲಿ ಬಂದ ಚಿರತೆ ಉರುಳು ಕಾಣದೆ, ಮೇಲಿನಿಂದ ತಗ್ಗಿಗೆ ಇಳಿಯುವಾಗ ಉರುಳಿನಲ್ಲಿ ಸಿಕ್ಕಿ ಹಾಕಿಕೊಂಡಿದೆ. ಉರಳು ಸೊಂಟಕ್ಕೆ ಬಿಗಿದು, ಚಿರತೆ ತಗ್ಗಿನಲ್ಲಿ ನೇತಾಡುತ್ತಾ, ನೆಲ ಮುಟ್ಟುವುದಕ್ಕೆ ಶತಪ್ರಯತ್ನ ಮಾಡಿ, ಸಾಧ್ಯವಾಗದೇ ಒದ್ದಾಡುತ್ತಾ ಅಲ್ಲಿಯೇ ಪ್ರಾಣ ಬಿಟ್ಟಿದೆ. ಮಾಹಿತಿ ತಿಳಿದು ಸ್ಥಳಕ್ಕೆ ಅರಣ್ಯಾಧಿಕಾರಿಗಳು ಆಗಮಿಸಿದ್ದು ಚಿರತೆಯನ್ನು, ಸ್ಥಳವನ್ನು ಮಹಜರು ಮಾಡಿದ್ದಾರೆ ಮತ್ತು ಇಲಾಖೆಯ ನಿಯಮಗಳಂತೆ ಚಿರತೆಯನ್ನು ಬೇರೆಡೆಗೆ ತೆಗೆದುಕೊಂಡು ಧಪನ ಮಾಡಿದ್ದಾರೆ.
ಸುಮಾರು 3 ತಿಂಗಳಿಂದ ಈ ಚಿರತೆ ಈ ಭಾಗದಲ್ಲಿ ಓಡಾಡುತಿತ್ತು, ಅನೇಕ ಸಾಕು ನಾಯಿಗಳನ್ನು ಕೊಂದು ತಿಂದಿದೆ, ಮಣಿಪಾಲದಿಂದ ಕಾರ್ಮಿಕರು ಸಂಜೆ ಈ ಭಾಗದಲ್ಲಿ ಮನೆಗೆ ಹಿಂತಿರುವಾಗ ಅನೇಕ ಮಂದಿಗೆ ಚಿರತೆ ಎದುರಾಗಿದೆ. ಇದರಿಂದ ಚಿರತೆ ಸ್ತಳಿಯರಲ್ಲಿ ಭೀತಿಗೂ ಕಾರಣವಾಗಿತ್ತು.