ಕೊಳ್ಳೆಗಾಲ : ಪ್ರೇಮಿಗಳ ದಿನ ಹತ್ತಿರ ಬರುತಿದ್ದಂತೆ ವಿದ್ಯಾರ್ಥಿಯೋರ್ವ ಬರೆದ ಪತ್ರ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲಾಗಿದೆ.
ಅಷ್ಟಕ್ಕೂ ಆ ವಿದ್ಯಾರ್ಥಿ ಬರೆದ ಪತ್ರದಲ್ಲಿ ಏನಿದೆ ಎಂದು ನೋಡೋದಾದರೆ “ಕಾಲೇಜಿನಲ್ಲಿ ಹುಡುಗಿಯರ ಕಾಟ ತಡೆಯೋಕೆ ಆಗಲ್ಲ ವ್ಯಾಲಟೈನ್ಸ್ ಡೇ ಗೆ 5 ದಿನಗಳ ಕಾಲ ನನಗೆ ರಜೆಯನ್ನು ಕೊಡಿ” ಎಂದು ಪತ್ರದ ಮೂಲಕ ಪ್ರಾಂಶುಪಾಲರಲ್ಲಿ ಬೇಡಿಕೊಂಡಿದ್ದಾನೆ.
ಕೊಳ್ಳೆಗಾಲದ ಮಹದೇಶ್ವರ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವಿದ್ಯಾಭ್ಯಾಸ ಮಾಡುತ್ತಿರುವ ಶಿವರಾಜು ಎಂಬಾತನೇ ಪತ್ರ ಬರೆದ ವಿದ್ಯಾರ್ಥಿಯಾಗಿದ್ದಾನೆ.
ಫೆಬ್ರವರಿ 14ರಂದು ಪ್ರೇಮಿಗಳ ದಿನ ಹೀಗಾಗಿ ನನಗೆ 5 ದಿನಗಳ ಕಾಲ ರಜೆಯನ್ನು ನೀಡಬೇಕೆಂದು ಶಿವರಾಜ್ ಪ್ರಾಂಶುಪಾಲರಿಗೆ ಪತ್ರವನ್ನು ಬರೆದಿದ್ದಾನೆ.
ಪತ್ರದಲ್ಲಿ ನನಗೆ ಹುಡುಗಿಯರ ಕಾಟ ತಡೆಯೋದಕ್ಕೆ ಆಗುತ್ತಿಲ್ಲ ಎಂದು ಕಾರಣ ಕೊಟ್ಟಿದ್ದಾನೆ. ತನಗೆ ದಯಮಾಡಿ ರಜೆಯನ್ನು ಮಂಜೂರು ಮಾಡಬೇಕೆಂದು ಪ್ರಾಂಶುಪಾಲರಿಗೆ ಪತ್ರದ ಮೂಲಕ ವಿನಂತಿಸಿ ಕೊಂಡಿದ್ದಾನೆ. ಅಲ್ಲದೇ ಪ್ರಾಂಶುಪಾಲರು ಕೂಡ ಶಿವರಾಜ್ ಗೆ ರಜೆ ಮಂಜೂರು ಮಾಡಿದ್ದಾರೆ.
ವಿದ್ಯಾರ್ಥಿ ಬರೆದ ವಿಶಿಷ್ಟ ರಜಾ ಅರ್ಜಿ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ. ಆದರೆ ಹುಡುಗನಿಗೆ ಹುಡುಗೀಯರು ಅದ್ಯಾವ ಪರಿ ಕಾಟ ಕೊಡ್ತಾರಪ್ಪಾ ಅಂತಾ ಜನ ಮಾತಾಡಿಕೊಳ್ತಿದ್ದಾರೆ. ಒಟ್ಟಿನಲ್ಲಿ ಪ್ರೇಮಿಗಳ ದಿನ ಸಮೀಪಿಸುತ್ತಿರೋ ಹೊತ್ತಲ್ಲೇ ವಿಶಿಷ್ಟ ರಜೆಯ ಪತ್ರ ಸಖತ್ ಸದ್ದು ಮಾಡ್ತಿದೆ.