ಬೆಂಗಳೂರು : ಮಾಜಿ ಸಚಿವ ವರ್ತೂರು ಪ್ರಕಾಶ್ ಕಿಡ್ನಾಪ್ ಕೇಸ್ಗೆ ಸಂಬಂಧಿಸಿದಂತೆ ಮತ್ತೋರ್ವ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ರೋಹಿತ್ ಎಂಬಾತನನ್ನು ಬಂಧಿಸಲಾಗಿದೆ. ಕೋಲಾರ ಗ್ರಾಮಾಂತರ ಠಾಣೆ ಪೊಲೀಸರಿಂದ ರೋಹಿತ್ ನ ಬಂಧನವಾಗಿದೆ. ಪ್ರಕರಣ ಸಂಬಂಧ ಪೊಲೀಸರು ಇದುವರೆಗೆ 6 ಮಂದಿ ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.
ಕೋಲಾರ ಬೆಗ್ಲಿಹೊಸಹಳ್ಳಿ ಬಳಿ ಮಾಜಿ ಸಚಿವ ವರ್ತೂರು ಪ್ರಕಾಶ್ ಕಾರು ಅಡ್ಡಗಟ್ಟಿದ್ದ 2 ಕಾರುಗಳಲ್ಲಿದ್ದ 8 ಮಂದಿ ದುಷ್ಕರ್ಮಿಗಳು, ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ, ವರ್ತೂರು ಪ್ರಕಾಶ್ ಹಾಗೂ ಚಾಲಕ ಸುನೀಲ್ ಅವರನ್ನ ಕಿಡ್ನಾಪ್ ಮಾಡಿದ್ದರು. ನವೆಂಬರ್ 25 ರಂದು ಘಟನೆ ನಡೆದಿತ್ತು. ಬಳಿಕ ನಯಾಜ್ ಎನ್ನುವವರಿಂದ 48 ಲಕ್ಷ ಹಣ ನೀಡಿದ ಬಳಿಕ, ವರ್ತೂರು ಪ್ರಕಾಶ್ರನ್ನು ಬಿಡುಗಡೆ ಮಾಡಿದ್ದಾಗಿ ಘಟನೆ ನಡೆದ ನಾಲ್ಕು ದಿನಗಳ ನಂತರ ವರ್ತೂರು ಪ್ರಕಾಶ್ ಬೆಂಗಳೂರಿನ ಬೆಳ್ಳಂದೂರಿನ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ, ತಮ್ಮ ಕಾರು ಪತ್ತೆಯಾದ ನಂತರ ದೂರು ನೀಡಿದ್ದರು.