ಕೀರ್ತಿಶೇಷ ಶ್ರೀ ಲಕ್ಷ್ಮೀವರ ತೀರ್ಥ ಶ್ರೀಪಾದರ ಜನ್ಮದಿನದ ಪ್ರಯುಕ್ತ ವಿಶೇಷ ಪೂಜೆ…!

ಉಡುಪಿ: ಶ್ರೀಶಿರೂರು ಮಠದ ಕೀರ್ತಿಶೇಷ ಶ್ರೀ ಲಕ್ಷ್ಮೀವರತೀರ್ಥ ಶ್ರೀಪಾದರ 58ನೇ ಜನ್ಮದಿನ ಹಾಗೂ ಜನ್ಮ ನಕ್ಷತ್ರ ಕಾರ್ಯಕ್ರಮವನ್ನು ಉಡುಪಿ ಒಳಕಾಡಿನಲ್ಲಿರುವ ಶ್ರೀಲಕ್ಷ್ಮೀವರತೀರ್ಥ ಶ್ರೀಪಾದರ ಪೂರ್ವಾಶ್ರಮದ ಸಹೋದರರ ಮನೆಯಲ್ಲಿ ಸರಳ ರೀತಿಯಲ್ಲಿ ಆಚರಿಸಲಾಯಿತು.

ಶ್ರೀಪಾದರ ಜನ್ಮ ದಿನದ ಅಂಗವಾಗಿ ವಿಶೇಷ ಪಾರಾಯಣದೊಂದಿಗೆ ಶ್ರೀಪಾದರ ಮೃತ್ತಿಕಾ ವೃಂದಾವನಕ್ಕೆ ಅಭಿಷೇಕ ಸಹಿತ ಪೂಜೆಯನ್ನು ಸಲ್ಲಿಸಲಾಯಿತು. ಸಹೋದರ ಲಾಥವ್ಯ ಅಚಾರ್ಯ ಸೇರಿದಂತೆ ಕುಟುಂಬಿಕರು ಶ್ರೀಪಾದರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿದರು.

ಅಂತೆಯೇ ಕೇಮಾರು ಶ್ರೀ ಸಾಂದೀಪಿನಿ ಮಠದ ಶ್ರೀ ಈಶವಿಠಲದಾಸ ಸ್ವಾಮೀಜಿಯವರ ಕೇಮಾರು ಮಠದಲ್ಲಿ ಶ್ರೀಪಾದರ ಜನ್ಮದಿನದ ಪ್ರಯುಕ್ತ ವಿಶೇಷ ಪೂಜೆಯನ್ನು ಆಯೋಜಿಸಲಾಗಿತ್ತು. ಪೂಜಾ ನಂತರ ಶ್ರೀಪಾದರ ಭಾವ ಚಿತ್ರಕ್ಕೆ ಕೇಮಾರು ಶ್ರೀಪಾದರು ಆರತಿ ಬೆಳಗಿದರು.

ನಲವತ್ತೆಂಟು ವರ್ಷಗಳ ಕಾಲ ಶ್ರೀಕೃಷ್ಣ ಶ್ರೀವಿಠಲ ಮುಖ್ಯ ಪ್ರಾಣದೇವರಿಗೆ ಪೂಜೆ ಸಲ್ಲಿಸಿ ಮೂರು ಪರ್ಯಾಯವನ್ನು ವೈಭವದಲ್ಲಿ ನೆರವೇರಿಸಿದ ಶಿರೂರು ಶ್ರೀಪಾದರು ಧಾರ್ಮಿಕವಾಗಿ ಸಾಮಾಜಿಕವಾಗಿ ಸಾಂಸ್ಕೃತಿಕವಾಗಿ ಬಹುವಿಧದ ಕೊಡುಗೆಗಳನ್ನು ಸಮಾಜಕ್ಕೆ ಸಲ್ಲಿಸಿದವರು. ದೀನದಲಿತರು ಬಡಬಗ್ಗರು ಕಲಾವಿದರ ಬಗ್ಗೆ ಶಿರೂರು ಶ್ರೀಪಾದರಿಗಿದ್ದ ಕಾಳಜಿ ಸ್ಮರಣೀಯ. ಕರೋನಾದ ಈ ಸಂಕಷ್ಟ ಕಾಲದಲ್ಲಿ ಅವರು ಇರುತ್ತಿದ್ದರೆ ತಕ್ಷಣ ಸ್ಪಂದಿಸಿ ಸಹಸ್ರಾರು ಮಂದಿಗೆ ಸಹಾಯದ ಹಸ್ತ ಚಾಚಿ ಉಪಕರಿಸುತ್ತಿದ್ದರು ಎಂದು ಕೇಮಾರು ಶ್ರೀ ಈಶವಿಠಲದಾಸ ಸ್ವಾಮೀಜಿಯವರು ಶಿರೂರು ಶ್ರೀಪಾದರ ಸೇವೆಯನ್ನು ಸ್ಮರಿಸಿದರು.

ಇದೇ ಸಂದರ್ಭದಲ್ಲಿ ಉಡುಪಿ ಗಾಂಧಿ ಆಸ್ಪತೆಯ ಕೋರೋನ ವಾರಿಯರ್ಸ್ ಗೆ ಹಾಗೂ ಸಿಬ್ಬಂದಿಗಳಿಗೆ ಶಿರೂರು ಶ್ರೀಪಾದರ ಪೂರ್ವಾಶ್ರಮದ ಬಂಧುಗಳಿಂದ ಆಹಾರ ಕಿಟ್ ವಿತರಿಸಲಾಯಿತು.
ಗಾಂಧಿ ಆಸ್ಪತ್ರೆಯ ಡಾ.ಹರಿಶ್ಚಂದ್ರ, ಡಾ.ವ್ಯಾಸರಾಜ ತಂತ್ರಿ ಡಾ.ವಿದ್ಯಾ ತಂತ್ರಿ ಹಾಗೂ ಶಿರೂರು ಶ್ರೀಪಾದರ ಪೂರ್ವಾಶ್ರಮದ ಸಹೋದರರು ಸಹಿತ ಕುಟುಂಬದ ಅನೇಕರು ಉಪಸ್ಥಿತರಿದ್ದರು.
ಲಾಕ್ ಡೌನ್ ನಿಮಿತ್ತ ಸರಳ ರೀತಿಯಲ್ಲಿ ಕಾರ್ಯಕ್ರಮ ನಡೆದಿತ್ತು.

Spread the love
  • Related Posts

    ಎಳ್ಳು ಬೆಲ್ಲ ಸವಿಯುವ ಸಂಕ್ರಾಂತಿ ಹಬ್ಬದ ವೈಶಿಷ್ಟ್ಯ ಆಚರಣೆಗಳ ಮಹತ್ವ

    ದೈನಂದಿನ ಸಮಾಜಿಕ ಧಾರ್ಮಿಕ ಜೀವನದಲ್ಲಿ ಹಾಸುಹೊಕ್ಕಾಗಿ ಸೇರಿಕೊಂಡಿರುವಂತಹದ್ದೆ “ಹಬ್ಬಗಳು”. ಇಡೀ ಮನುಷ್ಯ ಸಮೂಹಕ್ಕೆ ಸಂತೋಷ, ಸಡಗರ ಸಹಜ ಪ್ರೀತಿಯ ವಿಷಯವಾಗಿರುವುದೇ ಹಬ್ಬಗಳು. ಇಂದಿನ ಆಧುನಿಕ ಒತ್ತಡಯುಕ್ತ ಜೀವನದಲ್ಲಿ ತೊಡಗಿದ್ದಾಗಲೂ, ಹಬ್ಬಹರಿದಿನಗಳ ಬಗೆಗಿನ ಆಸಕ್ತಿಯು ಕಳೆದುಕೊಂಡಿಲ್ಲದ್ದನ್ನು ಕಾಣಬಹುದು. ಹಬ್ಬವೆಂಬುದು ಕೆಲವೇ ಧರ್ಮ ಸಂಪ್ರದಾಯಕ್ಕೆ…

    Spread the love

    ಬೆಳ್ತಂಗಡಿ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ಚೈತ್ರೇಶ್ ಇಳಂತಿಲ ಆಯ್ಕೆ

    ಬೆಳ್ತಂಗಡಿ: ಬೆಳ್ತಂಗಡಿ ತಾಲೂಕು ಪತ್ರಕರ್ತರ ಸಂಘದ ಮಹಾಸಭೆ ಜ.5 ರಂದು ಸಂಘದ ಕಚೇರಿಯಲ್ಲಿ ನಡೆದು 2024 ನೇ ಸಾಲಿಗೆ ಪದಾಧಿಕಾರಿಗಳ ಆಯ್ಕೆ ನಡೆಯಿತು. ಅಧ್ಯಕ್ಷರಾಗಿ ಉದಯವಾಣಿ ವರದಿಗಾರ ಚೈತ್ರೇಶ್ ಇಳಂತಿಲ, ಉಪಾಧ್ಯಕ್ಷರಾಗಿ ವಾರ್ತಾಭಾರತಿ ವರದಿಗಾರ ಶಿಬಿ ಧರ್ಮಸ್ಥಳ, ಕಾರ್ಯದರ್ಶಿಯಾಗಿ ಪ್ರಜಾವಾಣಿ ವರದಿಗಾರ…

    Spread the love

    You Missed

    ಕಟ್ಟಡ ಟೆಂಡರ್ ನಲ್ಲಿ ಆಗುತ್ತಿರುವ ಭ್ರಷ್ಟಾಚಾರ ಹಾಗೂ ಕಟ್ಟಡ ನಿರ್ಮಾಣ ಕಾರ್ಮಿಕರಿಗೆ ಮರಳು, ಕೆಂಪುಕಲ್ಲು ಪೂರೈಕೆಯಲ್ಲಿ ಉಂಟಾದ ತೊಡಕುಗಳ ಕುರಿತು ಭಾರತೀಯ ಮಜ್ದೂರ್ ಸಂಘದ ವತಿಯಿಂದ ಸಮಾಲೋಚನಾ ಸಭೆ ಹಾಗೂ ಮನವಿ ಸಲ್ಲಿಕೆ

    • By admin
    • June 30, 2025
    • 368 views
    ಕಟ್ಟಡ  ಟೆಂಡರ್ ನಲ್ಲಿ ಆಗುತ್ತಿರುವ ಭ್ರಷ್ಟಾಚಾರ ಹಾಗೂ ಕಟ್ಟಡ ನಿರ್ಮಾಣ ಕಾರ್ಮಿಕರಿಗೆ ಮರಳು, ಕೆಂಪುಕಲ್ಲು ಪೂರೈಕೆಯಲ್ಲಿ ಉಂಟಾದ ತೊಡಕುಗಳ ಕುರಿತು ಭಾರತೀಯ ಮಜ್ದೂರ್ ಸಂಘದ ವತಿಯಿಂದ ಸಮಾಲೋಚನಾ ಸಭೆ ಹಾಗೂ ಮನವಿ ಸಲ್ಲಿಕೆ

    ಚಿರಂಜೀವಿ ಯುವಕ ಮಂಡಲ ಕಾನರ್ಪ ಇದರ 34ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣಾ ಸಮಿತಿಗೆ ಪದಾಧಿಕಾರಿಗಳ ಆಯ್ಕೆ

    • By admin
    • June 28, 2025
    • 305 views
    ಚಿರಂಜೀವಿ ಯುವಕ ಮಂಡಲ ಕಾನರ್ಪ ಇದರ 34ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣಾ ಸಮಿತಿಗೆ ಪದಾಧಿಕಾರಿಗಳ ಆಯ್ಕೆ

    ವಕೀಲರ ಸಂಘ (ರಿ ) ಬಂಟ್ವಾಳ ಇದರ ನೂತನ ಪದಾಧಿಕಾರಿಗಳ ಪದಗ್ರಹಣ

    • By admin
    • June 26, 2025
    • 204 views
    ವಕೀಲರ ಸಂಘ (ರಿ ) ಬಂಟ್ವಾಳ ಇದರ ನೂತನ ಪದಾಧಿಕಾರಿಗಳ ಪದಗ್ರಹಣ

    ಭಾರಿಮಳೆಗೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಗುಡ್ಡ ಕುಸಿತ, ಶಿರಾಡಿ ಘಾಟ್ ನಲ್ಲಿ ವಾಹನ ಸಂಚಾರ ಬಂದ್

    • By admin
    • June 26, 2025
    • 302 views
    ಭಾರಿಮಳೆಗೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಗುಡ್ಡ  ಕುಸಿತ, ಶಿರಾಡಿ ಘಾಟ್ ನಲ್ಲಿ ವಾಹನ ಸಂಚಾರ ಬಂದ್

    ಮುಂದುವರಿದ ವರುಣಾರ್ಭಟ ಬೆಳ್ತಂಗಡಿ ತಾಲೂಕಿನ ಶಾಲೆಗಳಿಗೆ ಜೂನ್ 26 ಗುರುವಾರ ರಜೆ: ತಹಶಿಲ್ದಾರ್ ಫೋಷಣೆ

    • By admin
    • June 25, 2025
    • 162 views
    ಮುಂದುವರಿದ ವರುಣಾರ್ಭಟ ಬೆಳ್ತಂಗಡಿ ತಾಲೂಕಿನ  ಶಾಲೆಗಳಿಗೆ ಜೂನ್ 26 ಗುರುವಾರ ರಜೆ: ತಹಶಿಲ್ದಾರ್ ಫೋಷಣೆ

    ಹಾಸನದ ಸಕಲೇಶಪುರ ಎಡಕುಮೇರಿ ಎಂಬಲ್ಲಿ ರೈಲು ಹಳಿಗಳ ಮೇಲೆ ಬಿದ್ದ ಬಂಡೆ ಕಲ್ಲುಗಳು ರೈಲು ಸಂಚಾರದಲ್ಲಿ ವ್ಯತ್ಯಯ

    • By admin
    • June 21, 2025
    • 90 views
    ಹಾಸನದ ಸಕಲೇಶಪುರ ಎಡಕುಮೇರಿ ಎಂಬಲ್ಲಿ ರೈಲು ಹಳಿಗಳ ಮೇಲೆ ಬಿದ್ದ ಬಂಡೆ ಕಲ್ಲುಗಳು ರೈಲು ಸಂಚಾರದಲ್ಲಿ ವ್ಯತ್ಯಯ